– ರಕ್ತದ ಮಡುವಿನಲ್ಲಿ ಸಂತ್ರಸ್ತೆಯರನ್ನ ಬಿಟ್ಟು ಎಸ್ಕೇಪ್
ಜೈಪುರ: ಅಪ್ರಾಪ್ತ ಸೋದರಿಯರನ್ನ ಅಪಹರಿಸಿದ ಆರು ಯುವಕರು ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದ ಜಾಲೋರ್ ಜಿಲ್ಲೆಯ ಭಿನ್ಮಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅತ್ಯಾಚಾರದ ಬಳಿಕ ಅಪ್ರಾಪ್ತ ಸೋದರಿಯರಿಬ್ಬರನ್ನು ಕಾಮುಕರು ಜಸ್ವಂತಪುರ ಕ್ಷೇತ್ರದ ರಾಜಪುರ ಸುಂಧಾಮಾತಾ ಬೆಟ್ಟದಲ್ಲಿ ಬಿಟ್ಟು ಹೋಗಿದ್ದಾರೆ. ರಕ್ತದ ಮಡುವಿನಲ್ಲಿದ್ದ ಬಾಲಕಿಯರನ್ನ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬಾಲಕಿಯರನ್ನ ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಈಕೆಯೇ ನನ್ನ ಮಗಳು, ಆದ್ರೆ ನನ್ನ ಪಾಲಿಗೆ ಸತ್ತಿದ್ದಾಳೆ – ಪುತ್ರಿಯನ್ನ ನೋಡಿ ಕಣ್ಣೀರಿಟ್ಟ ತಂದೆ– ಜೀವಂತವಾಗಿ ಬಂದ ಸುಂದರಿ ಹೇಳಿದ್ದು ಮೈ ನಡುಗಿಸೋ ಕೊಲೆ ಕಥೆ
ಮನೆಗೆ ನುಗ್ಗಿದ ಆರು ಜನರು ಇಬ್ಬರು ಬಾಲಕಿಯರನ್ನ ಅಪಹರಿಸಿದ್ದಾರೆ. ನಂತರ ಸುಂಧಾಮಾತಾ ಬೆಟ್ಟದಲ್ಲಿರುವ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನುಳಿದ ಆರೋಪಿಗಳ ಗುರುತು ಪತ್ತೆಯಾಗಿದ್ದು, ಬಂಧನಕ್ಕಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ. ಇದನ್ನೂ ಓದಿ: ಲವ್ ಮಾಡಿ ಗರ್ಭಿಣಿ ಮಾಡ್ದ, ಮದುವೆಯಾಗು ಎಂದಿದ್ದಕ್ಕೆ ಕೊಲೆಯೇ ಮಾಡ್ಬಿಟ್ಟ ಪಾಪಿ!