– 14 ಲಕ್ಷಕ್ಕೂ ಅಧಿಕ ರೋಗಿಗಳು ಗುಣಮುಖ
ನವದೆಹಲಿ: ಕೋವಿಡ್ 19 ಸಾಂಕ್ರಾಮಿಕ ರೋಗ ದೇಶದಲ್ಲಿ ದಿನದಿಂದ ದಿನಕ್ಕೆ ಕಂಬಂಧ ಬಾಹುವನ್ನು ಪಸರಿಸುತ್ತಿದ್ದು, ಕಳೆದ 24 ಗಂಟೆಯಲ್ಲಿ 61,537 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 20,88,612ಕ್ಕೆ ಏರಿಕೆಯಾಗಿದೆ.
Single-day spike of 61,537 cases and 933 deaths reported in India, in the last 24 hours.
The #COVID19 tally rises to 20,88,612 including 6,19,088 active cases, 14,27,006 cured/discharged/migrated & 42,518 deaths: Ministry of Health pic.twitter.com/1GbTIJPYEG
— ANI (@ANI) August 8, 2020
ಸೋಮವಾರ ಒಂದೇ ದಿನ 933 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ದೇಶದಲ್ಲಿ 6,19,088 ಸಕ್ರಿಯ ಪ್ರಕರಣಗಳಿದ್ದು, 14,27,006 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಇದೂವರೆಗೂ 42,518 ಮಂದಿ ಹೆಮ್ಮಾರಿ ಕೊರೊನಾ ವೈರಸ್‍ಗೆ ಬಲಿಯಾಗಿದ್ದಾರೆ.
ಆಗಸ್ಟ್ 2, 3, 5 ಮತ್ತು 6ರಂದು ದೇಶದಲ್ಲಿ ಇಡೀ ವಿಶ್ವದಲ್ಲೇ ಅತೀ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿತ್ತು. ಗುರುವಾರ ಭಾತರದಲ್ಲಿ ಕೊರೊನಾ ಪ್ರಕರಣ 2ಒ ಲಕ್ಷ ಗಡಿ ದಾಟಿತ್ತು. ಈ ಮೂಲಕ ಯುಎಸ್‍ಎ ಹಾಗೂ ಬೆಜಿಲ್ ಗಿಂತ ಭಾರತದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದೆ. ಸದ್ಯ ದೇಶದಲ್ಲಿ ಅನ್‍ಲಾಕ್ 3.ಒ ನಡೆಯುತ್ತಿದೆ.