ವಿಶ್ವಾದ್ಯಂತ ಜಿಮೇಲ್‌ ಸೇವೆ ಡೌನ್‌

Public TV
Public TV - Digital Head
1 Min Read

ಕ್ಯಾಲಿಫೋರ್ನಿಯಾ: ಜಿಮೇಲ್‌ ಸೇವೆ ಡೌನ್‌ ಆಗಿದ್ದು ವಿಶ್ವಾದ್ಯಂತ ಬಳಕೆದಾರರು ಸಮಸ್ಯೆ ಎದುರಿಸುತ್ತಿದ್ದಾರೆ.

ಭಾರತ ಅಲ್ಲದೇ ಅಮೆರಿಕ, ಆಸ್ಟ್ರೇಲಿಯ, ಜಪಾನ್‌ ಸೇರಿದಂತೆ ವಿಶ್ವದ ಹಲವೆಡೆ ಬಳಕೆದಾರರಿಗೆ ಸಮಸ್ಯೆಯಾಗುತ್ತಿದೆ. ಇಂದು ಬೆಳಗ್ಗೆಯಿಂದಲೇ ಸೇವೆ ಡೌನ್‌ ಆಗಿದೆ. ಯಾವುದೇ ಇಮೇಲ್‌ ಮತ್ತು ಅಟ್ಯಾಚ್‌ ಫೈಲ್‌ಗಳನ್ನು ಸೆಂಡ್‌ ಮಾಡಲು ಆಗುತ್ತಿಲ್ಲ.

ಗೂಗಲ್‌ ಡ್ರೈವ್‌ನಲ್ಲೂ ಫೈಲ್‌ಗಳ ಅಪ್ಲೋಡ್‌, ಡೌನ್‌ಲೋಡ್‌ ಮತ್ತು ಶೇರ್‌ ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಗೂಗಲ್‌ ಪ್ರತಿಕ್ರಿಯಿಸಿ, ಸಮಸ್ಯೆ ಅರಿವಿಗೆ ಬಂದಿದೆ. ಶೀಘ್ರವೇ ಸಮಸ್ಯೆ ಬಗೆ ಹರಿಸುವುದಾಗಿ ತಿಳಿಸಿದೆ.

ಈ ರೀತಿ ಎರಡನೇ ಬಾರಿ ಜಿಮೇಲ್‌ನಲ್ಲಿ ಸಮಸ್ಯೆ ಕಾಣಿಸಿದೆ. ಜುಲೈನಲ್ಲಿ ಮೇಲ್‌ ಲಾಗಿನ್‌ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಬಳಿಕ ಸಮಸ್ಯೆಯನ್ನು ಬಗೆ ಹರಿಸಿತ್ತು. ಆದರೆ ಯಾಕೆ ಈ ಸಮಸ್ಯೆ ಸೃಷ್ಟಿಯಾಯಿತು ಎಂಬುದಕ್ಕೆ ಗೂಗಲ್‌ ಯಾವುದೇ ವಿವರಣೆ ನೀಡಿರಲಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಜನರು ಅಭಿಪ್ರಾಯಗಳನ್ನು ಬರೆದು ಹಾಕುತ್ತಿದ್ದು, ವಿಶ್ವದಲ್ಲೇ ಜಿಮೇಲ್‌ ಟ್ರೆಂಡ್‌ ಆಗಿದೆ.

Share This Article