ಬಾಂಗ್ಲಾದಲ್ಲಿ ಹಿಂದೂಗಳ ಮನೆಗೆ ಬೆಂಕಿ ಹಚ್ಚಿ ಧ್ವಂಸ

Public TV
2 Min Read
bangladesh flag

ಢಾಕಾ: ಬಾಂಗ್ಲಾದೇಶದಲ್ಲಿ ಮುಸ್ಲಿಮರು ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿ ಧ್ವಂಸ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

ಬಾಂಗ್ಲಾದೇಶದ ಕ್ಯುಮಿಲ್ಲಾ ನಗರದಲ್ಲಿ ಘಟನೆ ನಡೆದಿದ್ದು, ಮುಸ್ಲಿಂ ಧರ್ಮ ನಿಂಧಿಸಿ ಫೇಸ್ಬುಕ್‍ನಲ್ಲಿ ಪೋಸ್ಟ್ ಹಾಕಿರುವ ಕುರಿತು ವದಂತಿ ಹಿನ್ನೆಲೆ ಕೃತ್ಯ ಎಸಗಿರುವುದಾಗಿ ವರದಿಯಾಗಿದೆ. ಪ್ಯಾರಿಸ್‍ನಲ್ಲಿ ಶಿಕ್ಷಕನ ಶಿರಚ್ಛೇದನ ಮಾಡಿ, ಅಮಾನವೀಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ರನ್ನು ಫ್ರಾನ್ಸ್ ನಲ್ಲಿ ಬಾಂಗ್ಲಾದೇಶದ ವ್ಯಕ್ತಿಯೊಬ್ಬ ಶ್ಲಾಘಿಸಿದ್ದು, ಇದಾದ ಬಳಿಕ ಬಾಂಗ್ಲಾದೇಶಿ ಮುಸ್ಲಿಮರು ಹಿಂದೂಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.

bangladesh 2

ಭಾನುವಾರ ಕ್ಯುಮಿಲ್ಲಾದ ಮುರಾದ್‍ನಗರದ ಬಳಿ ಘಟನೆ ನಡೆದಿದೆ. ಬಾಂಗ್ರಾ ಬಜಾರ್ ಪೊಲೀಸ್ ಠಾಣೆಯ ಒಸಿ ಕಮ್ರುಜ್ಮಾನ್ ತಾಲೂಕ್‍ದಾರ್ ಈ ಕುರಿತು ಮಾಹಿತಿ ನೀಡಿದ್ದು, ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದಂತೆ ಶಿಶುವಿಹಾರ ಶಾಲೆಯ ಮುಖ್ಯ ಶಿಕ್ಷಕ ಪ್ಯುರ್ಬು ಧೌರ್ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಮ್ಯಾಕ್ರಾನ್‍ನ ಕ್ರಮವನ್ನು ಮುಖ್ಯ ಶಿಕ್ಷಕ ಸ್ವಾಗತಿಸಿದ್ದಕ್ಕೆ ಈ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದೆ ಎಂದು ವರದಿಯಾಗಿದೆ. ಕ್ಯುಮಿಲ್ಲಾ ಡಿಸಿ ಎಂಡಿ ಅಬುಲ್ ಫಜಲ್ ಮಿರ್ ಹಾಗೂ ಎಸ್‍ಪಿ ಸೈಯದ್ ನೂರುಲ್ ಇಸ್ಲಾಂ ಸ್ಥಳಕ್ಕೆ ಭೇಟಿ ನೀಡಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಮಿರ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಎಂಡಿ ಅಬುಲ್ ಫಜಲ್ ಮಿರ್, ಸ್ಥಳೀಯರು ಮನೆಗಳಿಗೆ ಬೆಂಕಿ ಹಚ್ಚಿ ಧ್ವಂಸಗೊಳಿಸಿದ್ದಾರೆ. ಬಂಧನವಾದ ಇಬ್ಬರು ಸಹ ಈ ಕೃತ್ಯದಲ್ಲಿ ತೊಡಗಿದ್ದರು ಎಂದು ತಿಳಿಸಿದ್ದಾರೆ.

ದಾಳಿಕೋರರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ. ಘಟನೆಯ ವಿಡಿಯೋಗಳನ್ನು ಪರಿಶೀಲಿಸಲಾಗುತ್ತಿದ್ದು, ಅವರನ್ನು ಗುರುತಿಸಲಾಗುವುದು. ಪರಿಸ್ಥಿತಿಯನ್ನು ತಿಳಿಗೊಳಿಸಲಾಗುತ್ತಿದ್ದು, ಕರ್ಬನ್‍ಪುರ ಹಾಗೂ ಆಂಡಿಕೋಟ್ ಗ್ರಾಮಗಳಲ್ಲಿ ನಾಲ್ಕು ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದೆ. ಡಿಜಿಟಲ್ ಸೆಕ್ಯೂರಿಟಿ ಕಾಯ್ದೆಯಡಿ ಮುಖ್ಯ ಶಿಕ್ಷಕ ಹಾಗೂ ಇತರರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

32912wide

ಘಟನೆಗೆ ಕಾರಣವೇನು?
ಫ್ರಾನ್ಸ್‍ನಲ್ಲಿ ವಿಡಂಬನಾತ್ಮಕ ಪತ್ರಿಕೆ ಚಾರ್ಲಿ ಹೆಬ್ಡೊ ತನ್ನ ವ್ಯಂಗ್ಯಚಿತ್ರಗಳಲ್ಲಿ ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಚಿತ್ರ ಪ್ರಕಟಿಸಿದ್ದಕ್ಕೆ ಮುಸ್ಲಿಮರು ಸಿಟ್ಟಿಗೆದ್ದು ಕೃತ್ಯ ಎಸಗಿದ್ದಾರೆ. ವಾಕ್‍ಚಾತುರ್ಯದ ಕುರಿತು ತರಗತಿಯ ಚರ್ಚೆಯಲ್ಲಿ ಪ್ರವಾದಿ ಮೊಹಮ್ಮದ್ ಅವರ ವ್ಯಂಗ್ಯಚಿತ್ರಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿದ್ದ ಸ್ಯಾಮ್ಯುಯೆಲ್ ಪ್ಯಾಟಿ ಅವರನ್ನು 18 ವರ್ಷದ ಚೆಚೆನ್ ಅಕ್ಟೋಬರ್ 16 ರಂದು ಶಿರಚ್ಛೇದ ಮಾಡಿದ್ದ.

Police Jeep

ಈ ಭೀಕರ ಘಟನೆ ಬಳಿಕ ಫ್ರಾನ್ಸ್‍ನಲ್ಲಿ ಅಭಿವ್ಯಕ್ತಿ ಸ್ವಾಂತತ್ರ್ಯದ ಅಡಿಯಲ್ಲಿ ರಕ್ಷಿಸುವುದಾಗಿ ಮ್ಯಾಕ್ರನ್ ಪ್ರತಿಜ್ಞೆ ಮಾಡಿದ್ದರು. ಇದಾದ ಬಳಿಕ ಅಕ್ಟೋಬರ್ 29ರಂದು ಟುನೀಷಿಯಾದ ವ್ಯಕ್ತಿಯೊಬ್ಬ ಚಾಕು ಹಿಡಿದು ಶಸ್ತ್ರಸಜ್ಜಿತನಾಗಿ, ಕುರಾನ್ ಪ್ರತಿಯನ್ನು ಹೊತ್ತೊಯ್ಯುತ್ತಿದ್ದ. ಈ ವೇಳೆ ಸಹ ಚರ್ಚ್‍ನಲ್ಲಿದ್ದ ಆರಾಧಕರ ಮೇಲೆ ಹಲ್ಲೆ ನಡೆಸಿ, ಮೂವರನ್ನು ಕೊಲೆ ಮಾಡಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *