ಸಂಸತ್ ಅಧಿವೇಶನದ ಮೊದಲು ಪ್ರಧಾನಿ ಮೋದಿ ಮಾತು

Public TV
2 Min Read
PM Modi

-ಕೊರೊನಾಗೆ ಲಸಿಕೆ ಸಿಗೋವರೆಗೂ ನಿರ್ಲಕ್ಷ್ಯ ಬೇಡ

ನವದೆಹಲಿ: ಇಂದಿನಿಂದ ಸಂಸತ್ ಅಧಿವೇಶನ ಆರಂಭವಾಗಲಿದ್ದು, ಶಿಷ್ಟಾಚಾರದ ಪ್ರಕಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಧ್ಯಮಗಳನ್ನ ಉದ್ದೇಶಿಸಿ ಮಾತನಾಡಿದರು.

ಈ ಬಾರಿ ವಿಭಿನ್ನ ಪರಿಸ್ಥಿತಿಯಲ್ಲಿ ಅಧಿವೇಶನ ಆರಂಭಗೊಳ್ಳಲಿದೆ. ಕೊರೊನಾ ಜೊತೆಗೆ ಕರ್ತವ್ಯ ನಿರ್ವಹಿಬೇಕಾದ ಸ್ಥಿತಿಯಲ್ಲಿ ನಾವಿದ್ದೇವೆ. ಗಡಿಯಲ್ಲಿ ಚೀನಾ ವಿರುದ್ಧ ಹೋರಾಡುತ್ತಿರುವ ಸೈನಿಕರಿಗಾಗಿ ಎಲ್ಲ ಸಂಸದರು ಒಗ್ಗಟ್ಟು ಪ್ರದರ್ಶಿಸಬೇಕಿದೆ. ನನಮ್ಮ ಸಂಸದರು ಇಂತಹ ಕಠಿಣ ಪರಿಸ್ಥಿತಿಯಲ್ಲೂ ಕರ್ತವ್ಯವನ್ನ ಆಯ್ಕೆ ಮಾಡಿಕೊಂಡಿದ್ದಕ್ಕೆ ಧನ್ಯವಾದ ಹೇಳುತ್ತೇನೆ. ಬಜೆಟ್ ಅಧಿವೇಶನವನ್ನ ಸಮಯಕ್ಕಿಂಂತ ಮುಂಚಿತವಾಗಿ ನಿಲ್ಲಿಸಬೇಕಾಯ್ತು ಎಂದರು.

ದುರ್ಗಮ ಪರ್ವತ ಶ್ರೇಣಿಗಳಲ್ಲಿ ನಿಂತುನಮ್ಮ ಸೈನಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾವು ಸಹ ಸೇನೆಯ ದೇಶವಿದೆ ಎಂಬ ಸಂದೇಶವನ್ನು ರವಾನಿಸಬೇಕು. ಸೈನಿಕರೊಂದಿಗೆ ನಾವಿದ್ದೇವೆ ಎಂದು ಇಡೀ ಸದನವಿದೆ. ಅಧಿವೇಶನದಲ್ಲಿ ಹಲವು ವಿಷಯಗಳ ಬಗ್ಗೆ ಗಹನವಾದ ಚರ್ಚೆಗಳು ನಡೆಯಲಿವೆ. ಎಷ್ಟು ಆಳವಾದ ಚರ್ಚೆಗಳು ನಡೆಯುತ್ತೋ ಅಷ್ಟು ಸದನ ಮತ್ತು ದೇಶಕ್ಕೆ ಲಾಭದಾಯವಾಗಲಿದೆ. ಕೊರೊನಾ ವೈರಸ್ ಹಿನ್ನೆಲೆ ಸದನಗಳಲ್ಲಿ ಹಲವು ನಿಯಮಗಳನ್ನ ರೂಪಿಸಲಾಗಿದ್ದು, ಎಲ್ಲರೂ ಪಾಲಿಸಬೇಕು ಎಂದು ತಿಳಿಸಿದರು.

