– ಸತ್ತನೆಂದು ಪತಿಯನ್ನ ಕಾಡಿನಲ್ಲಿ ಎಸೆದು ಬಂದ್ಳು!
– ಮೂರು ದಿನದ ಬಳಿಕ ಬಂದ ಪತಿ ಹೇಳಿದ್ದು ಹಣದ ಕಥೆ
ಲಕ್ನೋ: ಪ್ರೇಮಿ ಜೊತೆ ಸೇರಿ ಪತಿಯ ಮರ್ಮಾಂಗಕ್ಕೆ ಆ್ಯಸಿಡ್ ಎರಚಿ ಕೊಲೆಗೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಬಾಂದನಲ್ಲಿ ನಡೆದಿದೆ. ಆ್ಯಸಿಡ್ ದಾಳಿ ಬಳಿಕ ಪತಿ ಸತ್ತನೆಂದು ತಿಳಿದು ಅರಣ್ಯದಲ್ಲಿ ಎಸೆದು ಮನೆ ಸೇರಿದ್ದಳು.
ಗಿರೀಶ್ (ಹೆಸರು ಬದಲಾಯಿಸಲಾಗಿದೆ) ಬಾಂದಾ ನಗರದಲ್ಲಿ ದಿನಗೂಲಿ ಕೆಲಸ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು. ಆದ್ರೆ ಎರಡು ದಿನಗಳಿಂದ ದಿಢೀರ್ ನಾಪತ್ತೆಯಾದ ಗಿರೀಶ್ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಇತ್ತ ಗಿರೀಶ್ ಪೋಷಕರು ಮಗ ಕಾಣದಿದ್ದಾಗ ಆತಂಕಗೊಂಡ ಸೊಸೆಯನ್ನ ಪ್ರಶ್ನಿಸಿದ್ದಾಗ ತನಗೇನೂ ಗೊತ್ತಿಲ್ಲ ಎಂದು ಹೇಳಿದ್ದಾಳೆ. ಇದನ್ನೂ ಓದಿ: ಇನಿಯನ ಜೊತೆ ಸೇರಿ ಗಂಡನ ಮರ್ಮಾಂಗಕ್ಕೆ ಆ್ಯಸಿಡ್ ಹಾಕಿದ ಪತ್ನಿ- ಕಾಮದಾಟದಲ್ಲಿ ತೊಡಗಿದ್ದ ಪತ್ನಿಯನ್ನ ಹಿಡಿದಿದ್ದ ಪತಿ
ಮೂರನೇ ದಿನ ಚಿತ್ರಕೂಟ ಅರಣ್ಯ ಪ್ರದೇಶದಲ್ಲಿ ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿ ಪತ್ತೆಯಾಗಿರುವ ಮಾಹಿತಿ ಗಿರೀಶ್ ಪೋಷಕರಿಗೆ ಲಭ್ಯವಾಗಿದೆ. ಸ್ಥಳಕ್ಕೆ ತೆರಳಿದಾಗ ಗಾಯಗೊಂಡಿರುವ ವ್ಯಕ್ತಿ ಗಿರೀಶ್ ಎಂಬ ವಿಚಾರ ತಿಳಿದಿದೆ. ಸದ್ಯ ಗಿರೀಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಪತ್ನಿ ಕಾನ್ಪುರದ ದೇಹಾತ್ ನಿವಾಸಿ ಪ್ರಧಾನ್ ಗುಪ್ತಾ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಅಕ್ರಮ ಸಂಬಂಧ ವಿಷಯ ತಿಳಿದ ಕೂಡಲೇ ತಪ್ಪು ಎಂದು ತಿಳಿ ಹೇಳಿದ್ದೆ. ಆದ್ರೆ ಪ್ರಧಾನ್ ಗುಪ್ತಾ ನಾನು ಸತ್ತರೆ ಎಲ್‍ಐಸಿ ಹಣ ಸಿಗುತ್ತೆ ಎಂದು ಆಸೆ ತೋರಿಸಿದ್ದನು. ಹಣದ ಆಸೆಗಾಗಿ ಆತನ ಜೊತೆ ಸೇರಿ ಕೃತ್ಯ ಎಸಗಿದ್ದಾಳೆ ಎಂದು ಗಿರೀಶ್ ಆರೋಪಿಸಿದ್ದಾರೆ.
ಮೂರು ದಿನಗಳ ಹಿಂದೆ ಗಿರೀಶ್ ನನ್ನು ಪ್ರಿಯಕರನ ಊರಿಗೆ ಕರೆದುಕೊಂಡು ಹೋಗಿದ್ದಳು. ಅಲ್ಲಿ ಆತನ ಜೊತೆ ಸೇರಿ ನನ್ನನ್ನ ಥಳಿಸಿ, ಮರ್ಮಾಂಗಕ್ಕೆ ಆ್ಯಸಿಡ್ ಎರಚಿದರು. ನಾನು ಸತ್ತಿರಬಹುದು ಎಂದು ತಿಳಿದು ಅರಣ್ಯ ಪ್ರದೇಶದಲ್ಲಿ ನನ್ನನ್ನು ಎಸೆದು ಬಂದಿದ್ದರು ಎಂದು ಗಿರೀಶ್ ಹೇಳಿದ್ದಾರೆ.
ಗಿರೀಶ್ ಹೇಳಿಕೆಯನ್ನಾಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಓರ್ವ ಯುವಕ ಮತ್ತು ಮಹಿಳೆಯನ್ನ ಬಂಧಿಸಿದ್ದಾರೆ. ಆದ್ರೆ ಮಹಿಳೆ ಪ್ರಿಯಕರ ಎಸ್ಕೇಪ್ ಆಗಿದ್ದಾನೆ.