ಐಪಿಎಲ್ ನಂ.1 ದಾಖಲೆಯ ಸನಿಹದಲ್ಲಿ ರವೀಂದ್ರ ಜಡೇಜಾ

Public TV
1 Min Read
Ravindra Jadeja a

ಅಬುಧಾಬಿ: ಚೆನ್ನೈ ಸೂಪರ್ ಕಿಂಗ್ಸ್ ಆಲ್‍ರೌಂಡರ್ ರವೀಂದ್ರ ಜಡೇಜಾ ಐಪಿಎಲ್ 2020ರ ಆವೃತ್ತಿಯಲ್ಲಿ ಅಪರೂಪದ ದಾಖಲೆ ನಿರ್ಮಿಸುವ ಸನಿಹದಲ್ಲಿದ್ದಾರೆ.

ಯುಎಇನಲ್ಲಿ ಸೆ.19 ರಿಂದ ನ.10ರ ವರೆಗೂ 2020ರ ಐಪಿಎಲ್ ಟೂರ್ನಿ ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಕಿ ಆಗಲಿವೆ.

Ravindra Jadeja

ಐಪಿಎಲ್ ಮೊದಲ ಆವೃತ್ತಿಯಿಂದ 4 ಟೂರ್ನಿಗಳನ್ನು ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಜಡೇಜಾರನ್ನು 2012ರಲ್ಲಿ ಚೆನ್ನೈ ತಂಡ 9.27 ಕೋಟಿ ರೂ.ಗೆ ಖರೀದಿ ಮಾಡಿತ್ತು. ಆ ಬಳಿಕ ಚೆನ್ನೈ ತಂಡದಲ್ಲಿ ಪ್ರಮುಖ ಆಲ್‍ರೌಂಡರ್ ಆಗಿ ಸ್ಥಾನ ಪಡೆದಿರುವ ಜಡೇಜಾ, ಇದುವರೆಗೂ 170 ಪಂದ್ಯಗಳಿಂದ, 1,927 ರನ್ ಹಾಗೂ 108 ವಿಕೆಟ್ ಪಡೆದಿದ್ದಾರೆ.

ಐಪಿಎಲ್ 2020ರ ಆವೃತ್ತಿಯಲ್ಲಿ ಜಡೇಜಾ 70 ರನ್ ಗಳಿಸಿದರೇ ಟೂರ್ನಿಯ ಇತಿಹಾಸದಲ್ಲಿ 2 ಸಾವಿರ ರನ್ ಹಾಗೂ 100 ವಿಕೆಟ್ ಪಡೆದ ಮೊದಲ ಆಲ್‍ರೌಂಡರ್ ಎಂಬ ಹೆಗ್ಗಳಿಕೆಯನ್ನು ಪಡೆಯಲಿದ್ದಾರೆ. ಜಡೇಜಾ ಬಳಿಕ ಈ ಪಟ್ಟಿಯಲ್ಲಿ ಶೇನ್ ವಾಟ್ಸನ್ 3,575 ರನ್, 92 ವಿಕೆಟ್‍ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. 2019ರ ಐಪಿಎಲ್ ಆವೃತ್ತಿಯಲ್ಲಿ ವಾಟನ್ಸ್ ಒಂದು ಓವರ್ ಸಹ ಬೌಲ್ ಮಾಡಿರಲಿಲ್ಲ. ಉಳಿದಂತೆ ಡ್ವೇನ್ ಬ್ರಾವೋ 1,483 ರನ್, 147 ವಿಕೆಟ್‍ಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *