ಬೆಂಗಳೂರು: ಸಿಸಿಬಿ ವಶದಲ್ಲಿರುವ ರಾಹುಲ್ ನನಗೆ ಮಾತ್ರವಲ್ಲ ಸಾಕಷ್ಟು ಸಿನಿಮಾ ಸ್ಟಾರ್ ಗಳಿಗೆ ಪರಿಚಯ ಇದ್ದಾರೆ ಎಂದು ನಟಿ ಸಂಜನಾ ಗಲ್ರಾನಿ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಡ್ರಗ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ನಟಿ ಸಂಜನಾಳ ಅಪ್ತ ರಾಹುಲ್‍ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವಿಚಾರವಾಗಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಜನಾ, ಮೂರು-ನಾಲ್ಕು ವರ್ಷಗಳಿಂದ ರಾಹುಲ್ ನನಗೆ ಪರಿಚಯ. ನನಗೆ ಮಾತ್ರ ಅಲ್ಲ ಸಾಕಷ್ಟು ಸಿನಿಮಾ ಸ್ಟಾರ್‌ಗಳಿಗೆ ಪರಿಚಯ ಇದ್ದಾರೆ. ಆಲ್ ಮೋಸ್ಟ್ ಇಡೀ ಬೆಂಗಳೂರಿಗೆ ರಾಹುಲ್ ಪರಿಚಯ ಎಂದರು.
ರಾಹುಲ್ ತುಂಬಾ ಒಳ್ಳೆಯ ಹುಡುಗ, ಅವನು ರಿಯಲ್ ಎಸ್ಟೇಟ್ ಮಾಡುತ್ತಾನೆ. ಜೇಕರ್ಬ್ ವರ್ಗಿಸ್ ನಿರ್ದೇಶನದ ಚಂಬಲ್ ಸಿನಿಮಾದಲ್ಲಿ ರಾಹುಲ್ ಸಣ್ಣ ಪಾತ್ರ ಮಾಡಿದ್ದಾನೆ. ರಾಹುಲ್‍ನನ್ನು ನಾನು ರಾಖೀ ಭಾಯ್ ಅಂತಾನೇ ಕರೆಯುತ್ತೇನೆ. ನಾವು ತುಂಬಾ ಕ್ಲೋಸ್ ಫ್ರೆಂಡ್ ಅವನು ನನ್ನ ರಾಖೀ ಅಣ್ಣ. ರಾಹುಲ್ ಆದಷ್ಟು ಬೇಗ ಈ ಎಲ್ಲಾ ಸಮಸ್ಯೆಗಳಿಂದ ಹೊರಗಡೆ ಬರುತ್ತಾನೆ ಎಂದು ಸಂಜನಾ ತಿಳಿಸಿದ್ದಾರೆ. ಇದನ್ನು ಓದಿ: ದೃಷ್ಟಿ ನಿವಾರಣೆಗೆ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೇನೆ: ಸಂಜನಾ
ಪೊಲೀಸರ ಮೇಲೆ ನನಗೆ ನಂಬಿಕೆ ಇದೆ, ನಾನು ತನಿಖೆಗೆ ಸಹಕರಿಸುತ್ತೇನೆ. ನಾನು ಬೆಂಗಳೂರು ಬಿಟ್ಟು ಎಲ್ಲಿಯೂ ಹೋಗಿಲ್ಲ. ಕಳೆದ ಡಿಸೆಂಬರ್ ಆದಮೇಲೆ ನಾನು ಪಾರ್ಟಿಗಳಿಗೆ ಹೋಗುವುದನ್ನು ಬಿಟ್ಟಿದ್ದೇನೆ. ನಾನು ಅಟೆಂಡ್ ಆಗಿರೊ ಯಾವುದೇ ಪಾರ್ಟಿಗಳಲ್ಲೂ ಡ್ರಗ್ಸ್ ಇರಲಿಲ್ಲ. ಕ್ರಿಸ್ ಮಸ್ ಪಾರ್ಟಿ ಮಾಡಿದ್ದೆ ಲಾಸ್ಟ್ ನಾನು ಯಾವುದೇ ಪಾರ್ಟಿ ಮಾಡಿಲ್ಲ. ನನ್ನ ಗ್ರಹಚಾರ ನಾನು ಅಂದು ಆ ಜಾಗಕ್ಕೆ ಹೋಗಬೇಕಾಗಿ ಬಂತು ಎಂದು ಡ್ರಗ್ಸ್ ಆರೋಪವನ್ನು ಸಂಜನಾ ತಳ್ಳಿ ಹಾಕಿದ್ದಾರೆ.