ಶ್ರೀನಗರ: ಭಾರತದಲ್ಲಿ ಗಡಿಯಲ್ಲಿ ಬೇಹುಗಾರಿಕೆ ನಡೆಸಲು ಹಾಗೂ ಉಗ್ರರನ್ನ ಅಕ್ರಮವಾಗಿ ಗಡಿ ಒಳಗೆ ನುಸುಳಿಸಲು ಪ್ರಯತ್ನಿಸಿ ಪಾಕ್‍ನ ಕ್ವಾಡ್‌ಕಾಪ್ಟರ್‌ನ್ನು ಹೊಡೆದುರುಳಿಸಿರುವುದಾಗಿ ಭಾರತೀಯ ಸೇನೆ ತಿಳಿಸಿದೆ.
ಪಾಕಿಸ್ತಾನ ಕ್ವಾಡ್‍ಕಾಪ್ಟರ್ (ಹೆಲಿಕಾಪ್ಟರ್ ಮಾದರಿಯ ಡ್ರೋಣ್ ಸಾಧನ) ಚೀನಾದ ಡಿಜಿಐ ಮಾವಿಕ್ 2 ಕಂಪೆನಿ ತಯಾರಿಸಿದ್ದು, ಬೆಳಗ್ಗೆ 8 ಗಂಟೆ ಸಮಯದಲ್ಲಿ ಜಮ್ಮು ಕಾಶ್ಮೀರದ ಕೇರನ್ ಸೆಕ್ಟರ್ ನ ಭಾರತೀಯ ಸೇನೆ ಗಡಿಯಲ್ಲಿ ಹಾರಾಡುತ್ತಿದ್ದ ಕ್ವಾಡ್‌ಕಾಪ್ಟರ್‌ನ್ನು ಹೊಡೆದುರುಳಿಸಿದ್ದಾರೆ.
Photo of the Pakistan Amry quadcopter shot down by Indian Army this morning in the Keran Sector of Jammu and Kashmir. https://t.co/rIGPMTQbZ8 pic.twitter.com/CURyLDiGgX
— ANI (@ANI) October 24, 2020
ಭಯೋತ್ಪಾದಕರೊಳಗೆ ನುಸುಳಲು ಮತ್ತು ಭಾರತೀಯ ಸ್ಥಾವರಗಳ ಮಾಹಿತಿ ಕಲೆಹಾಕಲು ಪಾಕ್ ತನ್ನ ಕುತಂತ್ರಿ ತಂತ್ರವನ್ನು ಪ್ರದರ್ಶಿಸಿದ್ದು, ಭಾರತದ ಬಾರ್ಡರ್ ಆಕ್ಷನ್ ಟೀಂ (ಬ್ಯಾಟ್) ಗಡಿಯಲ್ಲಿ ಪಾಕ್ ಯತ್ನಗಳನ್ನು ವಿಫಲಗೊಳಿಸಿದೆ. ಅಲ್ಲದೇ ಗಡಿಯುದ್ದಕ್ಕೂ ತೀವ್ರ ಎಚ್ಚರಿಕೆ ವಹಿಸಿದೆ.
ಇತ್ತೀಚೆಗಷ್ಟೇ ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಸೇನಾ ಮುಖ್ಯ ಜನರಲ್ ಮನೋಜ್ ಮುಕುಂದ್, ಪಾಕಿಸ್ತಾನ ಭಯೋತ್ಪಾದಕರನ್ನು ಭಾರತದೊಳಗೆ ನುಸುಳಿಸುವ ಪ್ರಯತ್ನವನ್ನು ಮುಂದುವರಿಸುತ್ತಿದೆ ಎಂದು ಹೇಳಿದ್ದರು.