– ಇದೊಂದು ಡ್ರಗ್ಸ್ ಜಿಹಾದ್ ಎಂದೇ ಹೇಳ್ಬೋದು
– ಪೊಲೀಸ್ರಿಗೂ ಡ್ರಗ್ಸ್ ಮಾಫಿಯಾದವ್ರಿಗೂ ಲಿಂಕ್ ಇದೆ
ದಾವಣಗೆರೆ: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಡ್ರಗ್ಸ್ ನ ಹಣದಿಂದಲೇ ನಮ್ಮ ಸರ್ಕಾರ ಕೆಡವಿದ್ದಾರೆ ಎಂದು ಹೇಳುತ್ತಾರೆ. ಹಾಗಾದರೆ ಇಂದ್ರಜಿತ್ ಲಂಕೇಶ್ ರೀತಿ ಕುಮಾರಸ್ವಾಮಿಯವರನ್ನು ಕೂಡ ವಿಚಾರಣೆ ನಡೆಸಿ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಮಗ ರಾಕೇಶ್ ಸಿದ್ದರಾಮಯ್ಯ ಕೂಡ ಸತ್ತಿದ್ದು ಡ್ರಗ್ಸ್ ನಿಂದಲೇ ಎನ್ನುವುದು ಗೊತ್ತಿದೆ. ಸಿದ್ದರಾಮಯ್ಯನವರಿಗೆ ಯುವ ಜನತೆಯೆ ಬಗ್ಗೆ ಕಾಳಜಿ ಇದ್ದಿದ್ದರೆ ಈ ರೀತಿ ಮಾಡ್ತಾ ಇರ್ಲಿಲ್ಲ. ಡ್ರಗ್ಸ್ ಹಣದಿಂದಲೇ ನಮ್ಮ ಸರ್ಕಾರ ಕೆಡವಿದ್ದಾರೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡುತ್ತಾರೆ. ಹಾಗಾದ್ರೆ ಇಂದ್ರಜಿತ್ ಲಂಕೇಶ್ ರೀತಿ ಕುಮಾರಸ್ವಾಮಿಯವರನ್ನು ಕೂಡ ವಿಚಾರಣೆಗೆ ಒಳಪಡಿಸಿ ಎಂದು ಮುತಾಲಿಕ್ ಆಗ್ರಹಿಸಿದರು.
ಇತ್ತಿಚಿನ ದಿನಗಳಲ್ಲಿ ಡ್ರಗ್ಸ್ ಹೆಸರು ಕೇಳಿಬರುತ್ತಿದೆ. ಇದೊಂದು ಡ್ರಗ್ಸ್ ಜಿಹಾದ್ ಎಂದೇ ಹೇಳಬಹುದು. ಮುಸ್ಲಿಂಮರಿಂದ ಬಹು ದೊಡ್ಡ ಕಾರ್ಯ ದಂಧೆ ನಡೆಯುತ್ತದೆ. ಯುವ ಜನತೆಯನ್ನು ದುರ್ಬಲ ಮಾಡಬೇಕು ಎನ್ನುವುದು ಅವರ ಉದ್ದೇಶ. ಪೊಲೀಸರಿಗೆ ಹಾಗೂ ಡ್ರಗ್ಸ್ ಮಾಫಿಯಾದವರಿಗೆ ಲಿಂಕ್ ಇದೆ. ಎಲ್ಲೆಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿದೆ. ಆದರೆ ರಾಜಕೀಯ ಶಕ್ತಿಗಳು ಇವರ ಕೈ ಕಟ್ಟಿಹಾಕುತ್ತಿದ್ದಾರೆ ಎಂದು ರಾಜಕಾರಣಿಗಳ ವಿರುದ್ಧ ಆರೋಪ ಮಾಡಿದರು. ಇದನ್ನೂ ಓದಿ: ಮೈತ್ರಿ ಸರ್ಕಾರ ಬೀಳಿಸಲು ಬಿಜೆಪಿಯಿಂದ ಡ್ರಗ್ಸ್ ಮಾಫಿಯಾ ಹಣ ಬಳಕೆ- ಎಚ್‍ಡಿಕೆ
ಕರ್ನಾಟಕ ಪೊಲೀಸ್ ಇಲಾಖೆಯ ಬೇಹುಗಾರಿಕೆ ವಿಫಲವಾಗಿದೆ. ಇದನ್ನು ತಡೆಯಲು ಎಲ್ಲಾ ಪಕ್ಷದವರು ವಿಫಲವಾಗಿದ್ದಾರೆ. 2009 ರಲ್ಲಿ ಪಬ್ ಗಲಾಟೆಯಾದಾಗ ಇದನ್ನು ತಡೆಗಟ್ಟಬಹುದಿತ್ತು. ನಾನು ಆಗಲೇ ಹೇಳಿದ್ದೆ ಪಬ್ ಗಳಲ್ಲಿ ಡ್ರಗ್ಸ್ ನಡೆಯುತ್ತದೆ ಅಂತ. ಆದರೆ ನನ್ನನ್ನು ಜೈಲಿಗೆ ಹಾಕಿದ್ರು. ಹ್ಯಾರಿಸ್ ಮಗ ನೆಲಪಾಡ್ ಗಲಾಟೆಯಾಯ್ತು. ಆಗ ಶೋಭಾ ಕರಂದ್ಲಾಜೆ ಹೇಳಿದ್ರು ಡ್ರಗ್ಸ್ ವಿಚಾರದಲ್ಲಿ ಗಲಾಟೆಯಾಗಿದೆ ಎಂದಿದ್ದರು. ಈಗ ನಿಮ್ಮದೇ ಸರ್ಕಾರವಿದೆ ಈಗ ಏನ್ ಮಾಡ್ತಾರೆ ನೋಡೋಣ ಎಂದರು.