ಲಾಸ್ ಎಂಜಲೀಸ್‍ನಲ್ಲಿದ್ರೂ ಸನ್ನಿ ರಕ್ಷಾ ಬಂಧನ ಆಚರಣೆ- ಮಕ್ಕಳಿಂದ ಸಂಭ್ರಮದ ರಾಖಿ ಹಬ್ಬ

Public TV
2 Min Read
sunny leon

– ಮಕ್ಕಳು ರಾಖಿ ಕಟ್ಟುವ ಚಿತ್ರ ನೋಡಿ ನೆಟ್ಟಿಗರು ಫಿದಾ

ನವದೆಹಲಿ: ನಟಿ ಸನ್ನಿ ಲಿಯೋನ್ ಕ್ಯಾಲಿಫೋರ್ನಿಯಾದ ಲಾಸ್ ಎಂಜಲೀಸ್  ನಲ್ಲಿದ್ದರೂ ರಕ್ಷಾ ಬಂಧನ ಆಚರಿಸಿದ್ದು, ತಮ್ಮ ಮಕ್ಕಳಿಂದ ಪರಸ್ಪರ ರಾಖಿ ಕಟ್ಟಿಸಿದ್ದಾರೆ. ಈ ಫೋಟೋಗಳನ್ನು ನೋಡಿದರೆ ನಿಜಕ್ಕೂ ಹೃದಯ ತುಂಬಿ ಬರುತ್ತೆ.

sunny leone

39 ವರ್ಷದ ಬಾಲಿವುಡ್ ನಟಿ ಸನ್ನಿ ಲಿಯೋನ್ ಮೇನಲ್ಲಿ ಕುಟುಂಬ ಸಮೇತರಾಗಿ ಲಾಸ್ ಎಂಜಲೀಸ್ ಗೆ ತೆರಳಿದ್ದು, ಅಲ್ಲಿಯೇ ರಕ್ಷಾ ಬಂಧನವನ್ನು ಸುಂದರವಾಗಿ ಆಚರಿಸಿದ್ದಾರೆ. ಕ್ಯಾಲಿಫೋರ್ನಿಯಾದ ಲಾಸ್ ಎಂಜೆಲ್ಸ್ ಗೆ ಹೋದಾಗಿನಿಂದ ಸನ್ನಿ ಲಿಯೋನ್ ಇನ್‍ಸ್ಟಾಗ್ರಾಮ್ ಮೂಲಕ ಅಪ್‍ಡೇಟ್ ನೀಡುತ್ತಿದ್ದು, ಇದೀಗ ರಕ್ಷಾ ಬಂಧನ ಆಚರಿಸಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Sunny Leone

ತನ್ನ ಮೂರು ಮಕ್ಕಳು ಪರಸ್ಪರ ರಾಖಿ ಕಟ್ಟುವ ಚಿತ್ರವನ್ನು ಹಂಚಿಕೊಂಡಿದ್ದು, ತುಂಬಾ ಕ್ಯೂಟ್ ಆಗಿದೆ. ಮಗಳು ನಿಶಾ ಹಾಗೂ ಅವಳಿ ಮಕ್ಕಳಾದ ಆಶೆರ್ ಹಾಗೂ ನೋವಾ ರಕ್ಷಾ ಬಂಧನ ಆಚರಿಸಿರುವ ಚಿತ್ರಗಳು ಸಖತ್ ವೈರಲ್ ಆಗಿವೆ. ಮೊದಲ ಚಿತ್ರ ತುಂಬಾ ಕ್ಯೂಟ್ ಆಗಿದ್ದು, ನಿಶಾ ಮುಗ್ದ ನಗುವಿನೊಂದಿಗೆ ತನ್ನ ಸಹೋದರರಿಗೆ ರಾಖಿ ಕಟ್ಟುತ್ತಿರುವುದು ಗಮನ ಸೆಳೆಯುತ್ತದೆ.

sunny new

ಪೋಸ್ಟ್ ಗೆ ಸಾಲುಗಳನ್ನು ಬರೆದಿರುವ ಸನ್ನಿ ಲಿಯೋನ್, ಅಲ್ಲಿರುವ ನಮ್ಮೆಲ್ಲ ಸಹೋದರ, ಸಹೋದರಿಯರಿಗೆ ರಕ್ಷಾ ಬಂಧನದ ಶುಭಾಶಯಗಳು. ಲವ್ ಡೇನಿಯಲ್, ನಿಶಾ, ಆಶೆರ್, ನೋವಾ ಹಾಗೂ ನಾನು ಎಂದು ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 

View this post on Instagram

 

Happy Raksha Bandhan to all our brothers and sisters out there! Love @dirrty99 Nisha, Asher and Noah and ME!

A post shared by Sunny Leone (@sunnyleone) on

ನಿಶಾ ತನ್ನ ತಂದೆ ಡೇನಿಯಲ್ ವೆಬರ್‍ಗೂ ರಾಖಿ ಕಟ್ಟಿದ್ದು, ಚಿತ್ರ ಗಮನ ಸೆಳೆದಿದೆ. ಸನ್ನಿ ಲಿಯೋನ್ ಹಾಗೂ ಡೇನಿಯಲ್ ನಿಶಾಳನ್ನು 2017ರಲ್ಲಿ ದತ್ತು ಪಡೆದಿದ್ದಾರೆ. ನೋವಾ ಹಾಗೂ ಆಶೆರ್‍ನನ್ನು ಬಾಡಿಗೆ ತಾಯ್ತನದ ಮೂಲಕ ಪಡೆದಿದ್ದಾರೆ. ಸನ್ನಿ ತಮ್ಮ ಮಕ್ಕಳನ್ನು ಹೆಚ್ಚು ಪ್ರೀತಿಸುತ್ತಾರೆ. ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಹ ಅಪ್‍ಡೇಟ್ ನೀಡುತ್ತಿರುತ್ತಾರೆ. ಮೂರು ವರ್ಷದ ಹಿಂದೆ ನಿಶಾ ಮನೆಗೆ ಆಗಮಿಸಿದಾಗ ಸಹ ಸನ್ನಿ ಲಿಯೋನ್ ಸಂಭ್ರಮಿಸಿದ್ದರು. ಈ ಕುರಿತು ಫೋಟೋಗಳನ್ನು ಹಂಚಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *