ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಆಯ್ಕೆಯಾದ ಅಮೆರಿಕ ಅಧ್ಯಕ್ಷ ಜೊ ಬೈಡನ್, ಆಯ್ಕೆಯಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ದೀಪಾವಳಿ ಶುಭಾಶಯ ತಿಳಿಸಿದ್ದಾರೆ. ಇಂದಿನಿಂದ ಭಾರತ ಸೇರಿದಂತೆ ಜಗತ್ತಿನಲ್ಲಡೆ ದೀಪಾವಳಿ ಆಚರಿಸಲಾಗುತ್ತಿದೆ.
— Donald J. Trump (@realDonaldTrump) November 14, 2020
ಬೆಳಕಿನ ಹಬ್ಬ ದೀಪಾವಳಿಯಂದು ಸ್ನೇಹಿತರು, ಕುಟುಂಬಸ್ಥರು, ನೆರೆಹೊರೆಯವರು, ಸಮುದಾಯದವರು ಒಂದೆಡೆ ಸೇರಿ ಒಳ್ಳೆಯದರ ಬಗ್ಗೆ ಚಿಂತಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ. ಕತ್ತಲ ಮೇಲೆ ಬೆಳಕು, ಅಜ್ಞಾನದ ಮೇಲೆ ಜ್ಞಾನದ ಬೆಳಕು ಪಸರಿಸಲಿ ಎಂದು ಟ್ರಂಪ್ ಜನತೆಗೆ ದೀಪಾವಳಿ ಸಂದೇಶ ರವಾನಿಸಿದ್ದಾರೆ.
As diyas are lit throughout homes, workplaces, communities, and places of worship, their warmth reminds us of the hope and devotion that faith and tradition bring into our lives: US Presidential Message on #Diwali https://t.co/5LNgxfy2s9
— ANI (@ANI) November 14, 2020
ಡೊನಾಲ್ಡ್ ಟ್ರಂಪ್ 2019ರಲ್ಲಿ ಜನತೆಗೆ ದೀಪಾವಳಿಯ ಶುಭಾಶಯ ತಿಳಿಸಿದ್ದರು. ಅಂದು ವೀಡಿಯೋ ಶೇರ್ ಮಾಡಿಕೊಂಡಿದ್ದ ಟ್ರಂಪ್, ಪವಿತ್ರ ಪರಂಪರೆಗಳು ನಮ್ಮ ದೇಶವನ್ನು ಬಲಿಷ್ಠ ಮಾಡುತ್ತವೆ. ಜೊತೆಗೆ ಹಬ್ಬಗಳು ನಮ್ಮನ್ನು ಒಂದು ಮಾಡುತ್ತೇವೆ ಎಂದು ಬರೆದುಕೊಂಡಿದ್ದರು.
Happy #Diwali and Sal Mubarak! Doug Emhof and I wish everyone celebrating around the world a safe, healthy, and joyous new year: Kamala Harris, Vice President-Elect of the United States (File photo) pic.twitter.com/asbhn9K3nd
— ANI (@ANI) November 14, 2020
ಅಮೆರಿಕಾದ ಖ್ಯಾತ ಗಾಯಕಿ ಕಮ್ ನಟಿ ಮೇರಿ ಮಿಲ್‍ಬೆನ್, ಹಿಂದೂಗಳ ಓಂ ಜೈ ಜಗದೀಶ್ ಹರೇ ಹಾಡನ್ನು ಪ್ರಸ್ತುತಿ ಪಡಿಸಿದ್ದಾರೆ. ಪಿಂಕ್ ಬಣ್ಣದ ಲೆಹಂಗಾ, ಹಣೆಗೆ ಬಿಂದಿ ಇಟ್ಟುಕೊಂಡು ಅಪ್ಪಟ ಭಾರತೀಯ ಸಂಪ್ರದಾಯ ನಾರಿಯಂತೆ ಭಕ್ತಿ ಮರೆದಿದ್ದಾರೆ. ಭಾರತ ಅಂದ್ರೆ ನಂಗಿಷ್ಟ. ಅಲ್ಲಿನ ಭಾಷೆ, ಸಂಸ್ಕೃತಿ, ಸಿನಿಮಾ, ಸಂಗೀತ ತಮ್ಮ ಮೇಲೆ ಪ್ರಭಾವ ಬೀರಿದೆ ಎಂದು ಮಿಲ್‍ಬೆನ್ ಹೇಳಿದ್ದಾರೆ.