ಬೆಂಗಳೂರು: ಇಂದು 8,865 ಮಂದಿಗೆ ಸೋಂಕು ಬಂದಿದ್ದು, ಆಸ್ಪತ್ರೆಯಿಂದ 7,122 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು ರಾಜ್ಯದಲ್ಲಿ 104 ಮಂದಿ ಮೃತಪಟ್ಟಿದ್ದಾರೆ.
ಒಟ್ಟು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3,70,206ಕ್ಕೆ ಏರಿಕೆಯಾಗಿದ್ದು, ಆಸ್ಪತ್ರೆಯಿಂದ 2,68,035 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು 6,054 ಮಂದಿ ಮೃತಪಟ್ಟಿದ್ದಾರೆ. ಐಸಿಯುನಲ್ಲಿ 735 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಒಟ್ಟು 71,124 ಪರೀಕ್ಷೆಗಳನ್ನು ನಡೆಸಿದ್ದು ಇಲ್ಲಿಯವರೆಗೆ ಒಟ್ಟು 31,23,918 ಮಂದಿಗೆ ಕೋವಿಡ್ 19 ಪರೀಕ್ಷೆ ಮಾಡಲಾಗಿದೆ.
ಇಂದು ಬೆಂಗಳೂರಿನಲ್ಲಿ 3,189 ಮಂದಿಗೆ ಸೋಂಕು ಬಂದಿದ್ದರೆ 2,631 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 29 ಮಂದಿ ಮೃತಪಟ್ಟಿದ್ದಾರೆ. ಬಳ್ಳಾರಿಯಲ್ಲಿ 424, ಬೆಳಗಾವಿಯಲ್ಲಿ 454 ಮಂದಿಗೆ ಸೋಂಕು ಬಂದಿದೆ.
ಬೆಂಗಳೂರು ನಗರದಲ್ಲಿ 276, ಹಾಸನ 92, ಬೀದರ್ 32, ಬೆಳಗಾವಿ 21, ಬಳ್ಳಾರಿಯಲ್ಲಿ 18 ರೋಗಿಗಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.