– ಸ್ಥಳಾವಕಾಶ ಇಲ್ಲದ ಜಾಗದಲ್ಲಿ ಕಾರು ನುಸುಳಿಸಿದ ವ್ಯಕ್ತಿ
– ಸಿನಿಮೀಯ ರೀತಿಯಲ್ಲಿ ಅಪಘಾತ
ಬೆಂಗಳೂರು: ಸ್ಥಳಾವಕಾಶ ಇಲ್ಲದ ಜಾಗದಲ್ಲಿ ಕಾರು ನುಸುಳಿಸಿದ ಚಾಲಕ ರಸ್ತೆಯಲ್ಲಿ ನಿಂತಿರುವ ಮಹಿಳೆಗೆ ಗುದ್ದಿದ್ದಾನೆ. ಪ್ರಶ್ನೆ ಮಾಡಲು ಬಂದಿರುವ ವ್ಯಕ್ತಿ ಬಾನೆಟ್ ಮೇಲೆ ಏರಿದ್ರೂ ಕಾರ್ ನಿಲ್ಲಿಸಿದೇ ಚಲಾಯಿಸಿಕೊಂಡು ಹೋಗಿರುವ ಘಟನೆ ಯಲಹಂಕದ ನಾಗೇನಹಳ್ಳಿ ಗೇಟ್ ಬಳಿ ನಡೆದಿದೆ.
ಒನ್‍ವೇ ರಸ್ತೆಯಲ್ಲಿ ಕಾರು ಚಲಾಯಿಸಿಕೊಂಡು ಬಂದಿರುವ ಚಾಲಕ ಮಹಿಳೆ ಗುದ್ದಿ, ಬಾನೆಟ್ ಮೇಲೆ ಹತ್ತಿದ ವ್ಯಕ್ತಿಯನ್ನು ಎಳೆದೊಯ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕಾರು ಚಾಲಕನ ವಿರುದ್ಧ ಬಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ವಿಡಿಯೋದಲ್ಲಿ ಏನಿದೆ?
ಯಲಹಂಕದ ನಾಗೇನಹಳ್ಳಿ ಗೇಟ್‍ನ ದೊಡ್ಡಬಳ್ಳಾಪುರ, ಯಲಹಂಕ ಹೆದ್ದಾರಿಯಲ್ಲಿ ಒನ್‍ವೇ ರಸ್ತೆಯಲ್ಲಿ ಕಾರು ಚಾಲಕನೊಬ್ಬ ಜಾಗ ಇಲ್ಲದೆ ಇದ್ದರು ಕಾರು ಮುಂದಕ್ಕೆ ಹೋಗಲು ಯತ್ನಿಸುತ್ತಾನೆ. ಇದರಿಂದ ಸಾಲುಗಟ್ಟಿ ನಿಂತ ವಾಹನ ಸವಾರರಿಗೆ ಕೆಲವು ಸಮಯ ಕಿರಿಕಿರಿ ಉಂಟಾಗಿದೆ.
ಕಾರು ಚಾಲಕ ಕಿರಿಯಾದ ಜಾಗದಲ್ಲಿ ಕಾರು ನುಗ್ಗಿಸಿ ಮತ್ತೊಂದು ಕಾರಿಗೆ ತಾಕಿಸಿದ್ದಾನೆ. ಇದಕ್ಕೆ ಕೋಪಗೊಂಡ ಮತ್ತೊಂದು ಕಾರಿನಲ್ಲಿರುವ ವ್ಯಕ್ತಿ ಈತನನ್ನು ಪ್ರಶ್ನೆ ಮಾಡಲು ಮುಂದಾಗಿದ್ದಾನೆ. ಭಯಗೊಂಡ ಕಾರಿನ ಚಾಲಕ ಆತನ ಮೇಲೆ ಕಾರನ್ನು ಚಲಾಯಿಸಿಕೊಂಡು ಎಳೆದೊಯ್ದಿದ್ದಾನೆ.
ಆತರವಾಗಿ ಕಾರನ್ನು ಹಿಂದಕ್ಕೆ ತೆಗೆದುಕೊಳ್ಳವ ಈ ವೇಳೆ ರಸ್ತೆ ಬದಿ ನಿಂತಿದ್ದ ಮಹಿಳೆಗೆ ಗುದ್ದಿದ್ದಾನೆ. ಕಾರನ್ನು ತಡೆಯಲು ಯತ್ನಿಸಿದ ವ್ಯಕ್ತಿ ಕಾರಿನ ಬಾನೆಟೆ ಹತ್ತಿದ್ದಾನೆ. ಭಯಗೊಂಡ ಚಾಲಕ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗಿದ್ದಾನೆ. ಇದರಿಂದ ವ್ಯಕ್ತಿ ರಸ್ತೆಯಲ್ಲಿ ಪಲ್ಟಿಯಾಗಿ ಬಿದ್ದಿದ್ದಾನೆ. ಅದೃಷ್ಟವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಾರು ಚಾಲಕ ರಭಸವಾಗಿ ಕಾರನ್ನು ಚಲಾಯಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.