ಲಕ್ನೋ: ಪತಿಯೇ ತನ್ನ ಪತ್ನಿಯನ್ನು ಅಪಹರಿಸಿ ಬಳಿಕ ಸಹೋದ್ಯೋಗಿಗಳ ಜೊತೆ ಸೇರಿ ಎರಡು ದಿನಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿ ರೈಲ್ವೇ ಟ್ರ್ಯಾಕ್‍ಗೆ ಬಿಸಾಕಿರುವ ದುರಂತ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.
ಈ ಘಟನೆ ಮಹಿಳೆಯ ತಾಯಿ ಪೊಲೀಸರಿಗೆ ದೂರು ನಿಡಿದ ಬಳಿಕ ಬೆಳಕಿಗೆ ಬಂದಿದೆ. 2016 ಏಪ್ರಿಲ್ 24 ರಂದು ಮಹಿಳೆಗೆ ಸರ್ಕಾರಿ ಅಂಬುಲೆನ್ಸ್ ಸರ್ವಿಸ್ ನಲ್ಲಿ ಕೆಲಸ ಮಾಡುವ ವ್ಯಕ್ತಿಯ ಜೊತೆ ಮದುವೆಯಾಗಿತ್ತು. ಮದುವೆಯಾದ ಮರುದಿನದಿಂದಲೇ ಪತಿ ವರದಕ್ಷಿಣೆಗಾಗಿ ಪತ್ನಿಗೆ ಮಾನಸಿಕ ಹಿಂಸೆ ನೀಡಲು ಶುರು ಮಾಡಿದ್ದಾನೆ. ಅಂತೆಯೇ 2018ರಲ್ಲಿ ಗರ್ಭಿಣಿಯಾಗಿದ್ದರೂ ಪತಿ, ಪತ್ನಿಗೆ ಮನಬಂದಂತೆ ಥಳಿಸಿದ್ದನು. ಪರಿಣಾಮ ಆಕೆಗೆ ಗರ್ಭಪಾತವಾಗಿದ್ದು, ಇದರಿಂದ ನೊಂದು ಆಕೆ ಪೊಲೀಸರಿಗೆ ದೂರು ನೀಡಿದ್ದಳು.
ಇದಾದ ಬಳಿಕ 2020ರ ಜುಲೈ 24ರಂದು ಕೌನ್ಸಿಲಿಂಗ್ ಸೆಂಟರ್ ಬಳಿಯಿಂದ ಏಕಾಏಕಿ ಆಕೆಯನ್ನು ಏಕಾಏಕಿ ಕಿಡ್ನಾಪ್ ಮಾಡಲಾಗಿತ್ತು. ಅಪಹರಿಸಿದ ಬಳಿಕ ಮಹಿಳೆಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಅಲ್ಲಿ ಆಕೆಯ ಪತಿ ನಿರಂತರ 2 ದಿನಗಳ ಕಾಲ ಅತ್ಯಾಚಾರವೆಸಗಿದ್ದಾನೆ. ಆ ಬಳಿಕ ಆತನ ಮೂವರು ಸಹೋದ್ಯೋಗಿಗಳು ಕೂಡ ಆಕೆಯ ಮೇಲೆ ಎರಗಿದ್ದಾರೆ. ಈ ಸಂದರ್ಭದಲ್ಲಿ ಅವರು ಮದ್ಯಪಾನ ಮಾಡಿದ್ದರು ಎನ್ನಲಾಗಿದೆ.
ಕಾಮುಕರು ತಮ್ಮ ಕಾಮತೃಷೆ ತೀರಿಸಿಕೊಂಡ ಬಳಿಕ ಜುಲೈ 26ರಂದು ಮಹಿಳೆಯನ್ನು ಶಾಹಿ ರೈಲ್ವೇ ನಿಲ್ದಾಣದ ಬಳಿ ಬಿಸಾಕಿ ಹೋಗಿದ್ದಾರೆ. ಘಟನೆ ಸಂಬಂಧ ನಾಲ್ವರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಎಫ್‍ಐಆರ್ ನಲ್ಲಿ ಸಾಮೂಹಿಕ ಅತ್ಯಾಚಾರದ ಪ್ರಕರಣ ದಾಖಲಿಸಿಲು ಹಿಂದೇಟು ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತ ಮಹಿಳೆ ಪೊಲೀಸ್ ಅಧೀಕ್ಷಕರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.