ಯೂಟ್ಯೂಬ್ ವಿಡಿಯೋ ನೋಡಿ ಕಳ್ಳತನ- ಎಂಬಿಎ ಪದವೀಧರ ಅರೆಸ್ಟ್

Public TV
1 Min Read
MOBILE

– 7 ಲಕ್ಷ ರೂ. ಸಾಲ ತೀರಿಸಲು ಕಳ್ಳತನಕ್ಕಿಳಿದ ಯುವಕ

ಹೈದರಾಬಾದ್: ಎಂಬಿಎ ಪದವಿ ಪೂರ್ಣಗೊಳಿಸಿದರೂ ಉತ್ತಮ ಉದ್ಯೋಗ ಲಭಿಸದ ಕಾರಣ ಯುವಕ ಯೂಟ್ಯೂಬ್‍ನಲ್ಲಿ ವಿಡಿಯೋ ನೋಡಿ ಕಳ್ಳತನಕ್ಕಿಳಿದು ಪೊಲೀಸರ ಅತಿಥಿಯಾಗಿರುವ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ.

ವಿನೋದ್ ರಾಜ್ (26) ಬಂಧಿತ ಯುವಕನಾಗಿದ್ದು, ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮವರಂ ಬಳಿಯ ಗ್ರಾಮವೊಂದರ ನಿವಾಸಿ. ಈತ ಎಂಬಿಎ ಪದವಿ ಪೂರ್ಣಗೊಳಿಸಿ ಉತ್ತಮ ಉದ್ಯೋಗದ ನಿರೀಕ್ಷೆಯೊಂದಿಗೆ ಪ್ರಯತ್ನಿಸಿದರು ಯಾವುದೇ ಉದ್ಯೋಗ ಲಭಿಸಿರಲಿಲ್ಲ. ಆದರೆ ಸ್ನೇಹಿತರು, ಕುಟುಂಬದ ಆಪ್ತರ ಬಳಿ ಮಾಡಿದ್ದ 7 ಲಕ್ಷ ರೂ. ಸಾಲ ತೀರಿಸಲು ಗೂಗಲ್‍ನಲ್ಲಿ ಸುಲಭವಾಗಿ ಹಣ ಗಳಿಸುವ ಮಾರ್ಗಗಳ ಬಗ್ಗೆ ಸರ್ಚ್ ಮಾಡಿದ್ದ.

Police Jeep 1 2 medium

ಆರೋಪಿ ಆನ್‍ಲೈನ್‍ನಲ್ಲಿ ಹುಡುಕಾಟ ನಡೆಸುತ್ತಿದ್ದ ವೇಳೆ ಮನೆಗಳಲ್ಲಿ ಕಳ್ಳತನ ಮಾಡುವುದು ಹೇಗೆ ಎಂಬ ವಿಡಿಯೋವನ್ನು ಯೂಟ್ಯೂಬ್‍ನಲ್ಲಿ ನೋಡಿದ್ದ. ಅದಕ್ಕೆ ಅಗತ್ಯವಿದ್ದ ವಸ್ತುಗಳನ್ನು ಖರೀದಿ ಮಾಡಿ ಕಳೆದ ವರ್ಷ ಅಕ್ಟೋಬರ್ ನಲ್ಲಿ ಸರ್ಕಾರಿ ಉದ್ಯೋಗಿಯ ಮನೆಯಲ್ಲಿ ಕಳ್ಳತನ ಮಾಡಿ 5 ತೊಲೆ ಬಂಗಾರ, 5 ಕೆಜಿ ಬೆಳ್ಳಿ ಮತ್ತು ಕ್ಯಾಮೆರಾ ಕದ್ದು ಎಸ್ಕೇಪ್ ಆಗಿದ್ದ. ಆ ಬಳಿಕ ಕಂಪ್ಯೂಟರ್ ಸೆಂಟರ್ ಸೇರಿದಂತೆ ಹಲವು ಮನೆಗಳಲ್ಲಿ ಸರಣಿ ಕಳ್ಳತನ ಮಾಡಿಲು ಯಶಸ್ವಿಯಾಗಿದ್ದ. ಈ ವೇಳೆ ಸ್ಥಳೀಯರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸರಣಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲು ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.

police 1 e1585506284178 1 medium

ಸದ್ಯ ಬಂಧಿತ ಆರೋಪಿ ವಿನೋದ್ ರಾಜ್‍ನಿಮದ ಸುಮಾರು 3.50 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಉದ್ಯೋಗ ಸಿಗದೆ ಹಲವು ಚಟಗಳಿಗೆ ದಾಸನಾಗಿದ್ದ ವಿನೋದ್, ಅದಕ್ಕಾಗಿ ಸಾಲ ಮಾಡಿಕೊಂಡಿದ್ದ. ಈ ಸಾಲಗಳನ್ನು ತೀರಿಸಲು ಕಳ್ಳತನದ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದ ಎಂದು ಕ್ರೈಂ ಬ್ರ್ಯಾಂಚ್ ಎಸಿಪಿ ಪೆಂಟರಾವ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *