ಬೆಂಗಳೂರು: ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಅನ್ವಯ ಇಂದು ರಾಜ್ಯದಲ್ಲಿ 9,280 ಮಂದಿಗೆ ಸೋಂಕು ದೃಢವಾಗಿದೆ. ಜೊತೆಗೆ ಇಂದು 6,161 ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇಂದು ದಾಖಲಾದ 9,280 ಜನರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,79,486ಕ್ಕೇರಿದೆ. ಇಂದು 6,161 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇದುವರೆಗೂ 2,74,196 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ರಾಜ್ಯದಲ್ಲಿ ಇಂದು 116 ಮಂದಿ ಸೋಂಕಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 6,170ಕ್ಕೇರಿದೆ. 785 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಬೆಂಗಳೂರಿನಲ್ಲಿಯೂ ಕೊರೊನಾ ಕೇಸ್ ಮತ್ತೆ 2 ಸಾವಿರದ ಗಡಿ ದಾಟಿದ್ದು, 2,963 ಮಂದಿಗೆ ಸೋಂಕು ದೃಢಪಟ್ಟಿದೆ.
ಉಳಿದಂತೆ ಬಳ್ಳಾರಿ 447, ಬೆಳಗಾವಿ 278, ದಕ್ಷಿಣ ಕನ್ನಡ 428, ಮೈಸೂರು 776, ತುಮಕೂರು 424, ಶಿವಮೊಗ್ಗ 350, ಧಾರವಾಡ 297, ದಾವಣಗೆರೆ 263, ಬಾಗಲಕೋಟೆ 98, ಬೆಂಗಳೂರು ಗ್ರಾಮಾಂತರ 204, ಬೀದರ್ 36, ಚಾಮರಾಜನಗರ 56, ಚಿಕ್ಕಬಳ್ಳಾಪುರ 206, ಚಿಕ್ಕಮಗಳೂರು 223, ಚಿತ್ರದುರ್ಗ 92, ಗದಗ 186, ಹಾವೇರಿ 149, ಕಲಬುರಗಿ 226, ಕೊಡಗು 44, ಕೋಲಾರ 86, ರಾಮನಗರ 73, ಉಡುಪಿ 187, ಉತ್ತರ ಕನ್ನಡ 178, ವಿಜಯಪುರ 85, ಯಾದಗಿರಿ 94 ಹಾಸನದ 340 ಮಂದಿಗೆ ಸೋಂಕು ದೃಢಪಟ್ಟಿದೆ.