ತಂದೆಯೇ ಸುಪಾರಿ ಕೊಟ್ಟು ಮಗನನ್ನು ಕೊಲೆ ಮಾಡಿಸಿದ್ದಾರೆ: ತಾಯಿ ಆರೋಪ

Public TV
1 Min Read
HSN MURDER AV 1

– ತೆಂಗಿನಕಾಯಿ ಕೆಡವಿದ್ದೆ ತಪ್ಪಾಯ್ತಾ?

ಹಾಸನ: ಚನ್ನರಾಯಪಟ್ಟಣದ ಬೇಡಿಗನಹಳ್ಳಿ ಸಮೀಪ ನಡೆದ ಪುನೀತ್ ಕೊಲೆಯ ಹಿಂದೆ ತಂದೆ ಹಾಗೂ ಸೋದರನ ಕೈವಾಡ ಇದೆ ಎಂಬ ಶಂಕೆ ವ್ಯಕ್ತವಾಗಿದೆ. ಪುನೀತನ ತಾಯಿ ಯಶೋಧಮ್ಮ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಂದೆ ಹೇಮಂತ್ ಮತ್ತು ಪುನೀತ್ ನಡುವೆ ಕೆಲ ವರ್ಷಗಳಿಂದ ಆಸ್ತಿ ಹಂಚಿಕೆ ವಿಚಾರವಾಗಿ ವೈಷಮ್ಯ ಇತ್ತು. ಈ ಕಾರಣದಿಂದ ಪತಿ ಹಾಗೂ ಇನ್ನೊಬ್ಬ ಮಗ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ತಮ್ಮ ದೂರಿನಲ್ಲಿ ತಾಯಿ ಯಶೋಧಮ್ಮ ಮನವಿ ಮಾಡಿದ್ದಾರೆ.

HSN MURDER AV 2

ಮೂರು ವರ್ಷಗಳಿಂದ ತಂದೆ ಮತ್ತು ಪುನೀತ್ ಬೇರೆಯಾಗಿದ್ದರು. ಪುನೀತನೊಂದಿಗೆ ತಾಯಿ ಯಶೋಧಮ್ಮ ವಾಸವಾಗಿದ್ದರು ಈ ನಡುವೆ ತೋಟದಲ್ಲಿ ತೆಂಗಿನಕಾಯಿ ಕೆಡವಿದ್ದರಿಂದ ತಂದೆ ಹೇಮಂತ್ ತಮ್ಮ ಹಿರಿಯ ಮಗ ಪುನೀತ್‍ಗೆ ವಾರ್ನಿಂಗ್ ಮಾಡಿದ್ದರು. ಈ ಕಾರಣದಿಂದಲೇ ಕೊಲೆ ಮಾಡಲಾಗಿದೆ ಎಂದು ಯಶೋಧಮ್ಮ ದೂರು ನೀಡಿದ್ದು, ತಂದೆಯಿಂದಲೇ ಮಗನ ಹತ್ಯೆ ಆಗಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಶಂಕಿತ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *