– 2 ಬಾರಿ ವಿಚಾರಣೆಗೆ ಹಾಜರಾಗಿರೋ ರಾಂಪಾಲ್ ಗೆಳತಿ
ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಗೆ ಎನ್‍ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಸಮನ್ಸ್ ನೀಡಿದೆ. ನವೆಂಬರ್ 13ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಬುಧವಾರ ಎನ್‍ಸಿಬಿ ಅಧಿಕಾರಿಗಳ ಮುಂದೆ ರಾಂಪಾಲ್ ಗೆಳತಿ ಗ್ಯಾಬ್ರಿಯೆಲಾ ಹಾಜರಾಗಿದ್ದರು. ಇಂದು ಸಹ ಮತ್ತೆ ಗ್ಯಾಬ್ರಿಯೆಲಾರನ್ನ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.
ನವೆಂಬರ್ 9ರಂದು ಮುಂಬೈನ ಬಾಂದ್ರಾ ನಿವಾಸದ ಮೇಲೆ ಎನ್‍ಸಿಬಿ ಅಧಿಕಾರಿಗಳು ನಡೆಸಿದ್ದರು. ಈ ವೇಳೆ ನಿಷೇಧಿತ ಮಾತ್ರೆಗಳು (ಡ್ರಗ್ಸ್) ಲಭ್ಯವಾಗಿರುವ ಬಗ್ಗೆ ವರದಿಯಾಗಿದೆ. ಮನೆಯಲ್ಲಿ ಸಿಕ್ಕ ವಸ್ತುಗಳ ಬಗ್ಗೆ ಅರ್ಜುನ್ ರಾಂಪಾಲ್ ಮತ್ತು ಗೆಬ್ರಿಯೆಲಾ ಸಮರ್ಪಕ ಉತ್ತರ ನೀಡದ ಹಿನ್ನೆಲೆ ಎನ್‍ಸಿವಿ ಸಮನ್ಸ್ ನೀಡಿ ವಿಚಾರಣೆಗೆ ಒಳಪಡಿಸುತ್ತಿದೆ. ಮನೆಯಲ್ಲಿ ಲಭ್ಯವಾಗಿರುವ ನಿಷೇಧಿತ ನಶೆ ಮಾತ್ರೆಗಳು ಹೇಗೆ ಬಂತು ಎಂಬುದರ ಕುರಿತು ರಾಂಪಾಲ್ ಉತ್ತರ ನೀಡಿಲ್ಲ ಎನ್ನಲಾಗಿದೆ. ದಾಳಿ ವೇಳೆ ಮೊಬೈಲ್ ಮತ್ತು ಲ್ಯಾಪ್‍ಟಾಪ್ ಸಹ ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಮಫ್ತಿಯಲ್ಲಿ ಎನ್‍ಸಿಬಿ ದಾಳಿ – ಡ್ರಗ್ಸ್ ಖರೀದಿಸುವಾಗ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಖ್ಯಾತ ನಟಿ
ಕೆಲ ದಿನಗಳ ಹಿಂದೆ ಗೆಬ್ರಿಯೆಲಾ ಸೋದರ ಅಗಿಸಿಲಾಓಸ್ ನನ್ನು ಪುಣೆಯ ಲೋನಾವಾಲಾ ಬಳಿ ಬಂಧಿಸಲಾಗಿತ್ತು. ಬಂಧಿತ ಅಗಿಸಿಲಾಓಸ್ ಬಾಲಿವುಡ್ ಅಂಗಳದ ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗ್ತಿದೆ. ಅಗಿಸಿಲಾಓಸ್ ಪೆಡ್ಲರ್ ಗಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿರುವ ಆರೋಪ ಸಹ ಕೇಳಿ ಬಂದಿದೆ. ಮೃತ ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿ ಮತ್ತು ಶೌವಿಕ್ ಜೊತೆ ಅಗಿಸಿಲಾಓಸ್ ನಿರಂತರ ಸಂಪರ್ಕದಲ್ಲಿದ್ದ ಮಾಹಿತಿ ಲಭ್ಯವಾದ ಹಿನ್ನೆಲೆ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಎನ್‍ಸಿಬಿ ವಿರುದ್ಧ ಹೈಕೋರ್ಟ್ ಮೊರೆ ಹೋದ ಸುಶಾಂತ್ ಮನೆ ಸಹಾಯಕ
Mumbai: Actor Arjun Rampal summoned by Narcotics Control Bureau on 13th November
NCB conducted a raid at his premises on November 9.
(file pic) pic.twitter.com/nt1lOhKHfw
— ANI (@ANI) November 12, 2020