6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಶ್ವಾಸಕೋಶ ಕೊಂಡೊಯ್ದ ದುಷ್ಕರ್ಮಿಗಳು!

Public TV
2 Min Read
1 16

– ಮಾಟ-ಮಂತ್ರಕ್ಕಾಗಿ ಬಾಲಕಿ ಬಲಿ
– ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುವಂತೆ ಯೋಗಿ ಸೂಚನೆ

ಲಕ್ನೊ: 6 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದ ದುಷ್ಕರ್ಮಿಗಳು ಆಕೆಯ ಮೃತ ದೇಹದಿಂದ ಶ್ವಾಸಕೋಶವನ್ನು ತೆಗೆದುಕೊಂಡು ಹೋಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ದೀಪಾವಳಿಯಂದು ರಾತ್ರಿ ಘಟಾಂಪುರ ಪ್ರದೇಶದಿಂದ ಆರು ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ಈಕೆ ದುಷ್ಕರ್ಮಿಗಳ ಕೈಗೆ ಸಿಕ್ಕಿ ಅತ್ಯಾಚಾರಕ್ಕೊಳಗಾಗಿ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದಿರುವ ದುಷ್ಕರ್ಮಿಗಳು ಶ್ವಾಸಕೋಶವನ್ನು ತೆಗೆದುಕೊಂಡಿದ್ದಾರೆ.

Police

ಈ ಅಪಾರದದಲ್ಲಿ ಅಂಕುಲ್ ಕುರಿಲ್ (20) ಮತ್ತು ಬೀರನ್ (31) ಆರೋಪಿಗಳನ್ನು ಬಂಧಿಸಲಾಗಿದೆ. ಆಕೆಯ ಶ್ವಾಸಕೋಶವನ್ನು ತೆಗೆಯಲು ಪ್ರಮುಖ ಪಿತೂರಿ ನಡೆಸಿರುವ ಪರಶುರಾಮ್ ಕುರಿಲ್ ಮಾಟಗಾತಿ ನೀಡಲು ಈ ಕೃತ್ಯ ಎಸಗಿದ್ದಾರೆ. ಪರುಶುರಾಮ್ ಮತ್ತು ಆತನ ಪತ್ನಿಯನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಬ್ರಜೇಶ್ ಶ್ರೀವಾಸ್ತವ ಹೇಳಿದ್ದಾರೆ.
Police Jeep

ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪರುಶುರಾಮ್, ಆರಂಭದಲ್ಲಿ ಪೊಲೀಸರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದನು. ಆದರೆ ತೀವ್ರವಾದ ವಿಚಾರಣೆಯನ್ನು ನಡೆಸಿದ ನಂತರ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಪರಶುರಾಮ್ ಅವರು 1999 ರಲ್ಲಿ ವಿವಾಹವಾಗಿದ್ದನು. ಆದರೆ ಇದೂವರೆಗೆ ಮಗು ಆಗಿರಲಿಲ್ಲ. ಬ್ಲ್ಯಾಕ್ ಮ್ಯಾಜಿಕ್ ಮಾಡಲು ಶ್ವಾಸಕೋಶವನ್ನು ತೆಗೆದುಕೊಂಡು ಹೋಗಲಾಗಿದೆ. ಇದು ಮಹಿಳೆ ಮಗುವಿಗೆ ಜನ್ಮ ನೀಡಲು ಸಹಾಯ ಮಾಡುತ್ತದೆ. ಹಾಗಾಗಿ ಬಾಲಕಿಯಯನ್ನು ಅಪಹರಿಸಿ ಅತ್ಯಾಚಾರ ನಡೆಸಿ ಕೊಲೆಗೈದಿದ್ದಾರೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Police Jeep 1 1 mediumಬಾಲಕಿಯನ್ನು ಅಪಹರಿಸಿ ಅವಳ ಶ್ವಾಸಕೋಶವನ್ನು ತೆಗೆಯುವಂತೆ ಪರಶುರಾಮ್ ತನ್ನ ಸೋದರಳಿಯ ಅಂಕುಲ್ ಮತ್ತು ಅವನ ಸ್ನೇಹಿತ ಬೀರನ್‍ನನ್ನು ಮನವೊಲಿಸಿದ್ದನು. ಒಂದು ದಿನ ಅತಿಯಾಗಿ ಕುಡಿದಿದ್ದ ಅಂಕುಲ್ ಮತ್ತು ಬೀರನ್ ರಾತ್ರಿ ಭದ್ರಾಸ್ ಗ್ರಾಮದಲ್ಲಿರುವ ತಮ್ಮ ಮನೆಯಿಂದ ಪಟಾಕಿ ಖರೀದಿಸಲು ಹೊರಟಿದ್ದಾಗ ಬಾಲಕಿಯನ್ನು ಅಪಹರಿಸಿದ್ದಾರೆ. ನಂತರ ಬಾಲಕಿಯನ್ನು ಹತ್ತಿರದ ಕಾಡಿಗೆ ಕರೆದೊಯ್ದು ಆಕೆಯನ್ನು ಕೊಲ್ಲುವ ಮೊದಲು ಅತ್ಯಾಚಾರ ಮಾಡಿದ್ದಾರೆ ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

rape sಆರೋಪಿಗಳ ಮೇಲೆ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಘೋರ ಅಪರಾಧವನ್ನು ಗಮನಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಸಂತ್ರಸ್ತೆಯ ಕುಟುಂಬಕ್ಕೆ ಐದು ಲಕ್ಷ ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *