ತುಮಕೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಯಾವತ್ತೂ ಅಳುಮುಂಜಿಯಂತೆ ಅಳಲ್ಲ ಎಂದು ಸಂಸದ ಪ್ರತಾಪ್ ಸಿಂಹ್ ಅವರು ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.
ಶಿರಾದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಂಸದರು, ಯಡಿಯೂರಪ್ಪನವರಿಗೆ 78 ವರ್ಷ ಅವರ ಮುಖದಲ್ಲಿ ಸಾತ್ವಿಕ ಸಿಟ್ಟು ಕಾಣುತ್ತೆ. ಯಡಿಯೂರಪ್ಪನವರು ಯಾವತ್ತೂ ಅಳುಮುಂಜಿ ತರ ಅಳಲ್ಲ. ಕುಮಾರಣ್ಣ ಸಭೆ ಸಮಾರಂಭದಲ್ಲಿ ಅಪ್ಪ, ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಸಾಲಾಗಿ ಬಂದು ಅಳೋರು ಎಂದು ಲೇವಡಿ ಮಾಡಿದ್ದಾರೆ.
ಶಿರಾ ಜನ ಹಾಲು ಕೊಡ್ತಿರೋ ವಿಷ ಕೊಡ್ತಿರೋ ಅಂತ ಕುಮಾರಸ್ವಾಮಿ ಕೇಳ್ತಿದ್ದಾರೆ. ಶಿರಾ ಜನರು ಅವರಿಗೆ ಕೊರೊನಾ ಸಂದರ್ಭದಲ್ಲಿ ಕಷಾಯ ಕೊಟ್ಟು ಕಳುಹಿಸಿ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಮುಖ್ಯಮಂತ್ರಿಯಾಗಲು ಕೇಂದ್ರದಿಂದ ಮೋದಿಯವರೇ ಆಫರ್ ನೀಡಿದ್ರು: ಹೆಚ್‍ಡಿಕೆ
ಹೆಚ್‍ಡಿಕೆ ಹೇಳಿದ್ದೇನು?
ಸೆಪ್ಟೆಂಬರ್ 30ರಂದು ತುಮಕೂರಿನ ಶಿರಾದಲ್ಲಿ ನಡೆದಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಷಣ ಮಾಡಿದ್ದ ಹೆಚ್‍ಡಿಕೆ, ಕಾಂಗ್ರೆಸ್ಸಿನವರ ಸಹವಾಸ ಮಾಡಿದಕ್ಕೆ ಜನ ನನ್ನ ಒಪ್ಪಿಕೊಂಡಿಲ್ಲ. ಅಷ್ಟೇ ಯಾಕೆ ನನ್ನ ಕಾರ್ಯಕರ್ತರೇ ಒಪ್ಪಿಕೊಂಡಿಲ್ಲ. ಶಿರಾ ಜನರು ನನಗೆ ವಿಷ ಕೊಡುತ್ತಿರೋ ಅಥವಾ ಹಾಲು ಕೊಡುತ್ತಿರೋ ನಿಮಗೆ ಬಿಟ್ಟಿದ್ದು. ಇಲ್ಲಿಂದ ಹೊಸ ರಾಜಕೀಯ ಆರಂಭವಾಗಬೇಕು. ಸರ್ಕಾದಲ್ಲಿ ದುಡ್ಡಿಗೆ ತೊಂದರೆ ಇಲ್ಲ. ರಾಜ್ಯ ಸಂಪದ್ಭರಿತವಾಗಿದೆ ಎಂದು ಕುಮಾರಸ್ವಾಮಿಯವರು ತಿಳಿಸಿದ್ದರು.