ಸಿದ್ದರಾಮಯ್ಯನವರೇ ಕಾಗೆ ಕಟ್ಟಿದ ಗೂಡಲ್ಲಿ ಮೊಟ್ಟೆ ಇಡಲು ಹವಣಿಸುವ ಕೋಗಿಲೆಯ ಬುದ್ಧಿ ಏಕೆ?-ಬಿಜೆಪಿ

Public TV
1 Min Read
BJP Siddaramaiah

– ಸಿದ್ದರಾಮಯ್ಯ ಪ್ರಶ್ನೆಗೆ ಬಿಜೆಪಿ ಉತ್ತರ

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯನವರ ಪ್ರಶ್ನೆಗೆ ಕಾಗೆ ಕಟ್ಟಿದ ಗೂಡಲ್ಲಿ ಮೊಟ್ಟೆ ಇಡಲು ಹವಣಿಸುವ ಕೋಗಿಲೆಯ ಬುದ್ಧಿ ಏಕೆ ಎಂದು ಬಿಜೆಪಿ ತೀಕ್ಷ್ಣ ಉತ್ತರ ನೀಡಿದೆ.

ಮಾನ್ಯ ಸಿದ್ದರಾಮಯ್ಯನವರೇ, ದೇವೇಗೌಡರು ಬೆಳೆಸಿದ ಜೆಡಿಎಸ್‍ನಲ್ಲಿ ಸ್ಥಾನಮಾನ ಅನುಭವಿಸಿದಿರಿ. ಪರಮೇಶ್ವರ್ ಬೆಳೆಸಿದ ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿಯಾದಿರಿ. ಡಿಕೆಶಿ ಕಟ್ಟುತ್ತಿರುವ ಪಕ್ಷದಲ್ಲಿ ಮತ್ತೆ ಸಿಎಂ ಕನಸು ಕಾಣುತ್ತಿದ್ದೀರಿ. ಕಾಗೆ ಕಟ್ಟಿದ ಗೂಡಲ್ಲಿ ಮೊಟ್ಟೆ ಇಡಲು ಹವಣಿಸುವ ಕೋಗಿಲೆಯ ಬುದ್ಧಿ ಏಕೆ ಎಂದು ಬಿಜೆಪಿ ಮರು ಪ್ರಶ್ನೆ ಹಾಕಿದೆ.

ಸಿದ್ದರಾಮಯ್ಯ ಟ್ವೀಟ್: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂದು ಹೈಕಮಾಂಡ್ ಹಾಗೂ ಶಾಸಕರು ನಿರ್ಧರಿಸುತ್ತಾರೆ. ಕೆಲವರು ಅಭಿಮಾನದಿಂದ ಇವ್ರೆ ನಮ್ಮ ಮುಂದಿನ ಮುಖ್ಯಮಂತ್ರಿ ಅಂತ ಹೇಳ್ತಾರೆ. ಅವರಿಗೆಲ್ಲ ಮಾತಾಡ್ಬೇಡಿ ಅಂತ ಹೇಳೋಕಾಗುತ್ತಾ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

siddu dkshi

 

 

ಇಂದು ಆರ್.ಆರ್.ನಗರ ಕೈ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಮಾಜಿ ಸಚಿವ, ಜಮೀರ್ ಅಹ್ಮದ್ ಮತ್ತೆ ತಮ್ಮ ಹೇಳಿಕೆಯನ್ನ ಪುನರುಚ್ಛಿಸಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಲಿ ಎಂಬ ಜನರ ಅಭಿಪ್ರಾಯವನ್ನ ನಾನು ಹೇಳಿದ್ದೇನೆ. ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬ ನನ್ನ ಹೇಳಿಕೆ ಪಕ್ಷ ವಿರೋಧಿ ಚಟುವಟಿಕೆ ಆಗಲ್ಲ. ಆದರೆ ಕಾಂಗ್ರೆಸ್ ನಲ್ಲಿ ಹೈಕಮಾಂಡ್ ಸಿಎಂ ಯಾರಾಗಬೇಕು ಎಂಬುದನ್ನ ನಿರ್ಧರಿಸುತ್ತದೆ. ನನಗೆ ಶಿಸ್ತು ಕ್ರಮದ ನೋಟಿಸ್ ಕೊಟ್ಟರೆ ಅದಕ್ಕೆ ಉತ್ತರಿಸುತ್ತೇನೆ ಎಂದರು. ಇದನ್ನೂ ಓದಿ: ಬಿಎಸ್‍ವೈ, ಮೋದಿ ಅವರೇನು ಎಳೆ ಕಡಸುಗಳಾ?- ಸಿದ್ದರಾಮಯ್ಯ

siddu Param 2

ಬೈ ಎಲೆಕ್ಷನ್ ಬಳಿಕ ರಾಜ್ಯ ರಾಜಕೀಯ ಬದಲಾವಣೆ ಆಗಿ ಮತ್ತೆ ಚುನಾವಣೆ ಬರಬಹುದು. ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆ ನೋಡಿದ್ರೆ ಚುನಾವಣೆ ಬರುವ ಸಾಧ್ಯತೆ ಕಂಡು ಬರುತ್ತಿದೆ. ಆದರೆ ಜನಾಭಿಪ್ರಾಯದ ಜೊತೆಗೆ ನನ್ನ ವೈಯುಕ್ತಿಕ ಅಭಿಪ್ರಾಯವು ಮತ್ತೆ ಸಿದ್ದರಾಮಯ್ಯ ನವರೆ ಸಿಎಂ ಆಗಬೇಕು. ಹೈ ಕಮಾಂಡ್ ಕೇಳಿದರೂ ನಾನು ಸಿದ್ದರಾಮಯ್ಯತೇ ಸಿಎಂ ಆಗಬೇಕು ಅಂತ ಹೇಳ್ತೀನಿ ಎಂದಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆಗಬೇಕು ಅನ್ನೋದು ಜನರ ಅಭಿಪ್ರಾಯ: ಜಮೀರ್ ಅಹ್ಮದ್

Share This Article
Leave a Comment

Leave a Reply

Your email address will not be published. Required fields are marked *