ವೈರಲ್ ಆಯ್ತು ಜೋಡಿಯ ವಿಚಿತ್ರ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್

Public TV
1 Min Read
Post Wedding Photoshoot 3

ತಿರುವನಂತಪುರಂ: ಕೊರೊನಾ ಕಾರಣದಿಂದ ಸರಳ ವಿವಾಹ ಮಾಡಿಕೊಳ್ಳುವ ಮೂಲಕ ಸೆ.16 ರಂದು ಕುಟುಂಬಸ್ಥರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿಯೊಂದು ಹಾಟ್ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಮೂಲಕ ಭಾರೀ ಚರ್ಚೆಗೆ ಕಾರಣವಾಗಿದೆ.

Post Wedding Photoshoot 1

ಮದುವೆ ಕಾರ್ಯಕ್ರಮ ಸರಳವಾಗಿ ಮಾಡಿಕೊಂಡ ಕಾರಣದಿಂದ ಪೋಸ್ಟ್ ವೆಡ್ಡಿಂಗ್‍ಶೂಟನ್ನು ವಿಶೇಷವಾಗಿ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದ ಕೇರಳದ ರಿಷಿ ಕಾರ್ತಿಕೇಯನ್, ಲಕ್ಷ್ಮಿ ಜೋಡಿ ಕ್ಯಾಮೆರಾ ಮುಂದೆ ಹಾಟ್ ಪೋಸ್ ನೀಡಿದ್ದರು. ಸದ್ಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ತಮ್ಮಿಬ್ಬರ ನಡುವಿನ ಪ್ರಣಯ ಬಂಧನವನ್ನು ಪ್ರತಿಬಿಂಬಿಸುವಂತೆ ಯುವ ಜೋಡಿ ಫೋಟೋಶೂಟ್ ನಡೆಸಿಕೊಂಡಿದೆ.

Post Wedding Photoshoot 2

ಫೋಟೋಶೂಟ್ ಬಳಿಕ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ದಂಪತಿ ಶೇರ್ ಮಾಡಿದ್ದಾರೆ. ಫೋಟೋಗಳನ್ನು ನೋಡಿದ ನೆಟ್ಟಿಗರು ಯುವ ಜೋಡಿಯ ವಿನೂತನ ಫೋಟೋಶೂಟ್ ಬಗ್ಗೆ ಟೀಕೆ ಮಾಡಿ ಟ್ರೋಲ್ ಮಾಡಿದ್ದಾರೆ. ಸಿನಿಮಾ ಸ್ಟ್ರೈಲ್‍ನಂತೆ ಫೋಟೋಶೂಟ್ ಮಾಡಿಸಿಕೊಂಡಿರುವ ಯುವ ಜೋಡಿಯನ್ನು ಪ್ರಶ್ನಿಸಿರುವ ಹಲವರು, ಇಂತಹ ಫೋಟೋಗಳಿಂದ ಯಾವ ಸಂದೇಶವನ್ನು ನೀಡುತ್ತಿದ್ದೀರಿ? ಮದುವೆಯ ಮಧುರ ನೆನಪುಗಳನ್ನು ಬಚ್ಚಿಟ್ಟುಕೊಳ್ಳುವುದಕ್ಕೆ ಇದಕ್ಕಿಂತ ಉತ್ತಮ ಅಲೋಚನೆ ಇಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

Post Wedding Photoshoot 5

ಇತ್ತ ತಮ್ಮ ಫೋಟೋಶೂಟ್ ವಿರುದ್ಧ ಕೇಳಿ ಬಂದ ಟೀಕೆಗಳಿಗೆ ತಿರುಗೇಟು ನೀಡಿರುವ ಯುವ ಜೋಡಿ, ಆಫ್ ಶೋಲ್ಡರ್ ಟಾಪ್ಸ್ ಧರಿಸುವ ಮಂದಿಗೆ ಇದು ಹೊಸತು ಎನಿಸಿಕೊಳ್ಳುವುದಿಲ್ಲ. ನಾವು ಏನು ತಪ್ಪು ಮಾಡಿದ್ದೇವೆ ಎಂದು ನಮ್ಮನ್ನು ನಿಂದಿಸುತ್ತಿದ್ದೀರಿ? ಫೋಟೋಶೂಟ್ ಸಂದರ್ಭದಲ್ಲಿ ನಾವು ತುಂಬಾ ಬಟ್ಟೆ ಧರಿಸಿದ್ದೆವು. ಆದರಲ್ಲೂ ಸಾರ್ವಜನಿಕ ಸ್ಥಳದಲ್ಲಿ ಚಿತ್ರೀಕರಣ ಮಾಡುತ್ತಿರುವಾಗ ಹೇಗೆ ಬಟ್ಟೆ ಧರಿಸದಿರುವುದು ಅಸಾಧ್ಯ. ಆದರೆ ಫೋಟೋಗ್ರಾಫರ್ ಆತನ ಸೃಜನಶೀಲತೆ ಹಾಗೂ ಕ್ಯಾಮೆರಾ ಕೌಶಲ್ಯಗಳಿಂದ ಉತ್ತಮ ಫೋಟೋ ಕ್ಲಿಕ್ಕಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ನೈತಿಕ ಪೊಲೀಸ್‍ಗಿರಿ ಮಾಡಲು ಪ್ರಾರಂಭಿಸಿದ್ದಾರೆ ಎಂದು ದೂರಿದ್ದಾರೆ.

Post Wedding Photoshoot 6

Share This Article
1 Comment

Leave a Reply

Your email address will not be published. Required fields are marked *