ಬಾತ್‍ರೂಮಿನಲ್ಲಿಯೇ ಧಾರಾವಾಹಿ ನಟಿ ನೇಣಿಗೆ ಶರಣು!

Public TV
1 Min Read
SRAVANI SUICIDE

ಹೈದರಾಬಾದ್: ಇತ್ತೀಚೆಗೆ ಸೀರಿಯಲ್ ನಟ-ನಟಿಯರು ಆತ್ಮಹತ್ಯೆಯ ಮೊರೆ ಹೋಗುತ್ತಿರುವುದು ಹೆಚ್ಚಾಗುತ್ತಿದೆ. ಇದೇ ಸಾಲಿಗೆ ಇದೀಗ ತೆಲುಗಿನ ಧಾರಾವಾಹಿ ನಟಿ ಕೂಡ ಸೇರಿದ್ದಾರೆ.

ಹೌದು. ತೆಲುಗಿನ ಸೀರಿಯಲ್ ಗಳಲ್ಲಿ ಅಭಿನಯಿಸುತ್ತಿದ್ದ ಶ್ರಾವಣಿ ಅವರು ಹೈದಾರಾಬಾದ್ ನ ಮಧುರಾನಗರದಲ್ಲಿರುವ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ. ಈ ಘಟನೆ ಮಂಗಳವಾರ ರಾತ್ರಿ ನಡೆದಿದೆ.

sravani

ನಿನ್ನೆ ರಾತ್ರಿ ಶ್ರಾವಣಿ ಬಾತ್ ರೂಮಿಗೆ ತೆರಳಿದ್ದಾಳೆ. ಹೀಗೆ ಹೋದವಳು ಕೆಲ ಹೊತ್ತಾದರೂ ವಾಪಸ್ ಬರದಿದ್ದರಿಂದ ಅನುಮಾನಗೊಂಡ ಪೋಷಕರು ಬಾತ್ ರೂಮ್ ಬಾಗಿಲು ಒಡೆದಿದ್ದಾರೆ. ಈ ವೇಳೆ ಶ್ರಾವಣಿ ನೇಣು ಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಕುಟುಂಬದವರು ನಟಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ನಟಿಯ ಪೋಷಕರು ತಿಳಿಸಿದ್ದಾರೆ.

sravani kondapalli

ಕಳೆದ 8 ವರ್ಷಗಳಿಂದ ಶ್ರಾವಣಿ ತೆಲುಗಿನ ಧಾರಾವಾಹಿಗಳಲ್ಲಿ ನಟನೆ ಮಾಡುತ್ತಿದ್ದರು. ಪ್ರಸ್ತುತ ಈಕೆ ಮಾನಸು ಮಮತಾ, ಮೌನ ರಾಗಂ ಧಾರಾವಾಹಿಗಳಲ್ಲಿ ಹಾಗೂ ಇತರೆ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರು.

ಈ ಮಧ್ಯೆ ಕೆಲ ವರ್ಷಗಳ ಹಿಂದೆ ಕಾಕಿನಾಡದ ಗೊಲ್ಲಾಪ್ರೊಲುವಿನ ದೇವರಾಜು ರೆಡ್ಡಿ ಎಂಬಾತನ ಪರಿಚಯವಾಗಿದೆ. ತನಗೆ ಪೋಷಕರು ಇಲ್ಲ ಎಂದು ಹೇಳಿಕೊಂಡಿರುವ ಈತ ಕೆಲ ದಿನಗಳ ಬಳಿಕ ಶ್ರಾವಣಿಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಇದರಿಂದ ನೊಂದ ನಟಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

sravani actor 118522791 596955197667752 1362495642536603773 n

ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರಾವಣಿ ಪೋಷಕರು ಎಸ್‍ಆರ್ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *