ಪ್ರವೀಣ್ ಬೇಲೂರು ನಿರ್ದೇಶನದಲ್ಲಿ ಮೂಡಿ ಬರ್ತಿರೋ ‘ಹೇ ರಾಮ್’ ಚಿತ್ರ ಸೆಟ್ಟೇರಿದ್ದು, ನೈಜ ಘಟನೆ ಆಧಾರಿತ ಚಿತ್ರಕ್ಕೆ ನಟ ಡಾಲಿ ಧನಂಜಯ್ ಚಾಲನೆ ನೀಡಿದ್ದಾರೆ. ಚಿತ್ರಕ್ಕೆ ಫಸ್ಟ್ ಕ್ಲ್ಯಾಪ್ ಮಾಡುವ ಮೂಲಕ ಪ್ರವೀಣ್ ಬೇಲೂರು ಎರಡನೇ ವೆಂಚರ್ಗೆ ಶುಭ ಹಾರೈಸಿದ್ದಾರೆ.
‘ಹೇ ರಾಮ್’ ನೈಜ ಘಟನೆ ಆಧಾರಿತ ಸಿನಿಮಾವಾಗಿದ್ದು, ಈ ಚಿತ್ರದಲ್ಲಿ ಬಿಗ್‍ಬಾಸ್ ಮೂಲಕ ಖ್ಯಾತಿ ಗಳಿಸಿರುವ ಚೈತ್ರ ಕೋಟೂರ್ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಸೂಜಿದಾರ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಚೈತ್ರ ಕೋಟೂರ್ ಬಿಗ್ ಬಾಸ್ ಸೀಸನ್-7ರಲ್ಲಿ ಗಮನ ಸೆಳೆದಿದ್ರು. ಹೇ ರಾಮ್ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಚೈತ್ರ ಎಲ್ಲರನ್ನು ರಂಜಿಸಲು ಸಜ್ಜಾಗಿದ್ದಾರೆ. ಉಳಿದಂತೆ ನಟ ಧರ್ಮ ಚಿತ್ರದಲ್ಲಿ ತನಿಖಾಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಸಪ್ತಮಿ ಗೌಡ, ಸಚ್ಚಿನ್ ಪುರೋಹಿತ್, ನವೀನ್ ರಾಜ್, ಮಂಜುನಾಥ್, ಪೂರ್ಣ ಚಿತ್ರದ ಕಲಾ ಬಳಗದಲ್ಲಿದ್ದಾರೆ.
ಚಿತ್ರದ ನಿರ್ದೇಶನ, ನಿರ್ಮಾಣ ಎರಡೂ ಜವಾಬ್ದಾರಿಯನ್ನು ಪ್ರವೀಣ್ ಬೇಲೂರು ಹೊತ್ತಿದ್ದು, ಡಾ ವಿ ನಾಗೇಂದ್ರ ಪ್ರಸಾಧ್ ‘ಹೇ ರಾಮ್’ ಸಂಗೀತ ಮತ್ತು ಸಾಹಿತ್ಯ ಕೃಷಿ ಚಿತ್ರಕ್ಕಿರಲಿದೆ. ಸೆಟ್ಟೇರಿರುವ ಚಿತ್ರ ಕೆಲ ದಿನಗಳಲ್ಲಿ ಶೂಟಿಂಗ್ನಲ್ಲಿ ಬ್ಯುಸಿಯಾಗಲಿದ್ದು ಸದ್ಯ ನಾಯಕ ನಟನಿಗಾಗಿ ಹುಡುಕಾಟದಲ್ಲಿದೆ.