ಶಂಕರಾಚಾರ್ಯರ ಪುತ್ಥಳಿ ಮೇಲೆ ಮುಸ್ಲಿಂ ಸಂಘಟನೆಗಳ ಬಾವುಟ- ಹಿಂದೂ ಸಂಘಟಕರ ಆಕ್ರೋಶ

Public TV
2 Min Read
CKM Shankaracharya

-ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಸದಸ್ಯನ ಕೃತ್ಯದ ಆರೋಪ

ಚಿಕ್ಕಮಗಳೂರು: ಶೃಂಗೇರಿ ಪೀಠದ ಸಂಸ್ಥಾಪಕ ಶಂಕರಾಚಾರ್ಯರ ಪುತ್ಥಳಿಯ ಮೇಲೆ ಮುಸ್ಲಿಂ ಸಂಘಟನೆಗಳ ಬಾವುಟ ಹಾಕಿದ್ದು, ಕೋಮು ಸಾಮರಸ್ಯ ಕದಡಲು ಯತ್ನಿಸಿರುವ ಘಟನೆ ಜಿಲ್ಲೆಯ ಶೃಂಗೇರಿ ನಗರದಲ್ಲಿ ನಡೆದಿದೆ.

ಶೃಂಗೇರಿ ನಗರದ ಶಂಕರಾಚಾರ್ಯ ವೃತ್ತದಲ್ಲಿರುವ ಪುತ್ಥಳಿ ಮೇಳೆ ಕಿಡಿಗೇಡಿಗಳು ಬುಧವಾರ ರಾತ್ರಿ ಮುಸ್ಲಿಂ ಸಂಘಟನೆಗಳ ಬಾವುಟ ಹಾಕಿದ್ದರು. ಇಂದು ಬೆಳಗ್ಗೆ ಈ ಸನ್ನಿವೇಶವನ್ನ ನೋಡಿದ ಹಿಂದೂ ಸಂಘಟಕರು ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಶೃಂಗೇರಿಯಲ್ಲಿ ಪ್ರತಿಭಟನೆ ಕೂಡ ನಡೆಸಿದ್ದಾರೆ. ಇದರಿಂದ ನಗರದಲ್ಲಿ ಕೆಲ ಕಾಲ ಉದ್ವಿಗ್ನದ ಸ್ಥಿತಿ ಕೂಡ ನಿರ್ಮಾಣವಾಗಿತ್ತು.

sdpi

ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಡಿ.ಎನ್.ಜೀವರಾಜ್ ಕೂಡ ಅವರನ್ನ ಹಾಗೇ ಬಿಟ್ಟರೇ ಮುಂದೆ ನಿಮಗೂ ಹೀಗೇ ಮಾಡ್ತಾರೆ. ನೀವು ಅವರನ್ನ ಕೂಡಲೇ ಬಂಧಿಸದಿದ್ದರೆ ನಾವು ಪೊಲೀಸ್ ಠಾಣೆ ಮುಂದೆ ಕೂರುತ್ತೇವೆ ಎಂದರು. ಯಾರು ಎಂದು ಗೊತ್ತಿದೆ. ಕೂಡಲೇ ಅವರ ವಿರುದ್ಧ ಎಫ್.ಐ.ಆರ್. ಹಾಕಿ ಬಂಧಿಸುವಂತೆ ಆಗ್ರಹಿಸಿದರು. ಬೆಂಗಳೂರಿನಲ್ಲಿ ನಡೆದ ಗಲಭೆ ಇನ್ನು ಹಸಿ ಇರುವಾಗಲೇ ಈ ಘಟನೆಯಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಸ್ಥಳಕ್ಕೆ ಶೃಂಗೇರಿ ಪೆÇಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಪಟ್ಟಣ ಪಂಚಾಯಿತಿ ಸದಸ್ಯರ ತಂಡದ ಕೃತ್ಯ ಆರೋಪ : ಘಟನೆಗೆ ಸಂಬಂಧ ಪ್ರತಿಕ್ರಿಯೆ ನೀಡಿರೋ ಮಾಜಿ ಸಚಿವ ಡಿ.ಎನ್.ಜೀವರಾಜ್, ಘಟನೆಯ ಹಿಂದೆ ಎಸ್.ಡಿ.ಪಿ.ಐ ಸದಸ್ಯರು ಹಾಗೂ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ಸಿನ ಪಟ್ಟಣ ಪಂಚಾಯಿತಿ ಸದಸ್ಯರು ಆಗಿರುವ ರಫೀಕ್ ಅವರ ನಾಯಕತ್ವದಲ್ಲಿ ಈ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ. ಶಂಕರಾಚಾರ್ಯರ ಪ್ರತಿಮೆಯನ್ನ ಹಾನಿಗೊಳಿಸುವ ಹಾಗೂ ಅದರ ಮೇಲೆ ಧ್ವಜ ಹಾರಿಸುವಂತದ್ದು ಮತ್ತು ದೇಶ ದ್ರೋಹಿ ಚಟುವಟಿಕೆ ನಡೆಸಿರುವಂತಹುದರ ವಿರುದ್ಧವಾಗಿ ಇಂದು ಶೃಂಗೇರಿಯಲ್ಲಿ ಪ್ರತಿಭಟನೆ ಕೂಡ ನಡೆದಿದೆ. ಆತನನ್ನ ಬಂಧಿಸಲು ಸೂಕ್ತ ಕ್ರಮಗೊಳ್ಳುವಂತೆ ಆದೇಶಿಸಿದ್ದೇವೆ. ಪೊಲೀಸರು ಆತನನ್ನ ಬಂಧಿಸಿದ್ದಾರೆ. ಬಂಧನವಷ್ಟೆ ಅಲ್ಲ, ಆತನ ಮೇಲೆ ಸೂಕ್ತ ಕ್ರಮವಾಗಬೇಕು. ಎಸ್.ಡಿ.ಪಿ.ಐ ಸಂಘಟನೆ ಜೊತೆ ಕೈಜೋಡಿಸಿಸರುವುದರಿಂದ ಅವರನ್ನ ಪಟ್ಟಣ ಪಂಚಾಯಿತಿ ಸದಸ್ಯ ಸ್ಥಾನದಿಂದ ಅಮಾನತುಗೊಳಿಸಬೇಕೆಂದು ಭಕ್ತರು ಹಾಗೂ ಶೃಂಗೇರಿ ನಿವಾಸಿಗಳ ಪರವಾಗಿ ಆಗ್ರಹಿಸಿದ್ದಾರೆ.

ಘಟನೆ ಕುರಿತು ಸಚಿವ ಸಿ.ಟಿ.ರವಿ ಟ್ವೀಟ್ : ಶಂಕರಾಚಾರ್ಯರ ಪುತ್ಥಳಿ ಮೇಲೆ ಮುಸ್ಲಿಂ ಸಂಘಟನೆಗಳ ಬಾವುಟ ಹಾರಿಸಿರುವುದಕ್ಕೆ ಪ್ರವಾಸೋದ್ಯಮ ಸಚಿವ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಕೂಡ ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಸಿ.ಟಿ.ರವಿ, ಶೃಂಗೇರಿಯಲ್ಲಿ ಶಂಕರಾಚಾರ್ಯರ ಪ್ರತಿಮೆ ಮೇಲೆ ಎಸ್.ಡಿ.ಪಿ.ಐ. ಧ್ವಜ ಹಾರಿಸಿದ್ದಾರೆ ಎಂಬ ವಿಷಯ ನನ್ನ ಗಮನಕ್ಕೆ ಬಂದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲರೂ ಸಹಕರಿಸುವಂತೆ ಕೋರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *