3 ಸೆಕೆಂಡ್ ನಗ್ನವಾಗಿ ಮಾತಾಡಿದ್ಲು – ನಂತ್ರ ಯುವಕನ ಬೆತ್ತಲೆ ವಿಡಿಯೋ ರೆಕಾರ್ಡ್

Public TV
2 Min Read
mobile use 1

– ಮಹಿಳೆ ಕೇಳಿದ ತಕ್ಷಣ ನಗ್ನ ವಿಡಿಯೋ ಕಾಲ್ ಮಾಡಿದ
– ಯುವಕನ ಗೆಳತಿಗೆ ವಿಡಿಯೋ ಕ್ಲಿಪ್ ಸೆಂಡ್

ಮುಂಬೈ: ನಗ್ನ ವಿಡಿಯೋ ಇಟ್ಟುಕೊಂಡು ಮಹಿಳೆಯೊಬ್ಬಳು ಹಣಕ್ಕಾಗಿ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದಾಳೆ ಎಂದು ಯುವಕ ಪೊಲೀಸರಿಗೆ ದೂರು ನೀಡಿರುವ ಘಟನೆ ಮುಂಬೈ ನಗರದಲ್ಲಿ ನಡೆದಿದೆ.

21 ವರ್ಷದ ಯುವಕ ದೂರು ನೀಡಿದ್ದಾನೆ. ಈತ ಮುಂಬೈನ ಗೋರೆಗಾಂವ್‍ನಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾನೆ. ಮಹಿಳೆ ಸೋಶಿಯಲ್ ಮೀಡಿಯಾದಲ್ಲಿ ತನ್ನ ಹೆಸರು ಪ್ರಜ್ಞಾ ಎಂದು ಹೇಳಿಕೊಂಡು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದಾಳೆ ಎಂದು ಯುವಕ ದೂರಿನಲ್ಲಿ ತಿಳಿಸಿದ್ದಾನೆ.

man using mobile phone 1

ಏನಿದು ಪ್ರಕರಣ?
ಮೇ ತಿಂಗಳಲ್ಲಿ ಯುವಕನಿಗೆ ಸೋಶಿಯಲ್ ಮೀಡಿಯಾದ ಮೂಲಕ ಮಹಿಳೆಯ ಪರಿಚಯವಾಗಿದೆ. ನಂತರ ಇಬ್ಬರು ಪರಸ್ಪರ ಚಾಟಿಂಗ್ ಮಾಡುತ್ತಿದ್ದರು. ಒಂದು ದಿನ ಮಹಿಳೆ ಯುವಕನನ್ನು ವಿಡಿಯೋ ಕಾಲ್‍ನಲ್ಲಿ ಮಾತನಾಡಲು ಇಷ್ಟಪಡುತ್ತೀಯ ಎಂದು ಕೇಳಿದ್ದಾಳೆ. ಅದಕ್ಕೆ ಯುವಕ ಒಪ್ಪಿಗೆ ಸೂಚಿಸಿದ್ದು, ನಂತರ ಇಬ್ಬರು ವಿಡಿಯೋ ಕಾಲ್‍ನಲ್ಲಿ ಮಾತನಾಡಿದ್ದಾರೆ. ಆದರೆ ಮಹಿಳೆ ಕೊನೆಯ 3 ಸೆಕೆಂಡುಗಳ ಕಾಲ ನಗ್ನವಾಗಿ ಮಾತನಾಡಿದ್ದಾಳೆ.

ವಿಡಿಯೋ ಕಾಲ್ ಮುಗಿದ ನಂತರ ಮಹಿಳೆ ಮತ್ತೆ ಯುವಕನೊಂದಿಗೆ ಚಾಟಿಂಗ್ ಮಾಡಲು ಶುರು ಮಾಡಿದ್ದಾಳೆ. ಆಗ ವಿಡಿಯೋ ಕಾಲ್‍ನಲ್ಲಿ ನಗ್ನವಾಗಿ ಮಾತನಾಡುವಂತೆ ಯುವಕನ ಬಳಿ ಕೇಳಿಕೊಂಡಿದ್ದಾಳೆ. ಅದಕ್ಕೆ ಯುವಕ ಕೂಡ ಒಪ್ಪಿ ನಗ್ನವಾಗಿ ವಿಡಿಯೋ ಕಾಲ್‍ನಲ್ಲಿ ಮಾತನಾಡಿದ್ದಾನೆ. ಈ ವೇಳೆ ಮಹಿಳೆ ವಿಡಿಯೋ ಕರೆಯನ್ನು ರೆಕಾರ್ಡ್ ಮಾಡಿಕೊಂಡಿದ್ದಳು.

MONEY 3

ಕಾಲ್ ಕಟ್ ಆದ ತಕ್ಷಣ ಮಹಿಳೆ 20 ಸಾವಿರ ಹಣವನ್ನು ಕೇಳಿದ್ದಾಳೆ. ಒಂದು ವೇಳೆ ಹಣ ಕೊಟ್ಟಿಲ್ಲ ಎಂದರೆ ನಿನ್ನ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ವಿಡಿಯೋ ಕ್ಲಿಪ್ ಶೇರ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾಳೆ. ಇದರಿಂದ ಭಯಗೊಂಡು ಯುವಕ 2,000 ರೂ.ಗಳನ್ನು ಮಹಿಳೆಯ ಖಾತೆಗೆ ವರ್ಗಾಯಿಸಿದ್ದಾನೆ. ಆದರೆ ಮಹಿಳೆ ಆ ವಿಡಿಯೋವನ್ನು ಯುವಕನ ಗೆಳತಿಗೆ ಕಳುಹಿಸಿದ್ದಾಳೆ. ನಂತರ ಯುವಕ ಉಳಿದ ಹಣವನ್ನು ಕಳುಹಿಸಿದ್ದಾನೆ. ಹಣ ತನ್ನ ಖಾತೆಗೆ ಬರುತ್ತಿದ್ದಂತೆ ಯುವಕನ ಜೊತೆ ಮಾತನಾಡುವುದನ್ನು ಮಹಿಳೆ ನಿಲ್ಲಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

phone

ಮತ್ತೆ ಇದೀಗ ಮಹಿಳೆ ಹೆಚ್ಚಿನ ಹಣ ನೀಡುವಂತೆ ಯುವಕನಿಗೆ ಮೆಸೇಜ್ ಮಾಡಿದ್ದಾಳೆ. ಕೊನೆಗೆ ಯುವಕನ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾನೆ. ಹಣ ವರ್ಗಾವಣೆಯ ಸಂದರ್ಭದಲ್ಲಿ ಆರೋಪಿ ಮಹಿಳೆ ಲಾಲು ಪ್ರಸಾದ್ ಪ್ರಜ್ಞಾ ಜೈನ್ ಎಂಬ ಹೆಸರನ್ನು ಬಳಸಿದ್ದಾಳೆ ಎಂದು ಯುವಕ ದೂರಿನಲ್ಲಿ ತಿಳಿಸಿದ್ದಾನೆ. ಸದ್ಯಕ್ಕೆ ಪೊಲೀಸರು ಈ ಕುರಿತು ಐಪಿಸಿ ಸೆಕ್ಷನ್ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Police Jeep 1 1 medium

Share This Article
Leave a Comment

Leave a Reply

Your email address will not be published. Required fields are marked *