ಮಾಹಾಮಾರಿ ಕೊರೊನಾಗೆ ಲಸಿಕೆ ಸಿಗೋವರೆಗೂ ನಿರ್ಲಕ್ಷ್ಯ ಬೇಡ. ನಮ್ಮ ವಿಜ್ಞಾನಿಗಳು ಲಸಿಕೆ ಕಂಡುಹಿಡಿಯುವಲ್ಲಿ ಆದಷ್ಟು ಬೇಗ ಸಫಲರಾಗಬೇಕಿದೆ. ವಿಶ್ವದ ಯಾವುದೇ ಮೂಲೆಯಿಂದ ಔಷಧಿ ಸಿದ್ಧವಾದ್ರೆ ಅದುವೇ ಸಂತೋಷದ ವಿಚಾರ. ಹಾಗೆ ಪತ್ರಕರ್ತರು ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ ಎಂದು ಹೇಳಿದರು.

ಈ ಬಾರಿ ಕಲಾಪಗಳು ನಿರ್ಧಿಷ್ಟವಾಧಿಗೆ ನಡೆಯದೇ ಕೇವಲ ನಾಲ್ಕು ಗಂಟೆಗಷ್ಟೇ ಸೀಮಿತವಾಗಲಿದೆ. ಇಂದು ಮೊದಲು ಲೋಕಸಭೆ ಬಳಿಕ ರಾಜ್ಯಸಭೆ ಕಲಾಪ ನಡೆಯಲಿದೆ. ನಾಳೆಯಿಂದ ಬೆಳಗ್ಗೆ ರಾಜ್ಯಸಭೆ ಮತ್ತು ಮಧ್ಯಾಹ್ನ ಲೋಕಸಭೆ ಕಲಾಪ ನಡೆಯಲಿವೆ. ಸಮಯ ಅಭಾವದ ಹಿನ್ನೆಲೆಯಲ್ಲಿ ಪ್ರಶ್ನಾವಳಿ ಸಮಯ ರದ್ದು ಮಾಡಿದ್ದು, ಶೂನ್ಯ ಅವಧಿಯನ್ನು ಅರ್ಧಕ್ಕೆ ಇಳಿಸಲಾಗಿದೆ.

ಕಲಾಪಗಳಲ್ಲಿ ಭಾಗಿಯಾಗುವ ಸಂಸದರಿಗೆ 72 ಗಂಟೆ ಮುಂಚೆ ಕೊರೊನಾ ಟೆಸ್ಟ್ ಮಾಡಿಸಲು ಸೂಚಿಸಲಾಗಿತ್ತು. ಅದರಂತೆ ಕೊರೊನಾ ಟೆಸ್ಟ್ ಮಾಡಿಸಿರುವ ಸಂಸದರ ಪೈಕಿ ಐದು ಮಂದಿ ಲೋಕಸಭೆ ಸದಸ್ಯರಿಗೆ ಪಾಸಿಟಿವ್ ಇರುವುದು ದೃಢವಾಗಿದೆ.

Modi Joshi

ಕೇಂದ್ರವನ್ನು ತರಾಟೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಸೇರಿ ಎಲ್ಲಾ ವಿಪಕ್ಷಗಳು ಸಿದ್ಧವಾಗಿದೆ. ದೇಶದಲ್ಲಿನ ಆರ್ಥಿಕ ಕುಸಿತ, ಜಿಡಿಪಿ ಕುಸಿತ, ಉದ್ಯೋಗ ನಷ್ಟ, ಭಾರತ ಮತ್ತು ಚೀನಾ ಗಡಿ ವಿಚಾರ ಸೇರಿದಂತೆ ಹಲವು ಗಂಭೀರ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಮತ್ತು ಈ ಸಂಬಂಧ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳಲು ಸಿದ್ಧವಾಗಿದೆ. ವಿಪಕ್ಷಗಳ ಟೀಕೆಗೆ ಉತ್ತರ ನೀಡಲು ಮೋದಿ ಮತ್ತು ತಂಡ ಕೂಡ ಸಿದ್ಧವಾಗಿದ್ದು, ಕೊರೊನಾ ರಣಾರ್ಭಟದ ನಡುವೆ ಸದನದಲ್ಲಿ ವಾಕ್ಸಮರವೇ ನಡೆಯುವ ಸಾಧ್ಯತೆಗಳಿವೆ

Share This Article
Leave a Comment

Leave a Reply

Your email address will not be published. Required fields are marked *