ಬೆಂಗಳೂರು: ಇಂದು 9,319 ಮಂದಿಗೆ ಕೋವಿಡ್ 19 ಸೋಂಕು ಬಂದಿದ್ದು, 9,575 ಮಂದಿ ಬಿಡುಗಡೆಯಾಗಿದ್ದಾರೆ. 95 ಮಂದಿ ಮೃತಪಟ್ಟಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ 3,98,551ಕ್ಕೆ ಏರಿಕೆಯಾಗಿದೆ. ಈ ಪೈಕಿ 99,266 ಸಕ್ರಿಯ ಪ್ರಕರಣಗಳಿದ್ದರೆ 2,92,873 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಒಟ್ಟು ಇಲ್ಲಿಯವರೆಗೆ 6,393 ಮಂದಿ ಮೃತಪಟ್ಟಿದ್ದು, ಐಸಿಯುನಲ್ಲಿ 775 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 74,384 ಮಂದಿಗೆ ಪರೀಕ್ಷೆ ನಡೆಸಿದ್ದು, ಒಟ್ಟು 33,48,255 ಮಂದಿಗೆ ಕೋವಿಡ್19 ಪರೀಕ್ಷೆ ಮಾಡಲಾಗಿದೆ.
ಎಂದಿನಂತೆ ಇಂದು ಬೆಂಗಳೂರಿನಲ್ಲಿ 2,824 ಮಂದಿಗೆ ಸೋಂಕು ಬಂದಿದ್ದರೆ 4,540 ಮಂದಿ ಬಿಡುಗಡೆಯಾಗಿದ್ದಾರೆ. ಉಳಿದಂತೆ ಮೈಸೂರು 686, ಬೆಳಗಾವಿ 427, ಬಳ್ಳಾರಿ 396, ದಕ್ಷಿಣ ಕನ್ನಡದಲ್ಲಿ 326 ಮಂದಿಗೆ ಸೋಕು ದೃಢಪಟ್ಟಿದೆ.
ಐಸಿಯುನಲ್ಲಿ ಒಟ್ಟು 775 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಬೆಂಗಳೂರು 267, ಹಾಸನ 80, ಧಾರವಾಡದಲ್ಲಿ 68 ಮಂದಿ ದಾಖಲಾಗಿದ್ದಾರೆ.