ಸುಶಾಂತ್ ಕೇಸ್- ಅದು ಕೊಲೆಯಲ್ಲ, ಆತ್ಮಹತ್ಯೆ: ಏಮ್ಸ್ ವೈದ್ಯ

Public TV
2 Min Read
Sushanth

– ಸತ್ಯಮೇವ ಜಯತೇ ಎಂದ ರಿಯಾ ಪರ ವಕೀಲ
– ಎಲ್ಲರ ಚಿತ್ತ ಸಿಬಿಐ ನತ್ತ

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ 110 ದಿನಗಳ ಬಳಿಕ ಸ್ಫೋಟಕ ಸತ್ಯ ರಿವೀಲ್ ಆಗಿದೆ. ಸುಶಾಂತ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಹೊರತು ಅದು ಕೊಲೆಯಲ್ಲ ಎಂದು ಏಮ್ಸ್ ವೈದ್ಯ ಡಾ. ಸುಧೀರ್ ಗುಪ್ತಾ ಹೇಳಿದ್ದಾರೆ.

Sushant Singh Rajput Drive 1200 2 1 medium

ಖಾಸಗಿ ಮಾಧ್ಯಮದ ಜೊತೆ ಮಾತನಾಡಿರುವ ಡಾ.ಸುಧೀರ್ ಗುಪ್ತಾ, ಸುಶಾಂತ್ ಪ್ರಕರಣದಲ್ಲಿ ಕೇಳಿ ಬಂದಿರುವ ಕೊಲೆ ಆರೋಪಗಳನ್ನು ಸಂಪೂರ್ಣ ತಳ್ಳಿ ಹಾಕಿದ್ದಾರೆ. ಸುಶಾಂತ್ ದೇಹದಲ್ಲಿ ಯಾವುದೇ ವಿಷ ಪದಾರ್ಥ ಅಥವಾ ಕೆಮಿಕಲ್ ಇರಲಿಲ್ಲ. ಹಾಗಾಗಿ ಇದು ಕೊಲೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾವು ಬನಮ್ಮ ವರದಿಯನ್ನು ಸೆಪ್ಟೆಂಬರ್ 28ರಂದು ಸಿಬಿಐಗೆ ನೀಡಿದ್ದೇವೆ ಎಂದು ತಿಳಿಸಿದರು.

sushant singh rajput1

ಮೊದಲಿಗೆ ಸುಶಾಂತ್ ಸಿಂಗ್ ಮೃತದೇಹದ ಮರಣೋತ್ತರ ಶವ ಪರೀಕ್ಷೆ ನಡೆಸಿ ಮುಂಬೈನ ಕೂಪರ್ ಆಸ್ಪತ್ರೆ ವೈದ್ಯರು ನೀಡಿದ ವರದಿಯ ಮೇಲೆ ಅನುಮಾನಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆ ಸಿಬಿಐ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ವೈದ್ಯಕೀಯ ವರದಿ ನೀಡುವಂತೆ ಡಾ.ಸುಧೀರ್ ಗುಪ್ತಾ ನೇತೃತ್ವದ ಐವರು ಏಮ್ಸ್ ವೈದ್ಯರ ತಂಡಕ್ಕೆ ನೀಡಲಾಗಿತ್ತು. ಏಮ್ಸ್ ವೈದ್ಯರ ತಂಡಕ್ಕೆ ಸೆಪ್ಟೆಂಬರ್ 20ಕ್ಕೆ ವರದಿ ಸೂಚಿಸುವಂತೆ ಸಿಬಿಐ ಸೂಚಿಸಿತ್ತು. ಆದ್ರೆ ವೈದ್ಯರು ಸೆಪ್ಟೆಂಬರ್ 28ರಂದು ವರದಿ ನೀಡಿದ್ದರು. ದನ್ನೂ ಓದಿ: ಸುಶಾಂತ್ ರೀತಿಯಲ್ಲಿ ಮತ್ತೋರ್ವ ನಟನ ಅನುಮಾನಾಸ್ಪದ ಸಾವು

sushanth 1

ಮುಂಬೈ ಆಸ್ಪತ್ರೆಗೆ ಕ್ಲೀನ್ ಚಿಟ್ ಇಲ್ಲ: ಮೊದಲು ಮರಣೋತ್ತರ ಶವ ಪರೀಕ್ಷೆ ನಡೆಸಿದ ಮುಂಬೈನ ಕೂಪರ್ ಆಸ್ಪತ್ರೆಗೂ ಏಮ್ಸ್ ಸಂಪೂರ್ಣ ಕ್ಲೀನ್ ಚಿಟ್ ನೀಡಿಲ್ಲ. ಸುಶಾಂತ್ ಮೃತದೇಹವನ್ನು ಬಾಂದ್ರಾ ನಿವಾಸದಿಂದ ನೇರವಾಗಿ ಕೂಪರ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು. ಆದ್ರೆ ಮರಣೋತ್ತರ ಶವ ಪರೀಕ್ಷೆ ನಡೆಸಿದ್ದ ವೈದ್ಯರ ತಂಡ ಸುಶಾಂತ್ ದೇಹದ ಮೇಲಾದ ಗಾಯದ ಗುರುತು ಮತ್ತು ಕುತ್ತಿಗೆ ಭಾಗದಲ್ಲಿ ಕಂಡು ಬಂದಿದ್ದ ರಕ್ತದ ಕಲೆಗಳನ್ನು ಉಲ್ಲೇಖಿಸಿರಲಿಲ್ಲ. ಪ್ರಾಥಮಿಕವಾಗಿ ಉಲ್ಲೇಖಿಸುವ ಪ್ರಾಣ ಹೋದ ಅಂದಾಜು ಸಮಯವನ್ನು ವೈದ್ಯರು ದಾಖಲಿಸಿರಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.  ಇದನ್ನೂ ಓದಿ: ಎಲ್ಲ ಆಯಾಮಗಳಲ್ಲಿ ಸುಶಾಂತ್ ಕೇಸ್ ತನಿಖೆ: ಸಿಬಿಐ

sushant singh rajput 7591

ಸೆಪ್ಟೆಂಬರ್ 28ರಂದು ಸಿಬಿಐ ವರದಿ ಸಲ್ಲಿಸಿದ ಬಳಿಕ ಮಾತನಾಡಿದ್ದ ಡಾ.ಸುಧೀರ್ ಗುಪ್ತಾ, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ತನಿಖೆಯ ಅಗತ್ಯವಿದೆ. ನಾವು ನಮ್ಮ ವರದಿಯನ್ನು ಸಲ್ಲಿಸಿದ್ದೇವೆ. ನಮ್ಮ ವರದಿಯ ವಿಶ್ಲೇಷಣೆಯನ್ನ ಸಿಬಿಐ ಮಾಡುತ್ತದೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ್ರಾ ಅಥವಾ ಕೊಲೆ ಮಾಡಲಾಯ್ತಾ ಅನ್ನೋದನ್ನು ಸಹ ತನಿಖಾಧಿಕಾರಿಗಳು ನಿರ್ಧರಿಸುತ್ತಾರೆ ಎಂದು ಹೇಳಿದ್ದರು. ಇದನ್ನೂ ಓದಿ: ನಟಿಗೆ ಸುಶಾಂತ್ ಕಿಸ್- ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್

RHEA SUSHANT 1 medium

ಸತ್ಯಮೇವ ಜಯತೆ: ಡಾ.ಸುಧೀರ್ ಗುಪ್ತಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ನಟಿ ರಿಯಾ ಚಕ್ರವರ್ತಿ ಪರ ವಕೀಲ ಸತೀಶ್ ಮನೋಶಿಂಧೆ, ನಾವು ಸಿಬಿಐ ತಂಡ ನೀಡುವ ಅಧಿಕಾರಿಗಳ ಹೇಳಿಕೆಯ ನಿರೀಕ್ಷೆಯಲ್ಲಿದ್ದೇವೆ. ಪ್ರಕರಣದ ತನಿಖೆ ಯಾವುದೇ ಏಜೆನ್ಸಿ ನಡೆಸಿದ್ರೂ ಸತ್ಯ ಮಾತ್ರ ಬದಲಾಗಲ್ಲ ಎಂದು ನಾವು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇವೆ. ನಾವು ಸತ್ಯದ ಮೇಲೆ ನಂಬಿಕೆ ಹೊಂದಿದ್ದು, ಸತ್ಯಮೇವ ಜಯತೆ ಎಂದಿದ್ದಾರೆ. ಇದನ್ನೂ ಓದಿ: ಹೌದು, ಸುಶಾಂತ್ ಶವದ ಮುಂದೆ ಕ್ಷಮೆ ಕೇಳಿದ್ದೆ: ರಿಯಾ ಚಕ್ರವರ್ತಿ

Share This Article
Leave a Comment

Leave a Reply

Your email address will not be published. Required fields are marked *