ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಜ್ಯೂನಿಯರ್ ಕ್ರಿಸ್ ಗೇಲ್ ಸಿಕ್ಸರ್ ಸಿಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ವೆಸ್ಟ್ ಇಂಡೀಸ್ ತಂಡದ ಎಡಗೈ ಬ್ಯಾಟ್ಸ್‌ಮನ್ ಕ್ರಿಸ್‌ಗೇಲ್ ಸಿಕ್ಸ್ ಎತ್ತುವುದರಲ್ಲಿ ಎತ್ತಿದ ಕೈ. ಈಗ ಅವರಂತೆ ಪುಟ್ಟ ಪೋರನೊಬ್ಬ ಬ್ಯಾಟ್ ಬೀಸಿದ್ದಾನೆ.
ಪ್ಲಾಸ್ಟಿಕ್ ಬಾಲ್‌ನಲ್ಲಿ ಮೆಟ್ಟಿಲಿನಲ್ಲಿ ಆಟವಾಡಿದ್ದು ಬ್ಯಾಟ್‌ನಿಂದ ಭರ್ಜರಿ ಸಿಕ್ಸ್ ಸಿಡಿಸಿದ್ದಾನೆ. ಬಾಲಗಾಲನ್ನು ಎತ್ತಿ ಸಿಕ್ಸ್ ಸಿಡಿಸುತ್ತಿರುವ ಈ ವಿಡಿಯೋ ಈಗ ವೈರಲ್ ಆಗಿದೆ.
View this post on Instagram
How good is this young kid!!! #talented #aakashvani #feelitreelit #feelkaro
ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಇಂದು ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿ ಈ ಸಣ್ಣ ಬಾಲಕ ಹೇಗೆ ಆಡುತ್ತಿದ್ದಾನೆ ನೋಡಿ ಎಂದು ಬರೆದಿದ್ದಾರೆ.
ಈ ವಿಡಿಯೋಗೆ ಕೆಲವರು ಕ್ರಿಸ್‌ಗೇಲ್ ರೀತಿ ಆಡುತ್ತಿದ್ದಾನೆ ಕೆಲವರು ಯುವರಾಜ್ ಸಿಂಗ್ ರೀತಿ ಸಿಕ್ಸ್ ಸಿಡಿಸುತ್ತಿದ್ದಾನೆ ಎಂದು ಕಮೆಂಟ್ ಮಾಡುತ್ತಿದ್ದಾರೆ.