– ಮಹಿಳೆಯರ ವಿರುದ್ಧ ದೂರು ದಾಖಲಿಸಿದ ಮುಖಂಡ
ಲಕ್ನೋ: ಕಾಂಗ್ರೆಸ್ ಜಿಲ್ಲಾಧ್ಯಕ್ಷರೊಬ್ಬರನ್ನ ಮಹಿಳೆಯರು ಥಳಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಜಲೌನ್ ಜಿಲ್ಲಾಧ್ಯಕ್ಷ ಅನುಜ್ ಮಿಶ್ರಾ ಹಲ್ಲೆಗೊಳಗಾದ ಮುಖಂಡ.
ಮಹಿಳೆಯರು ಅನುಜ್ ತಮ್ಮ ಜೊತೆ ಫೋನ್ ನಲ್ಲಿ ಅಶ್ಲೀಲವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇತ್ತ ಘಟನೆಯ ಬಳಿಕ ಪ್ರತಿಕ್ರಿಯಿಸಿರುವ ಅನುಜ್ ಮಿಶ್ರಾ, ನನ್ನದು ಕಟ್ಟಡ ಉಪಕರಣಗಳ ಅಂಗಡಿ ಇದೆ. ಈ ಇಬ್ಬರು ಮಹಿಳೆಯರು ನಮ್ಮ ಅಂಗಡಿಯಿಂದ ಒಂದೂವರೆಯಿಂದ ಎರಡು ಲಕ್ಷ ರೂ. ಮೌಲ್ಯದ ವಸ್ತುಗಳನ್ನ ಖರೀದಿಸಿ ಹಣ ಪಾವತಿಸಿಲ್ಲ. ಹಣ ನೀಡುವಂತೆ ಹೇಳಿದ್ದಕ್ಕೆ ಸುಳ್ಳು ಆರೋಪಗಳನ್ನ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಅನುಜ್ ಮಿಶ್ರಾ ಮಹಿಳೆಯರಿಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಮಹಿಳೆಯರಿಬ್ಬರಿಗೂ ಸೂಚನೆ ನೀಡಲಾಗಿದೆ. ಸದ್ಯ ತನಿಖೆ ನಡೆಯುತ್ತಿದೆ ಎಂದು ಇನ್‍ಸ್ಪೆಕ್ಟರ್ ಸುಧಾಕರ್ ಮಿಶ್ರಾ ಹೇಳಿದ್ದಾರೆ.