ಬೆಂಗಳೂರು: ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ಆಚರಣೆಯಲ್ಲಿರುವ ತುಂಬು ಗರ್ಭಿಣಿ ಪತ್ನಿ ಮೇಘನಾ ರಾಜ್ ಇಂದು ಪತಿ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಇದಕ್ಕೂ ಮೊದಲು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಚಿರುವನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತೇನೆ ಎಂದರೆ ಅದು ನನಗೊಬ್ಬಳಿಗೆ ಅಲ್ಲ ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಭಾವುಕರಾದರು.
ಇದೇ ವೇಳೆ ಮಗುವಿನ ವಿಚಾರ ಕೇಳಿದಾಗ, ಖಂಡಿತವಾಗಿ ಚಿರು ಮತ್ತೆ ಮಗುವಿನ ರೂಪದಲ್ಲಿ ಜನ್ಮ ತಾಳುತ್ತಾರೆ. ಆದರೆ ತಾನು ಯಾವಾಗ ಭೂಮಿಗೆ ಬರಬೇಕು ಎಂದು ಚಿರು ಅವರೇ ಇಚ್ಚಿಸಬೇಕು. ನಾನೇನೂ ಹೇಳಕ್ಕಾಗಲ್ಲ ಎಂದರು. ಚಿರು ಜನ್ಮದಿನದಂದ್ಲೇ ಭೂಮಿಗೆ ಬರಬೇಕು ಎಂಬುದು ಅಭಿಮಾನಿಗಳ ಆಶಯವಾಗಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಮೇಘನಾ, ಆದ್ರೂ ಆಗಬಹುದು ನನಗೆ ಗೊತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ನಿನ್ನ ತಂದೆ ಸದಾ ಸಂಭ್ರಮ ನೀಡುವವರು ಪುಟಾಣಿ – ಮೇಘನಾ ವೀಡಿಯೋ
ಅವಳಿ ಮಕ್ಕಳಾಗುತ್ತವೆ ಎಂಬ ಸುದ್ದಿ ಇದೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮೇಘನಾ, ನೋಡೋಣ.. ಆದರೂ ಆಗಬಹುದು ಎಂದು ನಕ್ಕರು. ಚಿರು ಕನಸಿನಂತೆ ಸೀಮಂತ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಮೇಘನಾ, ಚಿರು ಅವರ ಕನಸಿನಂತೆ ಧ್ರುವ ಹಾಗೂ ನಮ್ಮ ತಂದೆ-ತಾಯಿ ಒಟ್ಟಾರೆ ನಮ್ಮ ಕುಟುಂಬ ಅದನ್ನು ನನಸು ಮಾಡಿದೆ. ನನಗೆ ತುಂಬಾ ಖುಷಿಯಾಗಿದೆ. ಈ ಬಗ್ಗೆ ಚಿರುಗಂತೂ ಸಿಕ್ಕಾಪಟ್ಟೆನೆ ಖುಷಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಇದನ್ನೂ ಓದಿ: ಚಿರು ಹುಟ್ಟುಹಬ್ಬದ ದಿನವೇ ಜೂ.ಚಿರು ಜನನದ ಸುಳಿವು ನೀಡಿದ ಧ್ರುವ- ಸ್ಪೆಷಲ್ ವಿಡಿಯೋ
ನಿನ್ನೆ ಬಿಡುಗಡೆ ಮಾಡಿರುವ ವೀಡಿಯೋ ಬಗ್ಗೆ ಮಾತನಾಡಿದ ಅವರು, ಸೀಮಂತ ದಿನದಂದು ಮಾಡಿದ ವೀಡಿಯೋ ಅದಾಗಿದೆ. ಅದು ನನಗೆ ತುಂಬಾನೆ ಸ್ಪೆಷಲ್ ಡೇ ಆಗಿತ್ತು. ಎಲ್ಲರೂ ಒಟ್ಟು ಸೇರಿ ಮ್ಯಾಜಿಕಲ್ ಆಗಿ ಮಾಡಿದ್ರು. ಹೀಗಾಗಿ ಅದು ತುಂಬಾನೇ ಸ್ಪೆಷಲ್ ವೀಡಿಯೋ ಆಗಿದೆ ಎಂದು ತಿಳಿಸಿದರು.