– ಹಣ ಕದ್ದು ಹೊಲದಲ್ಲಿ ಬಚ್ಚಿಟ್ಟ
ರಾಯ್ಪುರ: ಪ್ರೇಯಸಿ ಖುಷಿಗಾಗಿ ಬ್ಯಾಂಕಿಗೆ ಕನ್ನ ಹಾಕಿದ್ದ ಪ್ರಿಯಕರನನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಬ್ಯಾಂಕಿನಿಂದ ಕಳ್ಳತನ ಮಾಡಿದ್ದ 11.55 ಲಕ್ಷ ರೂ.ಯನ್ನ ಹೊಲದಲ್ಲಿ ಬಚ್ಚಿಟ್ಟಿದ್ದನು.
ರಾಯಗಢದ ಚರಖಾಪುರ ನಿವಾಸಿ ಶಂಕರ್ ರಾಠಿಯಾ ಬಂಧಿತ ಪ್ರಿಯಕರ. ಅಕ್ಟೋಬರ್ 8ರಂದು ಪತ್ಥಲ್‍ಗ್ರಾಮದ ಎಸ್‍ಬಿಐ ಬ್ಯಾಂಕಿನ ಹಿಂಭಾಗದ ಗೋಡೆಗೆ ಕನ್ನ ಹಾಕಲಾಗಿತ್ತು. ಬೆಳಗ್ಗೆ ಬ್ಯಾಂಕಿಗೆ ಬಂದ ಅಧಿಕಾರಿಗಳು ಕನ್ನ ಹಾಕಿರೋದನ್ನ ಗಮನಿಸಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬ್ಯಾಂಕಿನಲ್ಲಿ ಒಟ್ಟು 11.5 ಲಕ್ಷ ರೂ. ನಗದು ಕಳ್ಳತನಾವಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬ್ಯಾಂಕ್ ಕಟ್ಟಡದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಶಂಕರ್ ಚಲನವಲನ ಸೆರೆಯಾಗಿತ್ತು. ಬುಧವಾರ ಕಳ್ಳ ಶಂಕರ್ ನನ್ನು ಬಂಧಿಸಲಾಗಿದ್ದು, ಆತ ಹೊಲದಲ್ಲಿ ಬಚ್ಚಿಟ್ಟಿದ್ದ ಹಣವನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರೇಯಸಿಗಾಗಿ ಕಳ್ಳತನ: ಶಂಕರ್ ತನ್ನ ಪ್ರೇಯಸಿ ಹೆಚ್ಚು ಖರ್ಚು ಮಾಡುತ್ತಿದ್ದಳು. ಆಕೆಯ ಖರ್ಚಿಗಾಗಿ ಬ್ಯಾಂಕಿನಲ್ಲಿ ಕಳ್ಳತನ ಮಾಡಿದೆ ಎಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.