ಸಕಲ ಸರ್ಕಾರಿ, ಮಿಲಿಟರಿ ಗೌರವಗಳೊಂದಿಗೆ ಪ್ರಣಬ್ ಮುಖರ್ಜಿ ಅಂತ್ಯಕ್ರಿಯೆ

Public TV
1 Min Read
Pranab Mukherjee 1

ನವದೆಹಲಿ: ಸಕಲ ಸರ್ಕಾರಿ, ಮಿಲಿಟರಿ ಗೌರವಗಳೊಂದಿಗೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಂತ್ಯಕ್ರಿಯೆ ದೆಹಲಿಯಲ್ಲಿ ಪೂರ್ಣವಾಗಿದೆ. ಪ್ರಣಬ್ ಪುತ್ರ ಅಭಿಜಿತ್ ಮುಖರ್ಜಿ ಅಂತ್ಯಕ್ರಿಯೆಯನ್ನು ನೆರವೇರಿಸಿದರು.

ದೆಹಲಿಯ ಲೋಧಿ ಚಿತಾಗಾರದಲ್ಲಿ ಕುಟುಂಬ ಸಂಪ್ರದಾಯದೊಂದಿಗೆ ಭಾರತ ರತ್ನ ಮುಖರ್ಜಿ ಅವರು ಅಂತ್ಯಕ್ರಿಯೆ ನಡೆಯಿತು. ಕೋವಿಡ್ ನಿಯಮಗಳ ಅನ್ವಯವೇ ಅಂತ್ಯಕ್ರಿಯೆ ನಡೆಸಲಾಗಿದೆ. ಪಿಪಿಇ ಕಿಟ್ ಧರಿಸಿದ್ದ ಸಿಬಂಧಿಗಳು ಪ್ರಣಬ್ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

Pranab Mukherjee a

ದೆಹಲಿಯ 10ನೇ ರಾಜಾಜಿ ಮಾರ್ಗದಲ್ಲಿರುವ ಪ್ರಣಬ್ ನಿವಾಸದಿಂದ ಅವರ ಪಾರ್ಥಿವ ಶರೀರವನ್ನು ಆಂಬುಲೆನ್ಸ್ ಮೂಲಕ ಚಿತಾಗಾರಕ್ಕೆ ತರಲಾಗಿತ್ತು. ಸಾಮಾನ್ಯವಾಗಿ ಗಣ್ಯರ ಅಂತಿಮ ಯಾತ್ರೆಯನ್ನು ಹೂಗಳಿಂದ ಅಲಂಕರಿಸಿದ ವಾಹನದಲ್ಲಿ ನಡೆಸಲಾಗುತ್ತದೆ. ಆದರೆ ಕೊರೊನಾ ಕಾರಣದಿಂದ ಆಂಬುಲೆನ್ಸ್ ನಲ್ಲಿ ಮೃತದೇಹವನ್ನು ತೆಗೆದುಕೊಂಡು ಹೋಗಿದ್ದರು.

ಇದಕ್ಕೂ ಮುನ್ನ ರಾಷ್ಟ್ರಪತಿ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ದೆಹಲಿ ಸಿಎಂ ಕೇಜ್ರಿವಾಲ್, ರಾಹುಲ್ ಗಾಂಧಿ, ಗುಲಾಂ ನಬೀ ಆಜಾದ್ ಅವರು ಪ್ರಣಬ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಪ್ರಣಬ್ ಅವರ ನಿಧನಕ್ಕೆ ಕೇಂದ್ರ ಕ್ಯಾಬಿನೆಟ್ ಸಂತಾಪ ಸೂಚಿಸಿದ್ದು, 2 ನಿಮಿಷಗಳ ಕಾಲ ಮೌನ ಆಚರಿಸಿ ಸಂತಾಪ ಸೂಚಿಸಿದ್ದಾಗಿ ಕೇಂದ್ರ ಗೃಹ ಇಲಾಖೆ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *