ಬೆಂಗಳೂರು: ಕುಡಿದ ಮತ್ತಿನಲ್ಲಿ ಯುವಕನೋರ್ವ ಕಾರುಗಳ ಗ್ಲಾಸ್ ಒಡೆದು ಸೈಕೋ ಪಾತ್ ರೀತಿಯಲ್ಲಿ ವರ್ತಿಸಿರುವ ಘಟನೆ ಸಿಲಿಕಾನ್ ಸಿಟಿಯ ಕಂಗೇರಿಯಲ್ಲಿ ನಡೆದಿದೆ.
ಈ ಘಟನೆ ನಿನ್ನೆ ರಾತ್ರಿ ನಡೆದಿದ್ದು, ಸೈಕೋ ರೀತಿಯಲ್ಲಿ ವರ್ತಿಸಿದ ಯುವಕನನ್ನು ಅಶೋಕ್ ಎಂದು ಗುರುತಿಸಲಾಗಿದೆ. ಕಂಠಪೂರ್ತಿ ಕುಡಿದು ಯುವಕನೋರ್ವ ನಡುರಸ್ತೆಯಲ್ಲೆ ಹುಚ್ಚಾಟವಾಡಿದ್ದಾನೆ. ರಾಡ್ ಹಿಡಿದು ಸಿಕ್ಕ ಸಿಕ್ಕ ಕಾರ್ ಗ್ಲಾಸ್ ಒಡೆದು ಹಾಕಿದ್ದಾನೆ. ಬರೋಬ್ಬರಿ 8ಕ್ಕೂ ಹೆಚ್ಚು ಕಾರ್ ಹಾಗೂ ವಾಹನಗಳ ಗ್ಲಾಸ್ ಒಡೆದು ಹಾಕಿದ್ದಾನೆ.
ಇದಲ್ಲೆದೆ ಬಿಬಿಎಂಪಿ ವಾಹನದ ಗ್ಲಾಸ್ ಕೂಡ ಅಶೋಕ್ ರಾಡಿನಿಂದ ಒಡೆದು ಹಾಕಿದ್ದು, ಈ ಘಟನೆ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪೊಲೀಸರು ಆರೋಪಿ ಅಶೋಕನನ್ನು ಬಂಧಿಸಿದ್ದು, ಈತ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದಾನೆ ಎಂದು ತಿಳಿದು ಬಂದಿದೆ. ಯುವಕನ ಈ ಎಲ್ಲ ಹುಚ್ಚಾಟ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.