ಬೆಳಗ್ಗೆಯಿಂದ ಸಂಜೆವರೆಗೂ ಲಿಫ್ಟ್‌ನಲ್ಲೇ ಶವ- ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ನಿರ್ಲಕ್ಷ್ಯ

Public TV
1 Min Read
GDG DEAD BODY IN LIFT AV 11

ಗದಗ: ಇಲ್ಲಿನ ಜಿಮ್ಸ್ ಆಸ್ಪತ್ರೆ ಸದಾ ವಿವಾದಗಳಿಗೆ ಕಾರಣವಾಗುತ್ತಿದೆ. ಇದೀಗ ಸಿಬ್ಬಂದಿ ಶವವನ್ನು ಲಿಫ್ಟ್ ನಲ್ಲೇ ಬಿಟ್ಟು ಹೋಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಆಸ್ಪತ್ರೆಯ ಲಿಪ್ಟ್‍ನಲ್ಲಿಯೇ ಶವ ಬಿಡುವುದು, ಐಸಿಯು ಬೆಡ್‍ಗಾಗಿ ರೋಗಿಗಳು ಪರದಾಡುವುದು ಜಿಮ್ಸ್ ನಲ್ಲಿ ನಿತ್ಯದ ಕತೆಯಾಗಿದೆ. ಅಂಬುಲೆನ್ಸ್ ಅಸ್ತವ್ಯಸ್ತತೆ ಕಾರಣದಿಂದ ಒಂದು ಕೋವಿಡ್ ಶವವನ್ನು ಬೆಳಗ್ಗೆಯಿಂದ ಸಾಯಂಕಾಲದವರೆಗೆ ಲಿಫ್ಟ್‍ನಲ್ಲೇ ಬಿಡಲಾಗಿತ್ತು ಎನ್ನಲಾಗುತ್ತಿದೆ.

GDG 1 2

ಕನಿಷ್ಠ ಶವಾಗಾರದಲ್ಲೇ ಇಟ್ಟು ಅಂಬುಲೆನ್ಸ್ ಬಂದ ನಂತರ ಸಾಗಿಸಬೇಕಿತ್ತು. ಆದರೆ ಸಿಬ್ಬಂದಿ ಲಿಫ್ಟ್ ನಲ್ಲಿ ಬಿಟ್ಟುಹೋಗಿದ್ದಾರೆ. ಕೊನೆಗೆ ಅಂಬುಲೆನ್ಸ್ ತಡವಾಗಿ ಬಂದ ನಂತರ ಶವಕ್ಕೆ ಲಿಫ್ಟ್‍ನಿಂದ ಮುಕ್ತಿ ಸಿಕ್ಕಿದ್ದು ಇದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಆಸ್ಪತ್ರೆಯ ಆವರಣದಲ್ಲಿಯೇ ಸಿಬ್ಬಂದಿ ಬಳಸಿ ಬಿಸಾಡಿದ ಹ್ಯಾಂಡ್‍ಗ್ಲೌಸ್, ಮಾಸ್ಕ್ ಮತ್ತು ಇತರ ಪಿಪಿಇ ಕಿಟ್‍ಗಳನ್ನು ಕಾಣಬಹುದಾಗಿದೆ.

GDG 2

ಆಸ್ಪತ್ರೆಯ ಮಹಡಿಯ ಮೆಟ್ಟಿಲುಗಳ ಮೇಲೂ ಪಿಪಿಇ ಕಿಟ್ ಬಿದ್ದಿವೆ. ಆಸ್ಪತ್ರೆಯ ಸಿಬ್ಬಂದಿ ಅಲ್ಲೆ ಓಡಾಡಿದ್ರೂ ಕ್ಯಾರೇ ಅಂತಿಲ್ಲ. ಬಳಸಿದ ಕಿಟ್‍ಗಳನ್ನು ಸೂಕ್ತ ರೀತಿಯಲ್ಲಿ ನಿಷ್ಕ್ರಿಯಗೊಳಿಸಿ ನಾಶ ಮಾಡಬೇಕು. ಆದರೆ ಅಂತಹ ಶಿಸ್ತು ಗದಗ ಜಿಮ್ಸ್ ಆಸ್ಪತ್ರೆನಲ್ಲಿ ಪಾಲಿಸದೇ ಇರುವುದು ವಿಪರ್ಯಾಸ. ಸಾಮಾನ್ಯ ಕೋವಿಡ್ ಬೆಡ್ ಮತ್ತು ಐಸಿಯು ಬೆಡ್‍ಗಳನ್ನು ಹೆಚ್ಚಿಸಬೇಕಿದ್ದ ಜಿಮ್ಸ್ ಆಡಳಿತ ಸೋಮಾರಿತನದಲ್ಲೇ ಕಾಲ ಹಾಕುತ್ತಿದೆ ಎಂಬ ಆರೋಪ ರೋಗಿಗಳದ್ದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *