ಮಾಸ್ಕ್ ಹಾಕದವರಿಗೆ ದಂಡ ಪ್ರಯೋಗಕ್ಕೆ ತಾತ್ಕಾಲಿಕ ರಿಲೀಫ್

Public TV
2 Min Read
Face mask car

ಬೆಂಗಳೂರು: ಮಾಸ್ಕ್ ಧರಿಸದ ನೆಪದಲ್ಲಿ ಬಡವರು, ಶ್ರೀಸಾಮಾನ್ಯರಿಗೆ ಕೊರೊನಾ ಕಷ್ಟ ಕಾಲದಲ್ಲಿ 1,000 ರೂಪಾಯಿ ದಂಡ ವಿಧಿಸುತ್ತಿದ್ದ ಸರ್ಕಾರ ಸದ್ಯ ದಂಡದವನ್ನು ಇಳಿಸಿದೆ. ಆದರೆ ಇದರ ನಡುವೆಯೇ ಮಾಸ್ಕ್ ಹಾಕದವರಿಗೆ ದಂಡ ಪ್ರಯೋಗ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

ಸದ್ಯ ದಂಡದ ಪ್ರಮಾಣವನ್ನು ನಗರ ಪ್ರದೇಶದಲ್ಲಿ ಈ ಮೊದಲು ವಿಧಿಸಲಾಗಿದ್ದ ಸಾವಿರ ರೂಪಾಯಿ ದಂಡವನ್ನು 250ಕ್ಕೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ 500 ರೂಪಾಯಿ ದಂಡವನ್ನು 100ಕ್ಕೆ ಇಳಿಸಿತು. ತಕ್ಷಣದಿಂದಲೇ ಜಾರಿಯಾಗುವಂತೆ ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ಹೊರಡಿಸಿದ್ದರಿ. ಆದರೆ ದಂಡ ಇಳಿಕೆ ಪ್ರಮಾಣ ಸಿಸ್ಟಂ ಗಳಲ್ಲಿ ಅಪ್ ಡೇಟ್ ಆಗಬೇಕಾಗಿದ್ದು, ದುಬಾರಿ ದಂಡ ಹಾಕಲು ಆಗಲ್ಲ ಎಂಬ ಮಾಹಿತಿ ಲಭಿಸಿದೆ.

MASK 8

ಬೆಂಗಳೂರು ನಗರದ ವಿವಿಧ ರಸ್ತೆಗಳಲ್ಲಿ ಈಗಾಗಲೇ ಮಾರ್ಷಲ್‍ಗಳು ಮಾಸ್ಕ್ ಧರಿಸದೆ ಓಡಾಡುತ್ತಿರುವ ಮಂದಿಗೆ ಬಿಸಿ ಮುಟ್ಟಿಸಲು ಫೀಲ್ಡ್ ಗೆ ಇಳಿದಿದ್ದಾರೆ. ಆದರೆ ದಂಡ ಇಳಿಕೆ ಪ್ರಮಾಣ ಸಿಸ್ಟಂ ಗಳಲ್ಲಿ ಅಪ್‍ಡೇಟ್ ಆಗಬೇಕಾಗಿದ್ದು, ಹೀಗಾಗಿ ನಗರದ ಎಲ್ಲೂ ದಂಡ ಪ್ರಯೋಗ ಸಾಧ್ಯಕ್ಕಿಲ್ಲ ಎಂದು ಮಾರ್ಷಲ್ ಮುಖ್ಯಸ್ಥ ರಾಜ್ ಬೀರ್ ಸಿಂಗ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

ಇಂದು ಮಧ್ಯಾಹ್ನ ಒಂದು ಗಂಟೆ ವೇಳೆಗೆ ದಂಡ ಇಳಿಕೆ ಪ್ರಮಾಣ ಸಿಸ್ಟಂ ಗಳಲ್ಲಿ ಅಪ್ ಡೇಟ್ ಮಾಡುವ ಸಾಧ್ಯತೆ ಇದ್ದು, ಆ ಬಳಿಕವೇ ಹೊಸ ನಿಯಮದ ಅನ್ವಯ ದಂಡ ವಿಧಿಸಲು ಸಾಧ್ಯವಾಗುತ್ತದೆ. ಆದರೆ ಸಿಸ್ಟಂ ಅಪ್‍ಡೇಟ್ ಹಾಗಬಿದ್ದರೂ ಮಾಸ್ಕ್ ಧರಿಸದೇ ಬರುವ ವ್ಯಕ್ತಿಗಳ ಸಾಕ್ಷಿಯನ್ನು ಸಂಗ್ರಹಿಸಿ ಸಿಸ್ಟಂ ಅಪ್‍ಡೇಟ್ ಆದ ಬಳಿಕ ವಿಧಿಸುವ ಸಾಧ್ಯತೆ ಇದೆ.

ಸರ್ಕಾರ ದಂಡ ಕಡಿಮೆ ಮಾಡುವುದರೊಂದಿಗೆ ಕೊರೊನಾ ನಿಯಂತ್ರಣದ ಹೆಚ್ಚಿನ ಜವಾಬ್ದಾರಿ ಜನರ ಹೆಗಲೇರಿದೆ. ನಿಮ್ಮ ಜೀವ ನಿಮ್ಮ ಕೈಯಲ್ಲಿಯೇ ಇದೆ. ದಂಡ ಇಳಿಕೆಯಾಯ್ತು ಅಂತಾ ನೀವು ಮಾಸ್ಕ್ ಧರಿಸದೇ ಮೈಮರೆಯಬೇಡಿ. ಸದ್ಯದ ಮಟ್ಟಿಗೆ ಮಾಸ್ಕ್ ಒಂದೇ ಕೊರೋನಾಗೆ ಮದ್ದು, ಮಾಸ್ಕ್ ಧರಿಸಿ ಜೀವ ಉಳಿಸಿಕೊಳ್ಳಿ ಎಂಬುದು ಪಬ್ಲಿಕ್ ಟಿವಿಯ ಕಳಕಳಿಯ ಮನವಿಯಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ. ಮಾಸ್ಕನ್ನು ಮೂಗಿನಿಂದ ಕೆಳಗೆ ಇಳಿಸಿಕೊಳ್ಳುವ ಅಭ್ಯಾಸ ಕೈಬಿಡಿ. ಸರಿಯಾಗಿ ಮಾಸ್ಕ್ ಧರಿಸಿ. ವಾಹನದಲ್ಲಿ ಸಂಚರಿಸುವಾಗ ಮಾಸ್ಕ್ ಯಾಕೆ ಭಾವನೆ ಬೇಡ. ವಾಹನದಲ್ಲಿ ಹೋಗುವಾಗಲೂ ಮಾಸ್ಕ್ ಧರಿಸಿ. ಮಾಸ್ಕ್ ತಪಾಸಣೆ ಬರುವ ಪೊಲೀಸರು, ಮಾರ್ಷಲ್‍ಗಳಿಗೆ ಸಹಕರಿಸಿ. ಮಾಸ್ಕ್ ಧರಿಸುವ ಜೊತೆಗೆ ಸಾಮಾಜಿಕ ಅಂತರದ ಬಗ್ಗೆಯೂ ಗಮನ ಹರಿಸಿ.

Share This Article
Leave a Comment

Leave a Reply

Your email address will not be published. Required fields are marked *