ಮೈಸೂರು: ಆಗಸ್ಟ್ 19 ಮತ್ತು 21 ರಂದು ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಬುಧವಾರ ಅಮಾವಾಸ್ಯೆ ಹಾಗೂ ಶುಕ್ರವಾರ ಸ್ವರ್ಣಗೌರಿ ವೃತದ ಹಿನ್ನೆಲೆ ಬೆಟ್ಟಕ್ಕೆ ಬರುವ ಭಕ್ತರು ಹೆಚ್ಚುವ ಕಾರಣ ನಿರ್ಬಂಧ ವಿಧಿಸಲಾಗಿದೆ. ಹೆಚ್ಚು ಭಕ್ತರು ಆಗಮಿಸುವುದರಿಂದ ಸಾಮಾಜಿಕ ಅಂತರ ಹಾಗೂ ಇತೆರ ಕೊರೊನಾ ನಿಯಮಗಳ ಪಾಲನೆ ಕಷ್ಟ ಹೀಗಾಗಿ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಕುರಿತು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್.ಜಿ.ಶಂಕರ್ ಆದೇಶ ಹೊರಡಿಸಿದ್ದಾರೆ. ಈ ಎರಡು ದಿನ ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸುವಂತಿಲ್ಲ ಎಂದು ತಿಳಿಸಲಾಗಿದೆ.
ಮೈಸೂರಿನಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಹಿನ್ನೆನೆ ದೇವಸ್ಥಾನದಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ. ಇದರ ಭಾಗವಾಗಿ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಭಾನುವಾರ ಒಂದೇ ದಿನ ಮೈಸೂರಿನಲ್ಲಿ 620 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 10,535ಕ್ಕೆ ಹೆಚ್ಚಳವಾಗಿದೆ. 3,756 ಸಕ್ರಿಯ ಪ್ರಕರಣಗಳಿವೆ. ಮೈಸೂರಿನಲ್ಲಿ ಒಂದೇ ದಿನ 10 ಜನ ಸಾವನ್ನಪ್ಪಿದ್ದಾರೆ. ಈ ವರೆಗೆ ಒಟ್ಟು 304 ಜನ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಕಟ್ಟೆಚ್ಚರ ಕೈಗೊಳ್ಳಲಾಗುತ್ತಿದೆ.