ಫೋನ್ ನಂಬರ್ ಕೊಡದ ಅಪ್ರಾಪ್ತೆ ಮೇಲೆ ರಾಡ್‍ನಿಂದ ಹಲ್ಲೆ

Public TV
1 Min Read
GIRL MOBILE

– ದಾರಿ ಮಧ್ಯೆ ಅಡ್ಡಹಾಕಿದ ಆರೋಪಿ
– ಘಟನೆ ಸಂಬಂಧ ಇಬ್ಬರು ಅರೆಸ್ಟ್

ಲಕ್ನೋ: ಪೋಷಕರು ಹಾಗೂ ಅವರ ಅಪ್ರಾಪ್ತೆ ಮಗಳ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್‍ನ ವಿಜಯನಗರದಲ್ಲಿ ನಡೆದಿದೆ. ಪ್ರಮುಖ ಆರೋಪಿ ಫೋನ್ ನಂಬರ್ ಕೊಡುವಂತೆ ಅಪ್ರಾಪ್ತೆಯ ಬಳಿ ಕೇಳಿದ್ದಾನೆ. ಈ ವೇಳೆ ಆಕೆ ನಂಬರ್ ಕೊಡಲು ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಆರೋಪಿ ತನ್ನ ಗೆಳೆಯರ ಜೊತೆ ಸೇರಿ ಈ ಕೃತ್ಯ ಎಸಗಿದ್ದಾನೆ.

mobile secret 1

ಶನಿವಾರ ರಾತ್ರಿ 9.30ರ ಸುಮಾರಿಗೆ 17 ವರ್ಷದ ಹುಡುಗಿ ಸ್ಥಳೀಯ ಅಂಗಡಿಗೆ ತೆರಳಿದ್ದಾಳೆ. ಈ ವೇಳೆ ಆರೋಪಿ ಶರದ್ ಎಂಬಾತ ಆಕೆಯನ್ನು ದಾರಿ ಮಧ್ಯೆ ಅಡ್ಡಹಾಕಿ ಫೋನ್ ನಂಬರ್ ಕೊಡುವಂತೆ ಪೀಡಿಸಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ನಾನು ಆತನಿಗೆ ಫೋನ್ ನಂಬರ್ ಕೊಡಲು ನಿರಾಕರಿಸಿದಾಗ ಆತ ನನ್ನನ್ನು ನಿಂದಿಸಿದ್ದಾನೆ. ಈ ವೇಳೆ ನಾನು ಕಿರುಚಿಕೊಂಡೆ. ಕೂಡಲೇ ನನ್ನ ಪೋಷಕರು ಹಾಗೂ ಸಂಬಂಧಿಕರು ಬಂದು ನನ್ನನ್ನು ಕಾಪಾಡಿದರು. ಇದೇ ವೇಳೆ ಆರೋಪಿ ಶರದ್ ಕೂಡ ಆತನ ಗೆಳೆಯರನ್ನು ಸ್ಥಳಕ್ಕೆ ಕರೆಸಿಕೊಂಡ. ಅಂತೆಯೇ ರೋಹಿತ್, ಪಿಂಕು, ರೀಸವ್ ಹಾಗೂ ಮತ್ತೊಬ್ಬ ಗೆಳೆಯ ಸ್ಥಳಕ್ಕೆ ದೌಡಾಯಿಸಿ ನನ್ನ ಮೇಲೆ ಹಲ್ಲೆ ಮಾಡಿದರು. ಇದನ್ನು ವಿರೋಧಿಸಲು ಯತ್ನಿಸಿದಾಗ ಅವರು ನನ್ನ ಹಾಗೂ ನನ್ನ ಹೆತ್ತವರ ಮೇಲೆಯೂ ಹಲ್ಲೆ ಮಾಡಿದರು ಎಂದು ಘಟನೆಯ ಬಗ್ಗೆ ಅಪ್ರಾಪ್ತೆ ವಿವರಿಸಿದ್ದಾಳೆ.

Police Jeep 1 1 medium

ಆರೋಪಿಗಳನ್ನು ನಮ್ಮ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ನನಗೆ ಹಾಗೂ ತಂದೆಗೆ ಗಾಯಘಳಾಗಿವೆ ಎಂದು ಕೂಡ ಅಪ್ರಾಪ್ತೆ ಆರೋಪ ಮಾಡಿದ್ದಾಳೆ.

Share This Article
Leave a Comment

Leave a Reply

Your email address will not be published. Required fields are marked *