ರಾಜಕೀಯ ಕೈವಾಡ ಇದೆ, ನನ್ನ ಮುಗಿಸೋದು ಅಷ್ಟು ಸುಲಭ ಅಲ್ಲ: ಶಾಸಕ ಜಮೀರ್

Public TV
3 Min Read
JAMEER

– ಕರ್ನಾಟಕ ಪೊಲೀಸ್ ನಂಬರ್ ಒನ್, ಅವರ ಮೇಲೆ ವಿಶ್ವಾಸ ಇದೆ
– ಕಳ್ಳನ ಜೊತೆ ಫೋಟೋ ತೆಗೆಸಿಕೊಂಡ್ರೆ ನಾನು ಕಳ್ಳ ಅನ್ನೋಕೆ ಆಗುತ್ತಾ

ಬೆಂಗಳೂರು: ಎಲ್ಲೋ ಒಂದು ಕಡೆ ರಾಜಕೀಯ ಕೈವಾಡ ಇದೆ. ನಾನು ಬೆಳೆಯುತ್ತಿರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನನ್ನನ್ನು ಮುಗಿಸಬೇಕು ಎಂದು ತೀರ್ಮಾನ ಮಾಡುತ್ತಿದ್ದಾರೆ. ಆದರೆ ನಮ್ಮ ರಾಜ್ಯದ ಪೊಲೀಸರು ಯಾವ ರಾಜ್ಯದಲ್ಲೂ ಇಲ್ಲ. ನಂಬರ್ ಒನ್ ಪೊಲೀಸರು ಎಂದರೆ ಕರ್ನಾಟಕ ಪೊಲೀಸ್. ಅವರ ಬಗ್ಗೆ ವಿಶ್ವಾಸ ಇದೆ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ. ಇದನ್ನೂ ಓದಿ: ಕ್ಯಾಸಿನೋಗೆ ಹೋದ್ರು ಅನ್ನೋದು ತಪ್ಪಲ್ಲ: ಜಮೀರ್ ನಡೆ ಸಮರ್ಥಿಸಿಕೊಂಡ ಸಿದ್ದರಾಮಯ್ಯ

zameer ahmed

ವರದಿಗಾರರೊಂದಿಗೆ ಮಾತನಾಡಿದ ಶಾಸಕ ಜಮೀರ್, ಕೊರೊನಾದಿಂದಾಗಿ ನಾನು ಏನೂ ಮಾತನಾಡಲಿಲ್ಲ. ಪೊಲೀಸ್ ಠಾಣೆಯಲ್ಲೂ ಸಂಬರಗಿ ವಿರುದ್ಧ ದೂರು ಕೊಟ್ಟಿದ್ದೇನೆ. ಕಾನೂನಿನ ಮೂಲಕ ಹೋರಾಟ ಮಾಡುತ್ತಿದ್ದೇನೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ನಮ್ಮ ರಾಜ್ಯದ ಪೊಲೀಸರು ಯಾವ ರಾಜ್ಯದಲ್ಲೂ ಇಲ್ಲ. ನಂಬರ್ ಒನ್ ಪೊಲೀಸರು ಎಂದರೆ ಕರ್ನಾಟಕ ಪೊಲೀಸ್. ಅವರ ಬಗ್ಗೆ ವಿಶ್ವಾಸ ಇದೆ. ಸಂಬರಗಿ ಒಳ್ಳೆ ಕೆಲಸ ಮಾಡುತ್ತಿದ್ದಾರೆ, ಮಾಡಲಿ. ಅವರು ನನ್ನ ಮೇಲೆ ಎಲ್ಲೂ ಡ್ರಗ್ಸ್ ಆರೋಪ ಮಾಡಿಲ್ಲ ಎಂದರು. ಇದನ್ನೂ ಓದಿ: ಅಲ್ಪಸಂಖ್ಯಾತ ಅನ್ನೋದು ರಕ್ಷಣೆಯ ಟ್ಯಾಗ್ ಅಲ್ಲ: ಶಾಸಕ ಜಮೀರ್‌ಗೆ ಸಚಿವ ಸುಧಾಕರ್ ಟಾಂಗ್

prashant sambargi

ಎಲ್ಲೋ ಒಂದು ಕಡೆ ರಾಜಕೀಯ ಕೈವಾಡ ಇದೆ. ನಾನು ಬೆಳೆಯುತ್ತಿರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನನ್ನನ್ನು ಮುಗಿಸಬೇಕು ಎಂದು ತೀರ್ಮಾನ ಮಾಡುತ್ತಿದ್ದಾರೆ. ಆದರೆ ಜಮೀರ್ ಮುಗಿಸುವುದು ಅಷ್ಟು ಸುಲಭ ಅಲ್ಲ. ನಾನು ಯಾವುದೇ ತಪ್ಪು ಮಾಡಲು ಹೋಗುವುದಿಲ್ಲ ಎಂದು ಪ್ರಮಾಣ ಮಾಡಿದರು. ಇದನ್ನೂ ಓದಿ: ನಾನು ಅಲ್ಪಸಂಖ್ಯಾತನಾಗಿದ್ದೇನೆ, ನನ್ನನ್ನು ತುಳಿಯಲು ನೋಡಲಾಗುತ್ತಿದೆ – ಜಮೀರ್‌

ZAMEER 5

ನನಗೂ ಫಾಝಿಲ್‍ಗೂ ಪರಿಚಯ ಇಲ್ಲ. ಕಳ್ಳ ನನ್ನ ಜೊತೆ ನಿಂತು ಫೋಟೋ ತೆಗೆಸಿಕೊಂಡರೆ ನಾನು ಕಳ್ಳ ಅನ್ನೋಕೆ ಆಗುತ್ತಾ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾಗಿ ನನ್ನ ಜೊತೆ ಯಾರೋ ಫೋಟೋ ತೆಗೆಸಿಕೊಳ್ಳುತ್ತಾರೆ. ಆದ್ದರಿಂದ ನಾನು ಭಾಗಿಯಾಗಿರುತ್ತೀನಾ ಎಂದು ಪ್ರಶ್ನೆ ಮಾಡಿದರು. ಡ್ರಗ್ಸ್ ದಂಧೆಯಲ್ಲಿ ಫಾಝಿಲ್ ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ. ಫಾಝಿಲ್‍ಗೂ ನನಗೂ ಯಾವುದೇ ಸಂಬಂಧವಿಲ್ಲ. ಮೂರು ವರ್ಷಗಳಿಂದ ಅವನು ನನಗೆ ಕಂಡೇ ಇಲ್ಲ ಎಂದು ಜಮೀರ್ ಹೇಳಿದರು.

sanjana galrani

ವರ್ಷಕ್ಕೆ ಒಮ್ಮೆ ಉಮ್ರಾಗೆ ನಾನು ಹೋಗಿದ್ದೇನೆ. ಅಲ್ಲಿಗೆ ಎಲ್ಲರೂ ಬರುತ್ತಾರೆ, ಅವನೂ ಬಂದಿರಬಹುದು. ಉಮ್ರಾಗೆ ರಾಜ್ಯದಿಂದ ಸಾವಿರಾರು ಜನ ಬರುತ್ತಾರೆ. ನಾನು 23 ವರ್ಷದಿಂದ ಉಮ್ರಾಗೆ ಹೋಗುತ್ತಿದ್ದೇನೆ. ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದರೆ ಫಾಝಿಲ್‍ಗೆ ಗಲ್ಲು ಶಿಕ್ಷೆ ಆಗಬೇಕು, ಅದೇ ರೀತಿ ನಾನು ಭಾಗಿಯಾಗಿದ್ದರೆ ನನಗೂ ಗಲ್ಲು ಶಿಕ್ಷೆ ಆಗಬೇಕು ಎಂದು ಈ ಹಿಂದೆಯೇ ನಾನು ಮಾಧ್ಯಮಗಳಲ್ಲಿ ಹೇಳಿದ್ದೇನೆ ಎಂದರು.

rmg hdk 2 1

ಮಾಜಿ ಸಿಎಂ ಕುಮಾರಸ್ವಾಮಿ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿ ಜಮೀರ್, ಕೊಲಂಬೋಗೆ ಹೋಗುವುದು ತಪ್ಪಾ. ನಾನು ನನ್ನ ಫ್ಯಾಮಿಲಿ ಜೊತೆ ಎರಡು ಭಾರಿ ಹೋಗಿದ್ದೇನೆ. ಕುಮಾರಸ್ವಾಮಿಯವರ ಜೊತೆಗೂ ಹೋಗಿದ್ದೇನೆ. ಜೆಡಿಎಸ್ ಶಾಸಕರ ಜೊತೆ ಕೊಲಂಬೋಗೆ ಹೋಗಿದ್ದೇವೆ. ಕೊಲಂಬೋಗೆ ಪ್ರವಾಸಕ್ಕೆ ಹೋಗಿದ್ದು, ಕೊಲಂಬೋಗೆ ಹೋದರೆ ಕ್ಯಾಸಿನೋಗೆ ಹೋದಂಗೆ ಅಂದುಕೊಳ್ಳೋದಾ. ನಾವು ಮನಸ್ಸಿನ ಶಾಂತಿ, ನೆಮ್ಮದಿಗಾಗಿ ಹೋಗಿರುತ್ತೇವೆ ಎಂದು ಜಮೀರ್ ಸ್ಪಷ್ಟಪಡಿಸಿದರು.

raksh

ನಾನು ಯಾವುದೇ ತಪ್ಪನ್ನೂ ಮಾಡಿಲ್ಲ. ಸಂಜನಾ ನನ್ನ ಜೊತೆ ಹೋಗಿದ್ದಾರೆ ಅಂತ ಆರೋಪ ಮಾಡಿದ್ದಾರೆ. ಸಂಜನಾ ಏನಾದರೂ ದಾಖಲೆ ಕೊಟ್ಟಿದ್ದಾರ, ಈಗ ಸಂಜನಾ ಬಿಟ್ಟು ಫಾಝಿಲ್ ಇಟ್ಟುಕೊಂಡಿದ್ದೀರ, ನಾನು ಎಲ್ಲೂ ತಪ್ಪು ಮಾಡಿಲ್ಲ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಸಂಜನಾ ಜೊತೆ ಜಮೀರ್ ಹೋಗಿದ್ದರೂ ಅಂತ ಸಂಬರಗಿ ಹೇಳಿದ್ದು, ಹೀಗಾಗಿ ಅವರನ್ನೇ ಕೇಳಿ. ಸಂಜನಾ ಜೊತೆ ನಾನು ಹೋಗಿರೋ ಒಂದು ಫೋಟೋ ತೋರಿಸಲಿ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *