ವಿಜಯಪುರ: ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಹರಡಿದ್ದು, ಆದಷ್ಟು ಬೇಗ ಡ್ರಗ್ಸ್ ಮುಕ್ತ ಕರ್ನಾಟಕ ಮಾಡಲು ತೀರ್ಮಾನಿಸಲಾಗಿದೆ ಎಂದು ಡಿಜಿ ಐಜಿಪಿ ಪ್ರವೀಣ್ ಸೂದ್ ಭರವಸೆ ವ್ಯಕ್ತಪಡಿಸಿದರು.
ನಗರದಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರ ಸೇರಿದಂತೆ ಜಿಲ್ಲೆಗಳಲ್ಲೂ ಹೆಚ್ಚಿನ ಕ್ರಮ ಕೈಗೊಳ್ಳುವಂತೆ ಐಜಿಪಿ ಹಾಗೂ ಎಸ್‍ಪಿ ಗಳಿಗೆ ಸೂಚಿಸಿದ್ದೇನೆ. ಮಹಾರಾಷ್ಟ್ರ, ಆಂಧ್ರದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳ ಗಡಿಯಲ್ಲಿ ಡ್ರಗ್ಸ್ ಒಳ ಬಾರದಂತೆ ತಡೆಯಲು ಮತ್ತು ಹೇಗೆ ಹತೋಟಿಗೆ ತರಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ. ಪೊಲೀಸ್ ಕಾರ್ಯಾಚರಣೆಗಳ ಬಗ್ಗೆ ತಮಗೆ ಶೀಘ್ರದಲ್ಲೇ ಫಲಿತಾಂಶ ಸಿಗಲಿದೆ ಎಂದು ತಿಳಿಸಿದರು.
ಈಗಾಗಲೇ ಹಲವೆಡೆ ದಾಳಿ ನಡೆಸಿ ಡ್ರಗ್ ಸೀಜ್ ಮಾಡಲಾಗಿದೆ. ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳುವಂತೆ ಐಜಿಪಿ ಗಳಿಗೆ ಹಾಗೂ ಆಯಾ ಜಿಲ್ಲಾ ಎಸ್‍ಪಿ ಗಳಿಗೆ ಸೂಚಿಸಿದ್ದೇನೆ. ಡ್ರಗ್ ಮಾಫಿಯಾ ಬಗ್ಗೆ ಕಾರ್ಯಾಚರಣೆ ನಡೆಯುತ್ತಿದೆ, ನಡೆಯುತ್ತಲೇ ಇರುತ್ತದೆ. ಯಾವುದೇ ಜಿಲ್ಲೆ ಯಾವುದೇ ರಾಜ್ಯದ ಗಡಿಗೆ ಹೊಂದಿಕೊಂಡಿದ್ದರೂ ಸಮಸ್ಯೆ ಇಲ್ಲ. ಗಡಿ ಜಿಲ್ಲೆಗಳಲ್ಲಿ ಡ್ರಗ್ ಒಳ ಬಾರದಂತೆ ಹೇಗೆ ತಡೆಯಬೇಕು ಮತ್ತು ಹೇಗೆ ಹತೋಟಿಗೆ ತರಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.
ಪೊಲೀಸ್ ಕಾರ್ಯಾಚರಣೆಗಳ ಬಗ್ಗೆ ತಮಗೆ ಶೀಘ್ರದಲ್ಲೇ ಫಲಿತಾಂಶ ಸಿಗಲಿದೆ. ಡ್ರಗ್ಸ್ ಪತ್ತೆಹಚ್ಚುವುದು, ತಡೆಗಟ್ಟುವ ಕೆಲಸ ಮಾಡುತ್ತಲೇ ಇದ್ದೇವೆ. ಡ್ರಗ್ಸ್ ಮುಕ್ತ ರಾಜ್ಯ ಮಾಡಲು ತೀರ್ಮಾನಿಸಲಾಗಿದೆ. ರಾಜ್ಯದಿಂದ ಆದಷ್ಟು ಬೇಗ ಡ್ರಗ್ಸ್ ಹೊರಹಾಕಲಿದ್ದೇವೆ ಎಂದು ಭರವಸೆ ನೀಡಿದರು.