ಇಬ್ಬರೂ ಹುಚ್ಚರಂತೆ ಪ್ರೀತಿಸ್ತಿದ್ದೇವೆ – ಮತ್ತೆ ಒಂದಾದ ಸ್ಯಾಮ್, ಪೂನಂ

Public TV
2 Min Read
POONAM 2

– ಪತಿ ಅಳ್ತಿದ್ದಾನೆಂದು ಕೇಸ್ ವಾಪಸ್
– ಬಿಗ್‍ಬಾಸ್‍ಗಾಗಿ ನಾಟಕವಾಡಿದ್ರಾ ಹಾಟ್‍ಬ್ಯೂಟಿ?

ಮುಂಬೈ: ಮದುವೆಯಾದ 13 ದಿನಕ್ಕೆ ಪತಿ ಸ್ಯಾಮ್ ಬಾಂಬೆಯನ್ನು ಜೈಲಿಗಟ್ಟಿದ್ದ ಬಾಲಿವುಡ್ ಹಾಟ್ ಬೆಡಗಿ ಪೂನಂ ಪಾಂಡೆ, ಇದೀಗ ಇಬ್ಬರೂ ಮತ್ತೆ ಒಂದಾಗಿದ್ದಾರೆ.

poonam 1 1

ಹೌದು. ನಾವಿಬ್ಬರೂ ಪರಸ್ಪರ ಹುಚ್ಚರಂತೆ ಪ್ರೀತಿಸುತ್ತಿದ್ದೇವೆ. ಹೀಗಾಗಿ ಪತಿ ಮೇಲಿನ ಕೇಸ್ ವಾಪಸ್ ತೆಗೆದುಕೊಂಡಿದ್ದು, ಆತನ ಜೊತೆ ಬಾಳುವುದಾಗಿ ಪೂನಂ ತಿಳಿಸಿದ್ದಾರೆ. ಆದರೆ ಇದೊಂದು ನಾಟಕವಾಗಿದ್ದು, ಮುಂಬರುವ ಬಿಗ್ ಬಾಸ್ 14ರಲ್ಲಿ ಭಾಗವಹಿಸುವುದಕ್ಕೆ ಪೂನಂ ಪಾಂಡೆ ಈ ರೀತಿಯಾಗಿ ಪ್ರಚಾರ ಪಡೆದುಕೊಂಡಿದ್ದಾರೆ ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.

poonam pandey

ಆದರೆ ಈ ಬಗ್ಗೆ ಮಾಧ್ಯಮವೊಂದು ನಡೆಸಿದ ಸಂದರ್ಶನದ ವೇಳೆ, ವಿವಾದಾತ್ಮಕ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಹೋಗುತ್ತಿಲ್ಲ. ನಾನು ಬಿಗ್ 14ರಲ್ಲಿ ಭಾಗವಹಿಸುವುದಿಲ್ಲ. ಆ ಶೋಗೆ ಪಾಲ್ಗೊಳ್ಳುವಲ್ಲಿ ನಾನು ತುಂಬಾ ಚಿಕ್ಕವಳು ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 3 ವರ್ಷ ಡೇಟಿಂಗ್, ಮದ್ವೆಯಾಗಿ 2 ವಾರ – ವಿಚ್ಛೇದನಕ್ಕೆ ಮುಂದಾದ ಪೂನಂ ಪಾಂಡೆ

POONAM 3

ಇದೇ ವೇಳೆ ಪತಿ ಬಗ್ಗೆ ಮಾತನಾಡಿದ ಹಾಟ್ ಬ್ಯೂಟಿ, ಸ್ಯಾಮ್ ಅಳುತ್ತಿದ್ದಾನೆ. ಆತನ ವಿರುದ್ಧದ ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ತನ್ನ ಬಳಿ ಬೇಡಿಕೊಳ್ಳುತ್ತಿದ್ದಾನೆ. ಮುಂದೆ ಎಂದಿಗೂ ಇಂತಹ ತಪ್ಪನ್ನು ಪುನರಾವರ್ತಿಸಲ್ಲ. ಅಲ್ಲದೆ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾನೆ. ಈ ಮೂಲಕ ಆತ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಹೀಗಾಗಿ ಮತ್ತೆ ಒಟ್ಟಿಗೆ ಜೀವನ ನಡೆಸಲು ನಿರ್ಧರಿಸಿದ್ದೇವೆ. ಅಲ್ಲದೆ ನಾವಿಬ್ಬರೂ ಒಬ್ಬರನ್ನೊಬ್ಬರು ಹುಚ್ಚರಂತೆ ಪ್ರೀತಿಸುತ್ತಿದ್ದೇವೆ ಎಂದು ಹೇಳಿದರು.

POONAM 2 1

ಸದ್ಯ ದಂಪತಿ ಗೋವಾದಲ್ಲಿದ್ದು, ಪತಿ ಮೇಲಿನ ಕೇಸನ್ನು ಪೂನಂ ವಾಪಸ್ ತೆಗೆದುಕೊಂಡಿದ್ದಾರೆ. ಹೀಗಾಗಿ ನವವಿವಾಹಿತರು ಶೀಘ್ರವೇ ಮುಂಬೈಗೆ ತೆರಳಲಿದ್ದಾರೆ. ಇತ್ತ ಇಬ್ಬರ ನಡುವೆ ವೈಮನಸ್ಸು ತಣ್ಣಗಾದ ಬಳಿಕ ಸ್ಯಾಮ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಮದುವೆ ಫೋಟೋ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಿಮಗೆ ಬೇಕಾಗಿದ್ದ ಕಪ್ ಇದೇ ಅಲ್ವಾ – ಪಾಕ್ ವಿರುದ್ಧ ಪೂನಂ ಗರಂ

https://www.instagram.com/p/CFmva8tJFb8/?utm_source=ig_embed

ಸ್ಯಾಮ್ ಬಾಂಬೆ ಹಾಗೂ ಪೂನಂ ಪಾಂಡೆ ಕಳೆದ ಸೆಪ್ಟೆಂಬರ್ 10ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇದಕ್ಕೂ ಮೊದಲು ಇವರಿಬ್ಬರು ಮೂರು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ಪತಿಯ ಕಿರುಕುಳದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ್ದ ಪೂನಂ, ನಮ್ಮಿಬ್ಬರ ಸಂಬಂಧ ನಿಂದನೀಯವಾಗಿದೆ. ಅಲ್ಲದೆ ಆತ ತನಗೆ ಪ್ರಾಣಿಗಳಿಗೆ ಹೊಡೆದಂತೆ ಹೊಡೆಯುತ್ತಿದ್ದು, ಆತನ ಜೊತೆ ಸಂಸಾರ ಮಾಡಲು ಸಾಧ್ಯವಿಲ್ಲ. ಇಂತಹ ವ್ಯಕ್ತಿಯೊಂದಿಗೆ ಸಂಬಂಧ ಮುಂದುವರಿಸುವುದು ಒಳ್ಳೆಯದಲ್ಲ ಎಂದು ಹೇಳುವ ಮೂಲಕ ಪತಿಗೆ ವಿಚ್ಛೇದನ ನೀಡಲು ಮುಂದಾಗಿದ್ದರು.

Poonam Pandey

Share This Article
Leave a Comment

Leave a Reply

Your email address will not be published. Required fields are marked *