ಬೆಂಗಳೂರು: ಇಂದು ಕರ್ನಾಟಕದಲ್ಲಿ 3,377 ಮಂದಿಗೆ ಸೋಂಕು ಬಂದಿದ್ದು, 8,045 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು 34 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ 8,35,773ಕ್ಕೆ ಏರಿಕೆಯಾಗಿದೆ. ಈ ಪೈಕಿ 7,88,780 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ರಾಜ್ಯದಲ್ಲಿ ಒಟ್ಟು 35,693 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ ಒಟ್ಟು 11,281 ಮಂದಿ ಸೋಂಕಿಗೆ ಬಲಿಯಾಗಿದ್ದು, ಐಸಿಯುನಲ್ಲಿ 928 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು 27,458 ಮಂದಿಗೆ ಆಂಟಿಜನ್ ಟೆಸ್ಟ್, 75,045 ಮಂದಿಗೆ ಆರ್.ಟಿ.ಪಿ.ಸಿ.ಆರ್ ಇತ್ಯಾದಿ ಪರೀಕ್ಷೆ ಸೇರಿದಂತೆ ಒಟ್ಟು 1,02,503 ಜನರಿಗೆ ಕೋವಿಡ್-19 ಪರೀಕ್ಷೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 82,88,179 ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ.
ಬೆಂಗಳೂರು ನಗರದಲ್ಲಿ 1953 ಮಂದಿಗೆ, ತುಮಕೂರು 95, ಮೈಸೂರು 168, ಹಾಸನದಲ್ಲಿ 172 ಮಂದಿಗೆ ಸೋಂಕು ಬಂದಿದೆ. ಬೆಂಗಳೂರು ನಗರದಲ್ಲಿ 464, ಬಳ್ಳಾರಿ 47, ತುಮಕೂರು 40, ಕೋಲಾರ 35 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.