ನನಗೆ ಯಾವುದೇ ನೋಟಿಸ್‌ ಬಂದಿಲ್ಲ – ಬಿಎಂಸಿಆರ್‌ಐಗೆ ಪತ್ರ ಬರೆದ ಗಿರಿಧರ್‌ ಕಜೆ

Public TV
1 Min Read
giridhar kaje corona covid 19

ಬೆಂಗಳೂರು: ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ(ಬಿಎಂಸಿಆರ್‌ಐ) ನನಗೆ ಯಾವುದೇ ನೋಟಿಸ್‌ ನೀಡಿಲ್ಲ ಎಂದು ಆಯುರ್ವೇದ ವೈದ್ಯ ಗಿರಿಧರ್ ಕಜೆ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಬಿಎಂಸಿಆರ್‌ಐಯ ನೈತಿಕ ಸಮಿತಿಯ ಅಧ್ಯಕ್ಷರು ನೀಡಿದ್ದಾರೆ ಎನ್ನಲಾದ ನೋಟಿಸ್‌ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಈ ನೋಟಿಸಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವಂತೆ ಬಿಎಂಸಿಆರ್‌ಐಗೆ ಗಿರಿಧರ್ ಕಜೆ ಪತ್ರ ಬರೆದಿದ್ದಾರೆ.

giridhar kaje notice corona 1

ಜುಲೈ 17 ರಂದು ಬಿಎಂಸಿಆರ್‌ಐ ನೈತಿಕ ಸಮಿತಿ ನೋಟಿಸ್‌ ನೀಡಿದೆ ಎನ್ನಲಾದ ಕಾಪಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ನನಗೆ ಯಾವುದೇ ನೋಟಿಸ್‌ ಬಂದಿಲ್ಲ. ಇದರಿಂದಾಗಿ ನನಗೆ ಮತ್ತು ನನ್ನ ಆತ್ಮೀಯರಿಗೆ ಬಹಳ ಬೇಸರವಾಗಿದೆ. ಹೀಗಾಗಿ ಈ ನೋಟಿಸ್‌ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಪತ್ರ ಬರೆದಿದ್ದಾರೆ.

giridhar kaje notice corona

ಹರಿದಾಡುತ್ತಿರುವ ನೋಟಿಸ್‌ನಲ್ಲಿ ಏನಿದೆ?
ಕೋವಿಡ್‌-19 ಪಾಸಿಟಿವ್‌ ರೋಗಿಗಳಿಗೆ ನಿರ್ದಿಷ್ಟ ಆರೈಕೆಯ ಜೊತೆಗೆ ನಿಮ್ಮ ಭೌಮ್ಯ ಮತ್ತು ಸಾಥ್ಮಿಯಾ ಎಂಬ ಎರಡು ಮಾತ್ರೆಗಳ ದಕ್ಷತೆ ಮತ್ತು ಸುರಕ್ಷತೆಯನ್ನು ಮೌಲ್ಯಮಾಪನ ನಡೆಸಲು ಕ್ಲಿನಿಕಲ್‌ ಟ್ರಯಲ್‌ಗಾಗಿ ನೀವು ಬಿಎಂಸಿಆರ್‌ಐನ್ನು ಸಂಪರ್ಕ ಮಾಡಿದ್ದೀರಿ.

ಈ ಪ್ರಯೋಗ ಪ್ರಯೋಗ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಅಷ್ಟೇ ಅಲ್ಲದೇ ಬಿಎಂಸಿಆರ್‌ಐನ ನೈತಿಕ ಸಮಿತಿಗೆ ಯಾವುದೇ ಫಲಿತಾಂಶಗಳನ್ನು ಸಲ್ಲಿಸಿಲ್ಲ ಎಂಬುದು ನಿಮಗೆ ತಿಳಿದಿರಬಹುದು. ಹೀಗಿದ್ದರೂ ನೀವು ಪ್ರಯೋಗ ಯಶಸ್ವಿಯಾಗಿದೆ ಎಂದು ಸಾರ್ವಜನಿಕವಾಗಿ ಹೇಳಿಕೊಂಡಿದ್ದೀರಿ. ಈ ಹೇಳಿಕೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಈ ರೀತಿಯ ಸೂಕ್ಷ್ಮ ಮಾಹಿತಿಯನ್ನು ತಿಳಿಸುವ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮತಿ ಪಡೆದಿರಬೇಕು ಎಂಬುದು ನಿಮಗೆ ಗೊತ್ತಿದೆ.

VICTORIA 1

ಇದು ಬಹಳ ಸೂಕ್ಷ್ಮ ವಿಚಾರವಾಗಿರುವ ಕಾರಣ ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ವಾಸ್ತವ ಪರಿಸ್ಥಿತಿಯ ಬಗ್ಗೆ ನೀವು ತಕ್ಷಣವೇ ಮಾಧ್ಯಮಗಳನ್ನು ಕರೆದು ಸ್ಪಷ್ಟನೆಯನ್ನು ನೀಡಿ. ಒಂದು ವೇಳೆ ತಪ್ಪಿದ್ದಲ್ಲಿ ಜನರಿಗೆ ತಪ್ಪು ಮಾಹಿತಿ ನೀಡಿದ್ದಕ್ಕೆ ಈ ಪ್ರಯೋಗವನ್ನು ನಿಲ್ಲಿಸಬೇಕಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *