ಶಿರಾ ಗೆಲುವಿನ ಬಳಿಕ ಬಸವ ಕಲ್ಯಾಣದತ್ತ ವಿಜಯೇಂದ್ರ ಪಯಣ

Public TV
1 Min Read
BY Vijayendra

ಬೆಂಗಳೂರು: ಶಿರಾ ಉಪ ಚುನಾವಣೆಯ ಗೆಲುವಿನ ಬಳಿಕ ಬಿಜೆಪಿ ಉಪಾಧ್ಯಕ್ಷ, ಸಿಎಂ ಬಿಎಸ್‍ವೈ ಪುತ್ರ ಬಿ.ವೈ.ವಿಜಯೇಂದ್ರ ಬಸವ ಕಲ್ಯಾಣದತ್ತ ಪ್ರಯಾಣ ಬೆಳೆಸಲಿದ್ದಾರೆ.

ಪಬ್ಲಿಕ್ ಟಿವಿಯ ಬಿಗ್ ಬುಲೆಟಿನ್ ನಲ್ಲಿ ಮಾತನಾಡಿದ ವಿಜಯೇಂದ್ರ, ಪಕ್ಷದ ರಾಜ್ಯಾಧ್ಯಕ್ಷರು ನಳಿನ್ ಕುಮಾರ್ ಕಟೀಲ್ ಆದೇಶದ ಮೇರೆಗೆ ನವೆಂಬರ್ 13ರಂದು ಬಸವ ಕಲ್ಯಾಣಕ್ಕೆ ತೆರಳುತ್ತಿದ್ದೇನೆ. ಅಲ್ಲಿಯ ಮುಖಂಡರು ಮತ್ತು ಕಾರ್ಯಕರ್ತರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದೇನೆ ಎಂದು ಹೇಳುವ ಮೂಲಕ ಮುಂದಿನ ಗುರಿ ಬಸವ ಕಲ್ಯಾಣ ಅನ್ನೋದನ್ನ ರಿವೀಲ್ ಮಾಡಿದರು.

BY Vijayendra 2.jpg

ಶಿರಾದಲ್ಲಿ ಎಲ್ಲರನ್ನ ಒಗ್ಗೂಡಿಸಿಕೊಂಡು ಚುನಾವಣೆಯನ್ನ ಎದುರಿಸಿದ್ದೇವೆ. ಶಿರಾದಲ್ಲಿ ಕಮಲ ಅರಳಿರೋದಕ್ಕೆ ತುಂಬಾನೇ ಸಂತೋಷವಾಗಿದೆ. ಶಿರಾ ಗೆಲವು ಬಿಜೆಪಿ ಜಾತಿ ರಾಜಕಾರಣ ಮಾಡಲ್ಲ ಎಂಬುದನ್ನ ಮತ್ತೊಮ್ಮೆ ಸಾಬೀತು ಮಾಡಿದೆ. ಶಿರಾ ಕ್ಷೇತ್ರದ ಎಲ್ಲ ಸಮುದಾಯ ಜನರು ಬಿಜೆಪಿಯ ಕೈ ಹಿಡಿದು ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಶಿರಾದ ಯುವ ಜನತೆ ಮತ್ತು ಮಹಿಳೆಯರು ನೀಡಿದ ಬೆಂಬಲದಿಂದ ಬಿಜೆಪಿ ಇಷ್ಟು ದೊಡ್ಡ ಅಂತರದಿಂದ ಗೆಲುವು ದಾಖಲಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

by vijayendra

ಬಸವ ಕಲ್ಯಾಣದ ಕಾಂಗ್ರೆಸ್ ಶಾಸಕರಾಗಿದ್ದ ಬಿ.ನಾರಾಯಣ್ ರಾವ್ ಸೆಪ್ಟೆಂಬರ್ ನಲ್ಲಿ ಕೊರೊನಾದಿಂದ ನಿಧನ ಹೊಂದಿದ್ದರು. ಹೀಗಾಗಿ ಬಸವಕಲ್ಯಾಣಕ್ಕೆ ಉಪ ಚುನಾವಣೆ ನಡೆಯಲಿದೆ. ಇತ್ತು ಕಾಂಗ್ರೆಸ್ ನಿಂದ ಬಿಜೆಪಿ ಸೇರಿದ್ದ ಪ್ರತಾಪ್ ಗೌಡ ಪಾಟೀಲ್ ರಾಜೀನಾಮೆಯಿಂದ ತೆರವಾಗಿರುವ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೂ ಉಪ ಚುನಾವಣೆ ದಿನಾಂಕ ಶೀಘ್ರದಲ್ಲಿಯೇ ಘೋಷಣೆ ಆಗುವ ಸಾಧ್ಯತೆಗಳಿವೆ.

Share This Article
Leave a Comment

Leave a Reply

Your email address will not be published. Required fields are marked *