ನನ್ನ ಹೃದಯದಲ್ಲಿ ಬೆಂಗಳೂರಿಗೆ ವಿಶೇಷ ಸ್ಥಾನವಿದೆ : ಆರೋನ್ ಫಿಂಚ್‌

Public TV
1 Min Read
aaron finch main

ದುಬೈ: ಬೆಂಗಳೂರು ನಗರವು ಅವರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ ಎಂದು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌,‌ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರ ಆರೋನ್ ಫಿಂಚ್‌ ಹೇಳಿದ್ದಾರೆ.

ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಬೆಂಗಳೂರಿನಲ್ಲಿ ಸಮಯ ಕಳೆಯಲು ಇಷ್ಟಪಡುತ್ತೇನೆ, ಅದು ನನ್ನ ನೆಚ್ಚಿನ ನಗರ. ನಾನು ಬೆಂಗಳೂರಿನಲ್ಲೇ ಗೆಳತಿಗೆ ನನ್ನ ಪ್ರೇಮ ನಿವೇದನೆಯನ್ನು ಪ್ರಸ್ತಾಪಿಸಿದೆ. ಆದ್ದರಿಂದ ಈ ಸ್ಥಳವು ನನ್ನ ಹೃದಯದಲ್ಲಿ ಬಹಳ ವಿಶೇಷ ಸ್ಥಾನವನ್ನು ಹೊಂದಿದೆ. ಈಗ ನಾವು ಬೆಂಗಳೂರಿನಲ್ಲಿ ಆಡದೇ ಇರುವುದಕ್ಕೆ ಬಹಳ ನಿರಾಸೆಯಾಗಿದೆ. ಶೀಘ್ರವೇ ನಾವು ಅಲ್ಲಿಗೆ ಮರಳುತ್ತೇವೆ ಎಂಬ ಆಶಾಭಾವನೆಯನ್ನು ಹೊಂದಿದ್ದೇನೆ ಎಂದು ಅವರು ತಿಳಿಸಿದರು.

aaron finch and wife

ರಾಯಲ್ ಚಾಲೆಂಜರ್ಸ್ ಬೆಂಗಳೂರು ಅದ್ಭುತ ಫ್ರ್ಯಾಂಚೈಸ್ ಮತ್ತು ಅದರ ಭಾಗವಾಗಿ ಆಟವಾಡುತ್ತಿರುವುದಕ್ಕೆ ಕೃತಜ್ಞನಾಗಿದ್ದೇನೆ. ಪ್ರತಿ ಫ್ರ್ಯಾಂಚೈಸ್‌ಗಳು ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದೆ. ಹರಾಜಿನ ಸಮಯದಿಂದ ಆರ್‌ಸಿಬಿಯ ಸಂವಹನವು ಅದ್ಭುತವಾಗಿದೆ ಎಂದು ಆರಂಭಿಕ ಆಟಗಾರ ಫಿಂಚ್‌ ಮೆಚ್ಚುಗೆ ವ್ಯಕ್ತಪಡಿಸಿದರು.  ಇದನ್ನೂ ಓದಿ: ಡೇವಿಡ್ ವಾರ್ನರ್ ದಾಖಲೆ ಮುರಿದ ರೋಹಿತ್ ಶರ್ಮಾ

aaron finch and wife 2

ಈ ವೇಳೆ ಆರ್‌ಸಿಬಿಯ ಮುಖ್ಯ ಕೋಚ್ ಸೈಮನ್ ಕ್ಯಾಟಿಚ್‌ ಮತ್ತು ಕ್ರಿಕೆಟ್ ನಿರ್ದೇಶಕ ಮೈಕ್ ಹೆಸನ್‌ ಅವರ ಸ್ಪಷ್ಟ ಚಿಂತನೆಯನ್ನು ಫಿಂಚ್ ಅವರನ್ನು ಶ್ಲಾಘಿಸಿದರು. ಇಬ್ಬರೂ ಶಾಂತ ವ್ಯಕ್ತಿಗಳು. ಮತ್ತು ಎಲ್ಲಾ ಸನ್ನಿವೇಶಗಳ ಬಗ್ಗೆ ಸ್ಪಷ್ಟವಾಗಿ ಯೋಚಿಸುವುದೇ ದೊಡ್ಡ ಶಕ್ತಿ. ಅವರ ಬಗ್ಗೆ ಪ್ರತಿಯೊಬ್ಬರಿಗೂ ಅಪಾರ ಪ್ರಮಾಣದ ಗೌರವವಿದೆ ಎಂದು ತಿಳಿಸಿದರು.

2020ರ ಐಪಿಎಲ್‌ ಹರಾಜಿನಲ್ಲಿ ಆರೋನ್‌ ಫಿಂಚ್‌ ಅವರನ್ನು ಆರ್‌ಸಿಬಿ 4.40 ಕೋಟಿ ರೂ. ನೀಡಿ ಖರೀದಿ ಮಾಡಿದೆ.

Share This Article