ಡೇವಿಡ್ ವಾರ್ನರ್ ದಾಖಲೆ ಮುರಿದ ರೋಹಿತ್ ಶರ್ಮಾ

Public TV
1 Min Read
Rohit Sharma

ಅಬುಧಾಬಿ: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ.

rohith sharma

ಅಬುಧಾವಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ದಾಖಲೆ ಬರೆದಿದ್ದಾರೆ. ಪಂದ್ಯದಲ್ಲಿ ಸಿಕ್ಸರ್ ಮೂಲಕ ಖಾತೆ ತೆರೆದ ರೋಹಿತ್ ಶರ್ಮಾ 6 ಸಿಕ್ಸರ್, 4 ಬೌಂಡರಿಗಳ ನೆರವಿನಿಂದ 54 ಎಸೆತಗಳಲ್ಲಿ 80 ರನ್ ಸಿಡಿಸಿದರು. ಟೂರ್ನಿ ಆರಂಭಕ್ಕೂ ಮುನ್ನ ಕೆಕೆಆರ್ ವಿರುದ್ಧ 824 ರನ್ ಗಳಿಸಿದ್ದ ರೋಹಿತ್ ಈ ಪಂದ್ಯದೊಂದಿಗೆ ರನ್ ಮೊತ್ತವನ್ನು 904ಕ್ಕೆ ಹೆಚ್ಚಿಸಿದ್ದಾರೆ.

david warner

ಸನ್‍ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿರುವ ಡೇವಿಡ್ ವಾರ್ನರ್ 21 ಪಂದ್ಯಗಳಲ್ಲಿ 43.63 ಸರಾಸರಿಯಲ್ಲಿ 829 ರನ್ ಗಳಿಸಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದರು. ಉಳಿದಂತೆ ರೋಹಿತ್ ಶರ್ಮಾ 26 ಓವರ್ ಗಳಲ್ಲಿ 45ರ ಸರಾಸರಿಯಲ್ಲಿ 704 ರನ್ ಗಳಿಸಿದ್ದು, ಇದರಲ್ಲಿ ಒಂದು ಶತಕ ಸೇರಿದಂತೆ 6 ಅರ್ಧಶತಕಗಳು ಸೇರಿದೆ. ಉಳಿದಂತೆ ಈ ಪಟ್ಟಿಯಲ್ಲಿ 818 ರನ್ ಗಳೊಂದಿಗೆ ಸುರೇಶ್ ರೈನಾ ಮೂರನೇ ಸ್ಥಾನದಲ್ಲಿದ್ದು, 674 ಮತ್ತು 656 ರನ್ ಗಳೊಂದಿಗೆ ಕ್ರಮವಾಗಿ ಕೊಹ್ಲಿ, ಶಿಖರ್ ಧವನ್ 4 ಮತ್ತು 5ನೇ ಸ್ಥಾನ ಪಡೆದಿದ್ದಾರೆ.

MI 2 1

ಇತ್ತ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬೌಲಿಂಗ್ ದಾಳಿಗೆ ತತ್ತರಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಟೂರ್ನಿಯ ಮೊದಲ ಪಂದ್ಯದಲ್ಲೇ ಸೋಲುಂಡಿತ್ತು. ಚೆನ್ನೈ ವಿರುದ್ಧದ ಡೆಬ್ಯು ಪಂದ್ಯದಲ್ಲಿ ಸೋಲುಂಡಿದ್ದ ಮುಂಬೈ, ಕೋಲ್ಕತ್ತಾ ವಿರುದ್ಧದ ಗೆಲುವಿನೊಂದಿಗೆ ಐಪಿಎಲ್-2020ಯಲ್ಲಿ ಮೊದಲ ಜಯ ಪಡೆದು ಕಮ್‍ಬ್ಯಾಕ್ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *