ಐಪಿಎಲ್ ಒಂದು ಬ್ರ್ಯಾಂಡ್, ಪಾಕಿಸ್ತಾನಿ ಆಟಗಾರರು ಮಿಸ್ ಮಾಡಿಕೊಳ್ಳುತ್ತಿದ್ದಾರೆ: ಅಫ್ರಿದಿ

Public TV
2 Min Read
Afridi IPL

– ಭಾರತದ ಕ್ರೀಡಾಭಿಮಾನಿಗಳನ್ನು ಹಾಡಿಹೊಗಳಿದ ಶಾಹಿದ್

ಇಸ್ಲಾಮಾಬಾದ್: ಐಪಿಎಲ್ ಒಂದು ಬ್ರ್ಯಾಂಡ್ ಇದ್ದಂತೆ. ಇದರಲ್ಲಿ ಭಾಗವಹಿಸಲಾಗದೇ ಪಾಕಿಸ್ತಾನಿ ಆಟಗಾರರು ಒಂದು ದೊಡ್ಡ ಅವಕಾಶವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಹೇಳಿದ್ದಾರೆ.

ಈಗಾಗಲೇ ಐಪಿಎಲ್ ಆರಂಭವಾಗಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತವಾರಣ ಸೃಷ್ಟಿಯಾಗಿದೆ. ದೇಶಿಯ, ವಿದೇಶಿಯ ಆಟಗಾರರು ಸೇರಿದ ಕಲರ್ ಫುಲ್ ಲೀಗ್ ಸೆಟ್ಟೇರಿ ಒಂದು ವಾರವೇ ಕಳೆದಿದೆ. ಈಗ ಐಪಿಎಲ್ ವಿಚಾರವಾಗಿ ಮಾತನಾಡಿರುವ ಅಫ್ರಿದಿ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಟೂರ್ನಿಯನ್ನು ಹಾಡಿಹೊಗಳಿದ್ದಾರೆ.

ipl 2020 a

ಈ ವಿಚಾರವಾಗಿ ಪಾಕ್ ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿದ ಅವರು, ಐಪಿಎಲ್ ಕ್ರಿಕೆಟ್‍ನಲ್ಲಿ ಒಂದು ದೊಡ್ಡ ಬ್ರ್ಯಾಂಡ್ ಆಗಿ ಜನಪ್ರಿಯವಾಗಿದೆ. ನಮ್ಮಲ್ಲಿ ಬಾಬರ್ ಅಜಮ್ ಸೇರಿದಂತೆ ಅನೇಕ ಆಟಗಾರರು ಈ ಟೂರ್ನಿಯನ್ನು ಮಿಸ್ ಮಾಡಿಕೊಳ್ಳುತ್ತಾರೆ. ಐಪಿಎಲ್‍ನಲ್ಲಿ ಭಾಗವಹಿಸಿ ಆ ಒತ್ತಡದಲ್ಲಿ, ವಿವಿಧ ಆಟಗಾರರ ಜೊತೆ ಡ್ರೆಸ್ಸಿಂಗ್ ರೂಮ್ ಶೇರ್ ಮಾಡಿಕೊಳ್ಳುವುದನ್ನು ಅವರು ಮಿಸ್ ಮಾಡುತ್ತಾರೆ. ನನ್ನ ಪ್ರಕಾರ ಪಾಕ್ ಆಟಗಾರರು ಐಪಿಎಲ್ ಆಡದೇ ಒಂದು ದೊಡ್ಡ ಅವಕಾಶವನ್ನು ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

SHAHID AFRIDI

ಜೊತೆಗೆ ಭಾರತ ಕ್ರೀಡಾಭಿಮಾನಿಗಳ ಬಗ್ಗೆ ಮಾತನಾಡಿರುವ ಅವರು, ನನಗೆ ಭಾರತದಲ್ಲೂ ಹಲವಾರು ಜನ ಅಭಿಮಾನಿಗಳು ಇದ್ದಾರೆ. ನಾನು ಭಾರತದಲ್ಲಿ ಕ್ರಿಕೆಟ್ ಆಟವನ್ನು ಎಂಜಾಯ್ ಮಾಡಿದ್ದೇನೆ. ಭಾರತದ ಜನರ ನನಗೆ ಯಾವಗಲೂ ಪ್ರೀತಿ ಮತ್ತು ಗೌರವವನ್ನು ತೋರಿದ್ದಾರೆ. ಇಂದು ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರತೀಯರು ಸಂದೇಶ ಕಳುಹಿಸುತ್ತಾರೆ. ನಾನೂ ಕೂಡ ಅವರಿಗೆ ರಿಪ್ಲೈ ಮಾಡಿದ್ದೇನೆ. ಭಾರತದಲ್ಲಿ ನನ್ನ ಒಟ್ಟಾರೆ ಅನುಭವ ಬಹಳ ಚೆನ್ನಾಗಿದೆ ಎಂದು ಅಫ್ರಿದಿ ಹೇಳಿಕೊಂಡಿದ್ದಾರೆ.

ipl rcb

ಇದೇ ವೇಳೆ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿಯ ಬಗ್ಗೆ ಮಾತನಾಡಿರುವ ಅವರು, ಪಾಕಿಸ್ತಾನ ಸರ್ಕಾರ ಭಾರತದ ವಿರುದ್ಧ ಕ್ರಿಕೆಟ್ ಸರಣಿಯನ್ನು ಆಯೋಜನೆ ಮಾಡಲು ಸಿದ್ಧವಿದೆ. ಆದರೆ ಭಾರತದಲ್ಲಿ ನರೇಂದ್ರ ಮೋದಿ ಅವರು ಅಧಿಕಾರದಲ್ಲಿ ಇರುವವರೆಗೂ ಇದು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

afridi 1

2008ರಲ್ಲಿ ಐಪಿಎಲ್ ಮೊದಲನೇ ಆವೃತ್ತಿಯಲ್ಲಿ ಶಾಹಿದ್ ಅಫ್ರಿದಿ, ಶೋಯೆಬ್ ಅಖ್ತರ್, ಮಿಸ್ಬಾ-ಉಲ್-ಹಕ್, ಯೂನಿಸ್ ಖಾನ್, ಕಮ್ರಾನ್ ಅಕ್ಮಲ್ ಮುಂತಾದವರು ಪಾಕಿಸ್ತಾನಿ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಕಾಣಿಸಿಕೊಂಡಿದ್ದರು. ಇದಾದ ನಂತರ 2011ರಲ್ಲಿ ಭಯೋತ್ಪಾದಕರು ಮುಂಬೈನ ತಾಜ್ ಹೋಟೆಲ್ ಮೇಲೆ ದಾಳಿ ಮಾಡಿದ ಬಳಿಕ, ಇಂಡೋ-ಪಾಕ್ ನಡುವಿನ ರಾಜಕೀಯ ಸಂಬಂಧ ಹಾಳಾಗಿದ್ದರಿಂದ ಕ್ರಿಕೆಟ್ ಚಟುವಟಿಕೆಗಳು ನಿಂತಿವೆ.

Share This Article
Leave a Comment

Leave a Reply

Your email address will not be published. Required fields are marked *