– ಮೂರು ಮದ್ವೆಯಾಗಿದ್ರೂ ಯುವಕನಿಗೆ ಬ್ಲ್ಯಾಕ್‍ಮೇಲ್
– ಲಾಕ್‍ಡೌನ್ ನಲ್ಲಿ ನಾಲ್ಕನೇ ಮದ್ವೆ
ಭೋಪಾಲ್: ಲಾಕ್‍ಡೌನ್ ನಲ್ಲಿ ಬಡವರಿಗೆ ಪಡಿತರ ವಿತರಿಸುತ್ತಿದ್ದ ಯುವಕನನ್ನ ಮೋಸದಿಂದ ಮಹಿಳೆಯೊಬ್ಬರು ಮದುವೆಯಾಗಿರುವ ಘಟನೆ ಮಧ್ಯ ಪ್ರದೇಶದ ಭೋಪಾಲ್ ನಗರದ ಜಹಾಂಗೀರಬಾದ್ ನಲ್ಲಿ ನಡೆದಿದೆ.
ಸಂತ್ರಸ್ತ ಯುವಕ ಲಾಕ್‍ಡೌನ್ ಸಮಯದಲ್ಲಿ ಬಡವರಿಗೆ ಆಹಾರ ವಿತರಣೆ ಮಾಡುತ್ತಿದ್ದನು. ಒಂದು ದಿನ ಯುವಕನಿಗೆ ಕರೆ ಮಾಡಿದ ಮಹಿಳೆ, ತನಗೆ ರೇಷನ್ ನೀಡುವಂತೆ ಮನವಿ ಮಾಡಿಕೊಂಡಿದ್ದಳು. ಫುಡ್ ಕಿಟ್ ತೆಗೆದುಕೊಂಡ ಯುವಕ ಮಹಿಳೆ ಮನೆಗೆ ಹೋಗಿದ್ದನು. ಈ ವೇಳೆ ಮಹಿಳೆ ಆತನ ಜೊತೆ ಕೆಲ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾಳೆ.
ಅದೇ ಫೋಟೋಗಳನ್ನು ತೋರಿಸಿ ಯುವಕನಿಗೆ ಮಹಿಳೆ ಬ್ಲ್ಯಾಕ್‍ಮೇಲ್ ಮಾಡಿ ತನ್ನನ್ನು ಮದುವೆಯಾಗುವಂತೆ ಒತ್ತಡ ಹಾಕಿದ್ದಾಳೆ. ಮದುವೆಯಾಗದಿದ್ರೆ ಪೊಲೀಸ್ ಠಾಣೆಯಲ್ಲಿ ನಿನ್ನ ವಿರುದ್ಧ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಒತ್ತಡದಲ್ಲಿ ಸಿಲುಕಿದ ಯುವಕ ಆಕೆಯನ್ನ ಮದುವೆಯಾಗಿದ್ದಾನೆ. ಕೆಲ ದಿನಗಳ ನಂತರ ಮಹಿಳೆ ಮೂರು ಮದುವೆಯಾಗಿರುವ ವಿಷಯ ಯುವಕನಿಗೆ ತಿಳಿದಿದೆ.
ಹಣಕ್ಕಾಗಿ ಮಹಿಳೆ ತನ್ನನ್ನು ಮದುವೆಯಾಗಿರುವ ವಿಷಯ ಸಂತ್ರಸ್ತನಿಗೆ ತಿಳಿದಿದೆ. ಆದ್ರೂ ಯುವಕ ಮರ್ಯಾದೆಗೆ ಹೆದರಿಗೆ ಯುವಕ ಆಕೆಗೆ ಹಣ ನೀಡಿದ್ದಾನೆ. ಮಹಿಳೆ ಹಣ ನೀಡಲು ತನ್ನ ಅಂಗಡಿ ಸಹ ಒತ್ತೆ ಇಟ್ಟಿದ್ದಾನೆ. ಮಹಿಳೆ ಕಿರುಕುಳದಿಂದ ಬೇಸತ್ತ ಯುವಕ ಆಕೆಯಿಂದ ಬಿಡುಗಡೆ ಪಡೆಯಲು ಕಾನೂನು ತಜ್ಞರ ಸಲಹೆ ಪಡೆದುಕೊಂಡಿದ್ದಾನೆ.
ಡಿಐಜಿ ಮತ್ತು ಪೊಲೀಸರ ಮುಂದೆಯೂ ಯುವಕ ನಡೆದ ಘಟನೆ ವಿವರಿಸಿದ್ದಾನೆ. ಆದ್ರೆ ಯುವಕನ ಬಳಿ ಯಾವುದೇ ದಾಖಲೆಗಳು ಇರದ ಹಿನ್ನೆಲೆ ಪ್ರಕರಣ ದಾಖಲಾಗಿರಲಿಲ್ಲ. ಇದೀಗ ಜಿಲ್ಲಾಧಿಕಾರಿಗಳ ಕಚೇರಿಯ ಸೂಚನೆ ಮೇರೆಗೆ ಮಹಿಳೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.