ವಾಹನೋದ್ಯಮ ಶೇ.14.16 ರಷ್ಟು ಚೇತರಿಕೆ – ಆಗಸ್ಟ್‌ನಲ್ಲಿ ಯಾವ ವಾಹನಗಳು ಎಷ್ಟು ಮಾರಾಟವಾಗಿದೆ?

Public TV
2 Min Read
maruti suzuki manesar automobile

ನವದೆಹಲಿ: ಕೋವಿಡ್‌ 19 ವೇಳೆ ನೆಲಕಚ್ಚಿದ ವಾಹನ ಉದ್ಯಮ ಲಾಕ್‌ಡೌನ್‌ ತೆರವಾದ ಬಳಿಕ ಭಾರೀ ಪ್ರಮಾಣದಲ್ಲಿ ಚೇತರಿಕೆ ಕಂಡಿದೆ.

2019 ಆಗಸ್ಟ್‌ ತಿಂಗಳಿಗೆ ಹೋಲಿಸಿದರೆ ಶೇ.14.16ರಷ್ಟು ಚೇತರಿಕೆ ಕಂಡಿದೆ ಎಂದು ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ (ಎಸ್ಐಎಎಂ) ಹೇಳಿದೆ.

ಈ ವರ್ಷದ ಆಗಸ್ಟ್‌ನಲ್ಲಿ ಒಟ್ಟು 2,15,916 ಪ್ರಯಾಣಿಕ ವಾಹನಗಳ ಮಾರಾಟ ಆಗಿದ್ದರೆ ಹಿಂದಿನ ವರ್ಷದ ಆಗಸ್ಟ್‌ನಲ್ಲಿ ಒಟ್ಟು 1,89,129 ಮಾರಾಟ ಆಗಿತ್ತು. ಈ ಬಾರಿಯ ಆಗಸ್ಟ್‌ಗೂ ಮೊದಲಿನ ಒಂಬತ್ತು ತಿಂಗಳುಗಳ ಕಾಲ ಪ್ರಯಾಣಿಕ ವಾಹನಗಳ ಮಾರಾಟವು ನಿರಂತರವಾಗಿ ಕುಸಿತ ಕಂಡಿತ್ತು. ಆದರೆ ಈಗ ಆಟೋ ಕ್ಷೇತ್ರ ಚೇತರಿಕೆಯಾಗಿದ್ದು ಕೊರೊನಾ ಲಾಕ್‌ಡೌನ್‌ ಬಳಿಕ ಒಂದೊಂದೆ ಕ್ಷೇತ್ರಗಳು ಹಳಿಗೆ ಬರುತ್ತಿದ್ದು ನಿಧಾನವಾಗಿ ಆರ್ಥಿಕ ಪ್ರಗತಿ ಆಗುತ್ತಿದೆ.

maruti automobile

ಯಾವುದು ಎಷ್ಟು ಮಾರಾಟ?
ಈ ಬಾರಿಯ ಆಗಸ್ಟ್‌ ತಿಂಗಳಿನಲ್ಲಿ ಪ್ರಯಾಣಿಕ ಕಾರುಗಳ ಮಾರಾಟ ಶೇ. 14.13ರಷ್ಟು ಏರಿಕೆ ಕಂಡಿದೆ. ಈ ಬಾರಿ 1,24,715 ಆಗಿದ್ದರೆ 2019ರ ಆಗಸ್ಟ್‌ನಲ್ಲಿ 1,09,277 ಕಾರುಗಳು ಮಾರಾಟಗೊಂಡಿತ್ತು.

ಬಹು ಉಪಯೋಗಿ ವಾಹನಗಳ ಮಾರಾಟ ಶೇ.15.54ರಷ್ಟು ಏರಿಕೆಯಾಗಿದೆ. ಒಟ್ಟು 81,842 ಬಹು ಉಪಯೋಗಿ ವಾಹನಗಳು ಮಾರಾಟವಾಗಿದ್ದರೆ ಹಿಂದಿನ ವರ್ಷದ ಆಗಸ್ಟ್‌ನಲ್ಲಿ ಒಟ್ಟು 70,837 ವಾಹನಗಳು ಮಾರಾಟವಾಗಿತ್ತು.

car automobile showroom

 

ವ್ಯಾನ್‌ಗಳ ಮಾರಾಟದಲ್ಲಿ ಶೇ.3.82 ರಷ್ಟು ಹೆಚ್ಚಳವಾಗಿದೆ. ಹಿಂದಿನ ವರ್ಷದ ಆಗಸ್ಟ್‌ನಲ್ಲಿ ಒಟ್ಟು 9,015 ವ್ಯಾನ್‌ಗಳ ಮಾರಾಟ ಆಗಿತ್ತು. ಈ ಆಗಸ್ಟ್‌ನಲ್ಲಿ 9,359 ವ್ಯಾನ್‌ಗಳು ಮಾರಾಟವಾಗಿವೆ.

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.3ರಷ್ಟು ಹೆಚ್ಚಳ ಕಂಡುಬಂದಿದೆ. ಈ ವರ್ಷದ ಆಗಸ್ಟ್‌ನಲ್ಲಿ 15,59,665 ಮಾರಾಟವಾಗಿದ್ದರೆ ಕಳೆದ ವರ್ಷ 15,14,196 ಮಾರಾಟಗೊಂಡಿತ್ತು.

ದ್ವಿಚಕ್ರ ವಾಹನಗಳ ಪೈಕಿ ಬೈಕ್‌ಗಳ ಮಾರಾಟ ಶೇ.10.13ರಷ್ಟು ಬೆಳವಣಿಗೆಯಾಗಿದೆ. ಈ ಆಗಸ್ಟ್‌ನಲ್ಲಿ 10,32,476ರಷ್ಟು ಮಾರಾಟವಾಗಿದ್ದರೆ ಕಳೆದ ವರ್ಷ 9,37,486ರಷ್ಟು ಮಾರಾಟವಾಗಿತ್ತು. ಇದನ್ನೂ ಓದಿ: ಕಾರು ಪಾರ್ಕಿಂಗ್‌ ಸ್ಥಳ ಈಗ ಟೂರಿಸ್ಟ್‌ ಸ್ಪಾಟ್‌ – ವೈರಲ್‌ ವಿಡಿಯೋ ಸೆರೆಗೆ ಒಂದು ಕಮೆಂಟ್‌ ಕಾರಣ

maruti car plant automobile

ಸ್ಕೂಟರ್ ಮಾರಾಟದಲ್ಲಿ ಶೇ 12.3ರಷ್ಟು ಇಳಿಕೆ ಆಗಿದೆ. ಕಳೆದ ವರ್ಷ 5,20,898 ಸ್ಕೂಟರ್‌ ಮಾರಾಟಗೊಂಡಿದ್ದರೆ ಈ ವರ್ಷದ ಆಗಸ್ಟ್‌ನಲ್ಲಿ 4,56,848 ಸ್ಕೂಟರ್‌ ಮಾರಾಟಗೊಂಡಿದೆ.

ತ್ರಿಚಕ್ರ ವಾಹನ ಖರೀದಿಯಲ್ಲಿ ಶೇ.75.29ರಷ್ಟು ಭಾರೀ ಇಳಿಕೆಯಾಗಿದೆ. ಈ ವರ್ಷದ ಆಗಸ್ಟ್‌ನಲ್ಲಿ 14,534 ವಾಹನಗಳು ಮಾರಾಟಗೊಂಡಿದ್ದರೆ ಕಳೆದ ವರ್ಷ 58,818 ವಾಹನಗಳು ಮಾರಾಟಗೊಂಡಿತ್ತು.  ಇದನ್ನೂ ಓದಿ: ಶೀಘ್ರವೇ ಬರಲಿದೆ ಗುಜುರಿ ನೀತಿ – ಉದ್ದೇಶ ಏನು? ವಾಹನದ ದರ ನಿಗದಿ ಹೇಗೆ?

ಏರಿಕೆ ಯಾಕೆ?
ಲಾಕ್‌ಡೌನ್‌ ಅವಧಿಯಲ್ಲಿ ವಾಹನ ಖರೀದಿ ಮಾಡಲು ಆಗದವರು ಈ ಅವಧಿಯಲ್ಲಿ ಖರೀದಿಸಿದ್ದಾರೆ. ಎರಡನೇಯದಾಗಿ ಜನರು ಸಮೂಹ ಸಾರಿಗೆ ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಅಟೋ ಉದ್ಯಮ ಚೇತರಿಕೆ ಕಾಣುತ್ತಿದೆ.

Vehicle scrappage policy Automobile 6

Share This Article
Leave a Comment

Leave a Reply

Your email address will not be published. Required fields are marked *